ವೀರಾಜಪೇಟೆ, ನ. ೩೦: ಕೊಡವ ಸಮಾಜಗಳ ಒಕ್ಕೂಟದ ಅಧೀನದಲ್ಲಿ ಕೊಡವನಮ್ಮೆ ಅಂಗವಾಗಿ ವಿವಿಧ ಕೊಡವ ಸಮಾಜಗಳ ನಡುವೆ ಬಾಳುಗೋಡುವಿನಲ್ಲಿ ನಡೆಯುತ್ತಿರುವ ಹಾಕಿ ಪಂದ್ಯಾಟದಲ್ಲಿ ಅಮ್ಮತ್ತಿ ಹಾಗೂ ಮಡಿಕೇರಿ ಕೊಡವ ಸಮಾಜಗಳು ಅಂತಿಮ ಹಣಾಹಣಿ ನಡೆಸಲಿದೆ.
ಇಂದು ನಡೆದ ಮೊದಲ ಸೆಮಿಫೈನಲ್ ಪಂದ್ಯಾಟದಲ್ಲಿ ಅಮ್ಮತ್ತಿ ಕೊಡವ ಸಮಾಜ ತಂಡವು ೫-೩ ಗೋಲುಗಳಿಂದ ಆರಾಯಿರನಾಡು ಕೊಡವ ಸಮಾಜ ತಂಡವನ್ನು ಟೈಬ್ರೇಕರ್ನಲ್ಲಿ ಪರಾಭವಗೊಳಿಸಿತು. ನಿಗದಿತ ಅವಧಿಯಲ್ಲಿ ಎರಡು ತಂಡಗಳು ೧-೧ ಸಮಬಲ ಸಾಧಿಸಿತು. ಅಮ್ಮತ್ತಿ ತಂಡದ ಐನಂಡ ಆಕಾಶ್ ೨೭ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ೫೯ನೇ ನಿಮಿಷದಲ್ಲಿ ಆರಾಯಿರನಾಡು ತಂಡದ ಸೋಮೆಯಂಡ ಅಪ್ಪಚ್ಚು ಗೋಲು ದಾಖಲಿಸಿ ಗೋಲಿನ ಅಂತರವನ್ನು ಸರಿಗಟ್ಟಿದರು. ಇತ್ತಂಡಗಳು ಸಮಬಲ ಸಾಧಿಸಿದ ಕಾರಣ ತೀರ್ಪುಗಾರರು ಟೈಬ್ರೇಕರ್ ನಿಯಮವನ್ನು ಅಳವಡಿಸಿದರು. ಆರಾಯಿರ ತಂಡದ ಪರ ಚೇಂದAಡ ಪೊನ್ನಣ್ಣ, ದಾಸಂಡ ಅಚ್ಚಯ್ಯ ಗೋಲು ದಾಖಲಿಸಿದರೆ, ಅಮ್ಮತ್ತಿ ತಂಡದ ಪರ ಐನಂಡ ಪೂವಣ್ಣ, ನೆಲ್ಲಮಕ್ಕಡ ಸೋಮಯ್ಯ, ಮುಲ್ಲೆಂಗಡ ನಿರನ್ ಗೋಲು ದಾಖಲಿಸಿ ಫೈನಲ್ಸ್ಗೆ ಅರ್ಹತೆ ಪಡೆದುಕೊಂಡಿತು.
ಎರಡನೇ ಸೆಮಿಫೈನಲ್ಸ್ನಲ್ಲಿ ಮಡಿಕೇರಿ ಕೊಡವ ಸಮಾಜ ತಂಡ ೧-೦ ಗೋಲಿನಿಂದ ಮೂರ್ನಾಡು ಕೊಡವ ಸಮಾಜ ತಂಡವನ್ನು ಪರಾಭವ ಗೊಳಿಸಿತು. ಆರಂಭದಿAದಲೇ ಸಂಘಟಿತ ಆಟಕ್ಕೆ ಒತ್ತು ನೀಡಿತು. ಪಂದ್ಯದ ಕೊನೆಯ ನಿಮಿಷದಲ್ಲಿ ಮಡಿಕೇರಿ ತಂಡದ ಅಂಜಪರವAಡ ಅಭಿನ್ ಚಿಟ್ಟಿಯಪ್ಪ ನೀಡಿದ ಉತ್ತಮ ಪಾಸನ್ನು ಬಳಸಿಕೊಂಡ ಪೆಮ್ಮಂಡ ಸೋಮಣ್ಣ ಗೋಲಾಗಿ ಪರಿವರ್ತಿಸಿ ಗೆಲುವಿನ ರೂವಾರಿಯಾದರು.
