ಮಡಿಕೇರಿ, ನ. ೩೦: ಹೆಬ್ಬಟ್ಟಗೇರಿ ಗ್ರಾಮದ ಇಂದ್ರಪ್ರಸ್ಥ ನಗರದಲ್ಲಿರುವ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ತಾ.೧ರಂದು (ಇಂದು) ೭ನೇ ವರ್ಷದ ಕೋಲೋತ್ಸವ ನಡೆಯಲಿದೆ.

ಬೆಳಿಗ್ಗೆ ೮ ಗಂಟೆಗೆ ಗಣಪತಿ ಹೋಮ, ೧೦ ಗಂಟೆಗೆ ಕೊರಗಜ್ಜ ದೈವಕ್ಕೆ ಮಹಾಮಂಗಳಾರತಿ, ಬೆಳಿಗ್ಗೆ ೧೧ ಗಂಟೆಗೆ ಕೊರಗಜ್ಜ ದೈವದ ಕೋಲೋತ್ಸವ ಆರಂಭಗೊಳ್ಳಲಿದೆ. ಮಧ್ಯಾಹ್ನ ೧ ಗಂಟೆಗೆ ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ತಾ.೮ರಂದು ಬೆಳಿಗ್ಗೆ ೮ ಗಂಟೆಗೆ ದೈವಕ್ಕೆ ಸಂಬAಧಿಸಿದ ಪೂಜೆಗಳು ನಡೆದು ಮಧ್ಯಾಹ್ನ ೧ ಗಂಟೆಗೆ ಅಗೇಲು ಪ್ರಸಾದ ಸೇವೆ ನಡೆಯಲಿದೆ ಎಂದು ದೈವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.