ಮಡಿಕೇರಿ, ನ. ೩೦: ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ೧೦ನೇ ವರ್ಷದ ಡಾ. ಅಖಿಲ್ ಕುಟ್ಟಪ್ಪ- ಅಶ್ವತ್ ಅಯ್ಯಪ್ಪ ಸ್ಮರಣಾರ್ಥ ಲೆದರ್‌ಬಾಲ್ ಕ್ರಿಕೆಟ್ ಟೂರ್ನಿಯ ಅಂತಿಮ ಪಂದ್ಯ ತಾ.೧೦ರಂದು (ಇಂದು) ಮಡಿಕೇರಿ ಕೊಡಗು ವಿದ್ಯಾಲಯ ಎ ಹಾಗೂ ಮಡಿಕೇರಿ ಸಂತ ಜೋಸೆಫರ ತಂಡಗಳ ನಡುವೆ ನಡೆಯಲಿದೆ.

ಶನಿವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯವು ಕೊಡಗು ವಿದ್ಯಾಲಯ ಹಾಗೂ ವೀರಾಜಪೇಟೆ ಪ್ರಗತಿ ಶಾಲೆ ತಂಡಗಳ ನಡುವೆ ನಡೆಯಿತು. ಮೊದಲು ಬ್ಯಾಟ್ ಮಾಡಿದ ಕೊಡಗು ವಿದ್ಯಾಲಯ ತಂಡ ೨೦ ಓವರ್‌ಗಳಲ್ಲಿ ೧೧೪ ರನ್‌ಗಳನ್ನು ಭಾರಿಸಿತು. ಇದನ್ನು ಬೆನ್ನಟ್ಟಿದ ಪ್ರಗತಿ ಶಾಲೆ ತಂಡ ೯೫ ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಕೊಡಗು ವಿದ್ಯಾಲಯ ತಂಡದ ಪರ ನಿಲೇಶ್ ೩೪ ರನ್ ಗಳಿಸಿ ೨ ವಿಕೆಟ್‌ಗಳನ್ನು ಪಡೆದುಕೊಂಡರು ಹಾಗೂ ದೇವವ್ರತ್ ೩ ವಿಕೆಟ್‌ಗಳನ್ನು ಪಡೆದುಕೊಂಡರು. ಪ್ರಗತಿ ಶಾಲೆಯ ಯಶಸ್ ೪೨ ರನ್ ಗಳಿಸಿದರು.

ಎರಡನೆಯ ಸೆಮಿಫೈನಲ್ ಮಡಿಕೇರಿ ಸಂತ ಜೋಸೆಫರ ತಂಡ ಹಾಗೂ ಗೋಣಿಕೊಪ್ಪ ಕ್ಯಾಲ್ಸ್ ತಂಡಗಳ ನಡುವೆ ನಡೆಯಿತು. ಇದರಲ್ಲಿ ಮೊದಲು ಬ್ಯಾಟ್ ಮಾಡಿದ ಸಂತ ಜೋಸೆಫರ ತಂಡ ೨೦ ಓವರ್‌ಗಳಲ್ಲಿ ೧೨೦ ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಕ್ಯಾಲ್ಸ್ ತಂಡ ೨೦ ಓವರ್‌ಗಳಲ್ಲಿ ೧೨೦ ರನ್ ಗಳಿಸಿ ೧೧ ರನ್‌ಗಳ ಅಂತರದಿAದ ಸೋಲನುಭವಿಸಿತು. ಸಂತ ಜೋಸೆಫರ ತಂಡದ ಹಾರ್ದಿಕ್ ೫೧ ರನ್ ಗಳಿಸಿ ೨ ವಿಕೆಟ್ ಪಡೆದುಕೊಂಡರು ಹಾಗೂ ರೋಹನ್ ೩೧ ರನ್ ಗಳಿಸಿದರು.

ತಾ.೧ ರಂದು (ಇಂದು) ಕೊಡಗು ವಿದ್ಯಾಲಯ ಹಾಗೂ ಸಂತ ಜೋಸೆಫರ ತಂಡಗಳ ನಡುವೆ ಅಂತಿಮ ಪಂದ್ಯ ಬೆ. ೯:೩೦ ಕ್ಕೆ ನಡೆಯಲಿದೆ.