ಪಂದ್ಯಾಟದ ತೀರ್ಪುಗಾರರಾಗಿ ಅಂತರರಾಷ್ಟಿçÃಯ ತೀರ್ಪುಗಾರ ಅಚ್ಚಕಾಳೆರ ಪಳಂಗಪ್ಪ. ಬಲ್ಲಚಂಡ ನಾಣಯ್ಯ, ಚೆಕ್ಕೆರ ಆದರ್ಶ್, ನೆಲ್ಲಮಕ್ಕಡ ಪವನ್, ತಾಂತ್ರಿಕ ಸಮಿತಿಯಲ್ಲಿ ಕನ್ನಂಬಿರ ಚಿಣ್ಣಪ್ಪ, ತಾಂತ್ರಿಕ ನಿರ್ದೇಶಕರಾಗಿ ಮಾದೆಯಂಡ ಸಂಪಿ ಪೂಣಚ್ಚ ಕಾರ್ಯನಿರ್ವಹಿಸಿದರು. ಚೆಪ್ಪುಡಿರ ಕಾರ್ಯಪ್ಪ ಪಂದ್ಯಾಟದ ವೀಕ್ಷಕ ವಿವರಣೆ ನೀಡಿದರು.
ಶನಿವಾರ ನಡೆದ ಪುರುಷರ ಹಾಗೂ ಮಹಿಳೆಯರ ಹಗ್ಗ ಜಗ್ಗಾಟದಲ್ಲಿ
(ಮೊದಲ ಪುಟದಿಂದ) ೧೨ ಕೊಡವ ಸಮಾಜಗಳು ಭಾಗವಹಿಸಿದ್ದವು. ಪುರುಷರ ವಿಭಾಗದಲ್ಲಿ ಮೂರ್ನಾಡು ಕೊಡವ ಸಮಾಜ ಹಾಗೂ ನಾಪೋಕ್ಲು ಕೊಡವ ಸಮಾಜ, ಮಹಿಳೆಯರ ಹಗ್ಗಜಗ್ಗಾಟದಲ್ಲಿ ನಾಪೋಕ್ಲು ಹಾಗೂ ಟಿ ಶೆಟ್ಟಿಗೇರಿ ಕೊಡವ ಸಮಾಜಗಳ ನಡುವೆ ಭಾನುವಾರ ಹಾಕಿ ಫೈನಲ್ಸ್ ಪಂದ್ಯಾಟ ಮುಗಿದ ಬಳಿಕ ಸ್ಪರ್ಧೆ ನಡೆಯಲಿದೆ.
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಮಡಿಕೇರಿ ಕೊಡವ ಸಮಾಜದ ಪುತ್ತರಿರ ನಂಜಪ್ಪ(ಪ್ರ), ನಾಪೋಕ್ಲು ಕೊಡವ ಸಮಾಜದ ಅಜ್ಜೆಟಿರ ಗೌತಮ್ (ದ್ವಿ), ಮಡಿಕೇರಿ ಕೊಡವ ಸಮಾಜದ ಚಿಯಕ್ಪೂಳಂಡ ಮನೋಜ್ (ತೃ) ಸ್ಥಾನ ಪಡೆದುಕೊಂಡರು. ೧೦೦ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.
ಭಾರದ ಗುಂಡು ಎಸೆತ : ಪುರುಷರ ವಿಭಾಗದಲ್ಲಿ ನಾಪೋಕ್ಲು ಕೊಡವ ಸಮಾಜದ ಮೂಡೆರ ಪೊನ್ನಪ್ಪ (ಪ್ರ), ಆನೆ ಬೆಪ್ಪುನಾಡು ಕೊಡವ ಸಮಾಜದ ಕಾಣತಂಡ ರೋಷನ್ (ದ್ವಿ), ಮಡಿಕೇರಿ ಕೊಡವ ಸಮಾಜದ ಹೊಟ್ಟೆಯಂಡ ಸಚಿನ್ (ತೃ), ಮಹಿಳೆಯರ ವಿಭಾಗದಲ್ಲಿ ವೀರಾಜಪೇಟೆ ಕೊಡವ ಸಮಾಜದ ಮನೆಯಪಂಡ ದೇಚಮ್ಮ ಕಾಳಪ್ಪ (ಪ್ರ), ಮೂರ್ನಾಡು ಕೊಡವ ಸಮಾಜದ ಬೊಪ್ಪಂಡ ಕುಸುಮಾ (ದ್ವಿ), ಕುಟ್ಟ ಕೊಡವ ಸಮಾಜದ ದೇಯಂಡ ಶೀತಲ್(ತೃ) ವಿಜೇತರಾದರು.
ಕೊಡವ ನಮ್ಮೆಯಲ್ಲಿ ಇಂದು
ಕೊಡವ ನಮ್ಮೆಯ ಅಂತಿಮ ದಿನ ಕಾರ್ಯಕ್ರಮ ಡಿ. ೧ ರಂದು (ಇಂದು) ನಡೆಯಲಿದೆ. ಅಂತರ ಕೊಡವ ಸಮಾಜಗಳ ನಡುವೆ ಸಾಂಸ್ಕೃತಿಕ ಸ್ಪರ್ಧೆ, ಹಾಕಿ ಫೈನಲ್, ಹಗ್ಗಜಗ್ಗಾಟ, ಸಭಾ ಕಾರ್ಯಕ್ರಮದೊಂದಿಗೆ ಕಾರ್ಯಕ್ರಮಕ್ಕೆ ತೆರೆಬೀಳಲಿದೆ.