ಚೆಯ್ಯಂಡಾಣೆ, ನ. ೨೪: ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ವತಿಯಿಂದ ದ್ವಿತೀಯ ವರ್ಷದ ಕಡಿಯತ್‌ನಾಡ್ ಕಪ್ ಹಾಕಿ ಪಂದ್ಯಾಟದಲ್ಲಿ ಕಿರುಂದಾಡು ತಂಡ ಬಲಮುರಿ ತಂಡವನ್ನು ಪೆನಾಲ್ಟಿ ಶೂಟ್‌ಔಟ್‌ನಲ್ಲಿ ೬-೫ ಗೋಲಿನಿಂದ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಬಲಮುರಿ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಕರಡ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೊದಲಾರ್ಧ ಹಾಗೂ ದ್ವಿತೀಯಾರ್ಧದಲ್ಲಿ ಎರಡು ತಂಡಗಳು ಗೋಲುಗಳಿಸಲು ಸಾಧ್ಯವಾಗಲಿಲ್ಲ. ನಂತರ ಪೆನಾಲ್ಟಿ ಶೂಟ್‌ಔಟ್‌ನಲ್ಲಿ ೬-೫ ಗೋಲಿನಿಂದ ಬಲಮುರಿ ತಂಡವನ್ನು ಮಣಿಸಿತು. ತೃತೀಯ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಪಾಲಂಗಾಲ ತಂಡ ಕೈಕಾಡು ತಂಡವನ್ನು ೫-೪ ಗೋಲುಗಳಿಂದ ಸೋಲಿಸಿತು. ನಾಲ್ಕನೇ ಸ್ಥಾನಕ್ಕೆ ಕೈಕಾಡು ತಂಡ ಆಯ್ಕೆಯಾಯಿತು.

ಚಾಂಪಿಯನ್ ಕಿರುಂದಾಡು ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿ, ರನ್ನರ್ಸ್ ಬಲಮುರಿ ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ಪಾಲಂಗಾಲ ತಂಡಕ್ಕೆ ನಗದು ಹಾಗೂ ಆಕರ್ಷಕ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ಕೈಕಾಡು ತಂಡಕ್ಕೆ ನಗದು ಬಹುಮಾನ ನೀಡಲಾಯಿತು.

ವೈಯಕ್ತಿಕ ಬಹುಮಾನ

ಪಂದ್ಯ ಪುರುಷ ಪ್ರಶಸ್ತಿಯನ್ನು ಕಿರುಂದಾಡು ತಂಡದ ಐನಂಡ ನಿಯೋನ್ ನಾಚಪ್ಪ, ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಕಿರುಂದಾಡು ತಂಡದ ಮನು, ಬೆಸ್ಟ್ ಫುಲ್ ಬ್ಯಾಕ್ ಪ್ರಶಸ್ತಿಯನ್ನು ಪಾಲಂಗಾಲ ತಂಡದ ಸಚಿನ್ ಸೋಮಣ್ಣ, ಬೆಸ್ಟ್ ಫಾರ್ವರ್ಡ್ ಪ್ರಶಸ್ತಿಯನ್ನು ಕೈಕಾಡು ತಂಡದ ನೀರನ್, ಬೆಸ್ಟ್ ಮಿಡ್ ಫೀಲ್ಡರ್ ಪ್ರಶಸ್ತಿಯನ್ನು ಬಲಮುರಿ ತಂಡದ ಪೂವಣ್ಣ ಪಡೆದುಕೊಂಡರು.

ವಿಶೇಷ ಬಹುಮಾನ ಚಾಂಪಿಯನ್ ಕಿರುಂದಾಡು ಹಾಗೂ ರನ್ನರ್ಸ್ ಬಲಮುರಿ ತಂಡಕ್ಕೆ ಐತಿಚಂಡ ಪ್ರಕಾಶ್ ಕಾರ್ಯಪ್ಪ ಅವರು ಬೃಹತ್ ಗಾತ್ರದ ನಾಟಿ ಕೋಳಿ ಹಾಗೂ ಒಂದು ಬಾಟಲ್! ಅನ್ನು ವಿಶೇಷ ಬಹುಮಾನವಾಗಿ ನೀಡಿದರು.

