ಮಡಿಕೇರಿ, ನ. ೩೦: ವೀರಾಜಪೇಟೆ ಬಳಿಯ ಆರ್ಜಿ ಗ್ರಾಮದ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಮಮತ ಅವರನ್ನು ಅಮಾನತ್ತುಗೊಳಿಸಿ ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕssರು ಹಾಗೂ ಶಿಸ್ತು ಪ್ರಾಧಿಕಾರಿ ಜೀಲಾನಿ ಹೆಚ್ ಮೊಕಾಶಿ ಆದೇಶ ಹೊರಡಿಸಿದ್ದಾರೆ. ಜು. ೭ ರಂದು ವಸತಿ ಶಾಲೆಗೆ ಶಾಸಕ, ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ದಿಢೀರ್ ಭೇಟಿ ನೀಡಿದ್ದ ಸಂದರ್ಭ ವಸತಿ ನಿಲಯದ ಅಡುಗೆ ಕೋಣೆ ಅಶುಚಿತ್ವದಿಂದ ಕೂಡಿರುವುದು, ಕಿಟಕಿಗಳು ಹಾಳಾಗಿರುವುದು, ಶೌಚಾಲಯದಲ್ಲಿ ಶುಚಿತ್ವ ಇಲ್ಲದಿರುವುದು, ವಿದ್ಯಾರ್ಥಿಗಳು ಬಳಸುವ ಹಾಸಿಗೆ ಸಮರ್ಪಕವಾಗಿಲ್ಲದಿರುವುದು, ಹೊಸ ಹಾಸಿಗೆ ವಿತರಣೆ ಮಾಡದಿರುವುದು, ವಸ್ತುಗಳ ದಾಸ್ತನು, ವಿತರಣೆ ಕುರಿತು ಮಾಹಿತಿ ನಿರ್ವಹಣೆ ಮಾಡದ ಬಗ್ಗೆ ಹಾಗೂ ಸಹೋದ್ಯೋಗಿಗಳ ನಡುವೆ ಬಾಂಧವ್ಯ ಕೊರತೆ ಕಂಡುಬAದಿತ್ತು.
ಇದರೊಂದಿಗೆ ಕಳೆದ ೬ ವರ್ಷಗಳಿಂದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ ಪ್ರಾಂಶುಪಾಲರು ಸಮಸ್ಯೆಗಳ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಾರದೆ ಪರಿಹಾರ ಕ್ರಮಕೈಗೊಳ್ಳದೆ ಲಕ್ಷಾಂತರ ರೂಪಾಯಿ ಹಣ ಪೋಲಾಗು ವಂತೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬAದಿದೆ ಎಂದು ಪೊನ್ನಣ್ಣ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಪತ್ರದ ಮುಖೇನ ಗಮನಕ್ಕೆ ತಂದಿದ್ದರು.
ಅನಂತರ ನಿರ್ದೇಶನಾಲಯದ ಮಮತ ಅವರ ಬಳಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿತ್ತು. ಇದಕ್ಕೆ ಉತ್ತರವನ್ನು ಮಮತ ನೀಡಿದ್ದರು. ಅದನ್ನು ಪರಿಶೀಲಿಸಿದ ಸಂದರ್ಭ ಒಪ್ಪಬಹುದಾದ ಅಂಶಗಳು ಹಾಗೂ ಪೂರಕ ದಾಖಲೆ ಕಂಡುಬಾರದ ಹಿನ್ನೆಲೆ ಕರ್ತವ್ಯಲೋಪ ಎಸಗಿ ಸರಕಾರಿ ನೌಕರನಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿರುವುದು ಕಂಡುಬAದ ಹಿನ್ನೆಲೆ ಮಮತ ಅವರನ್ನು ಇಲಾಖೆ ವಿಚಾರಣೆಗೆ ಕಾಯ್ದಿರಿಸಿ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.