ಮಡಿಕೇರಿ, ನ. ೩೦: ಮಹಿಳೆಯೊಬ್ಬರು ನಮ್ಮ ವೈಯಕ್ತಿಕ ಫೇಸ್‌ಬುಕ್ ಖಾತೆಯಲ್ಲ್ಲಿ ಅಪ್‌ಲೋಡ್ ಮಾಡಿದ್ದ ಭಾವಚಿತ್ರಕ್ಕೆ ಅಶ್ಲೀಲ ಕಮೆಂಟ್ ಹಾಕಿದ್ದ ಆರೋಪಿಯನ್ನು ಸೆನ್ ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರು ನಿವಾಸಿ ಗಂಗಧಾರ ಜಮಾದಾರಕನಿ (೨೨) ಬಂಧಿತ ಯುವಕ. ಕೊಡವ ಸಮುದಾಯದ ಮಹಿಳೆಯೊಬ್ಬರು ತಮ್ಮ ಫೇಸ್‌ಬುಕ್‌ನಲ್ಲಿ ಖಾತೆಯಲ್ಲಿ ಅಪ್‌ಲೋಡ್ ಮಾಡಿದ್ದ ಭಾವಚಿತ್ರಕ್ಕೆ ‘ಬೆಳಗಾವಿ ಜಿಎಂಜಿ’ ಎಂಬ ಖಾತೆಯಿಂದ ಅಶ್ಲೀಲ ಕಮೆಂಟ್ ಹಾಕಿರುವ ಕುರಿತು ಮಡಿಕೇರಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಪತ್ತೆ ಮಾಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
(ಮೊದಲ ಪುಟದಿಂದ) ಸೆನ್ ಠಾಣೆ ಡಿವೈಎಸ್‌ಪಿ ರವಿ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹರ್ದತೆಗೆ ಧಕ್ಕೆ ತರುವ ಯಾವುದೇ ರೀತಿಯ ಸಂದೇಶ, ಭಾವಚಿತ್ರ, ವೀಡಿಯೋ ಹಂಚಿಕೊಳ್ಳುವ ಮುನ್ನ ಸತ್ಯಸತ್ಯತೆ ಪರಿಶೀಲಿಸಬೇಕು. ಜಿಲ್ಲಾ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಿದ್ದು, ಕೋಮು ಸೌಹರ್ದತೆ ಕದಡುವ ವಿಚಾರ ಹರಿಬಿಟ್ಟರೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ಮೂಲಕ ಎಚ್ಚರಿಸಿದೆ.