ಕುಶಾಲನಗರ, ನ. ೩೦: ಕುಶಾಲನಗರದಲ್ಲಿ ತಾ.೧ ರಂದು (ಇಂದು) ಯುವಕ-ಯುವತಿಯರಿಗೆ ಗುಡ್ಡಗಾಡು ಓಟ ನಡೆಯಲಿದೆ.
ಕೊಡಗು ಎಜುಕೇಶನಲ್ ಆ್ಯಂಡ್ ಸೋಶಿಯಲ್ ಸರ್ವಿಸ್ ಟ್ರಸ್ಟ್ ಆಶ್ರಯದಲ್ಲಿ ಯುವಕರಿಗೆ ೭ ಕಿಲೋಮೀಟರ್ ಮತ್ತು ಯುವತಿಯರಿಗೆ ನಾಲ್ಕು ಕಿಲೋಮೀಟರ್ ದೂರದ ಓಟವನ್ನು ಬೆಳಗ್ಗೆ ೬ ಗಂಟೆಯಿAದ ಆಯೋಜಿಸಲಾಗಿದೆ. ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ೨೦೦ಕ್ಕೂ ಅಧಿಕ ಯುವಕ ಯುವತಿಯರು ಓಟದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿರುವುದಾಗಿ ಆಯೋಜಕರು ತಿಳಿಸಿದ್ದಾರೆ.