ತೀರ್ಪುಗಾರರಾಗಿ ಚೆಯ್ಯಂಡ ಲವ ಅಪ್ಪಚ್ಚು,ಚೋಯಮಾಡಂಡ ಚಂಗಪ್ಪ, ಕರವಂಡ ಅಪ್ಪಣ್ಣ, ವಿನೋದ್, ಅಪ್ಪಚ್ಚೆಟೋಳಂಡ ಅಯ್ಯಪ್ಪ, ಪಟ್ರಪಂಡ ಮಂದಣ್ಣ ಕಾರ್ಯನಿರ್ವಹಿಸಿದರು. ೩ಏಳನೇ ಪುಟಕ್ಕೆ

(ಮೊದಲ ಪುಟದಿಂದ) ವೀಕ್ಷಕ ವಿವರಣೆಯನ್ನು ಚೆಪ್ಪುಡಿರ ಕಾರ್ಯಪ್ಪ ಹಾಗೂ ವಿಲಿನ್ ನಿರ್ವಹಿಸಿದರು. ಪಂದ್ಯಾಟದ ವೇಳೆ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ, ವಾಲಗ, ಬ್ಯಾಂಡ್, ಡ್ಯಾನ್ಸ್ನೊಂದಿಗೆ ಸಂಭ್ರಮಿಸಿದರು. ಪ್ರವೇಶ ದ್ವಾರದಿಂದ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಪದಾಧಿಕಾರಿಗಳು,ಸದಸ್ಯರು ಅತಿಥಿಗಳನ್ನು ವಾಲಗ, ಬ್ಯಾಂಡ್ ಮೂಲಕ ಅದ್ದೂರಿಯಾಗಿ ಬರಮಾಡಿ ಕೊಂಡರು. ಫೈನಲ್ ಪಂದ್ಯಾಟವನ್ನು ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪ್ಪಣ್ಣ ಉದ್ಘಾಟಿಸಿದರು.

ಕರಡ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷರಾದ ಬೇಪಡಿಯಂಡ.ಎಸ್.ಬಿದ್ದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪಾಂಡAಡ ಮೊಣ್ಣಪ್ಪ ಮಾತನಾಡಿ ಪುಟ್ಟ ಕರಡ ಗ್ರಾಮ ವಿಶ್ವಕ್ಕೆ ಪರಿಚಯವಾಗಲು ಕಾರಣ ಪಾಂಡAಡ ಕುಟ್ಟಪ್ಪ ಅÀವರು. ಈ ಮೈದಾನದಲ್ಲಿ ಕ್ರೀಡಾಕೂಟದಲ್ಲಿ ಭಾಗವಹಿಸಿ ರಾಜ್ಯ,ರಾಷ್ಟ, ಅಂತರರಾಷ್ಟಿçÃಯ ಮಟ್ಟದಲ್ಲಿ ಹೆಸರನ್ನು ಗಳಿಸಿದ ಅದೆಷ್ಟೋ ಕ್ರೀಡಾಪಟುಗಳಿ ದ್ದಾರೆ. ಇದಕ್ಕೆಲ್ಲ ಕೊಡವ ಕೌಟುಂಬಿಕ ಹಾಕಿ ಜನಕ ಪಾಂಡAಡ ಕುಟ್ಟಪ್ಪ ಅವರೇ ಕಾರಣ ಎಂದು ಹೇಳಿದರು. ಮುಖ್ಯ ಅತಿಥಿ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ ಮಾತನಾಡಿ ಇಲ್ಲಿ ಆಯೋಜಿಸಿರುವಂತಹ ಹಾಕಿ ಕ್ರೀಡಾಕೂಟವು ಪ್ರತಿ ವರ್ಷವೂ ನಡೆಯುವಂತಾಗಬೇಕು. ಕರಡ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಶನ್ ಕ್ಲಬ್ ಕೊಡವ ಹಾಕಿ ನಮ್ಮೆಯ ಜನಕ ಪಾಂಡAಡ ಕುಟ್ಟಪ್ಪ ಅವರ ಪುತ್ಥಳಿಯನ್ನು ಸ್ಥಾಪಿಸಲು ಉದ್ದೇಶಿಸಿರುವುದು ಸಂತಸದ ವಿಚಾರ ಎಂದರು. ಕೊಡವ ಕಲ್ಚರಲ್ ಅಂಡ್ ರಿಕ್ರಿಯೇಷನ್ ಕ್ಲಬ್ ಕ್ರೀಡಾ ಸಮಿತಿಯ ಅಧ್ಯಕ್ಷ ಮೇದುರ ಗಣು ಕುಶಾಲಪ್ಪ, ಬೊವ್ವೆರಿಯಂಡ ನಾಚಪ್ಪ, ನಂಬಿಯಪAಡ ಬನು ಅಪ್ಪಣ್ಣ, ಕರಡ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಲೀಲಾವತಿ ಹಾಗೂ ಸಾಮಾಜಿಕ ರಾಜಕೀಯ ನೇತಾರರು ಪಾಲ್ಗೊಂಡಿದ್ದರು.

ವಿಜೇತರಾದ ತಂಡಕ್ಕೆ ಅತಿಥಿಗಳು ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಕ್ಲಬ್ ಉಪಾಧ್ಯಕ್ಷ ಐತಿಚಂಡ ಭೀಮ್ಮಯ್ಯ, ಕಾರ್ಯದರ್ಶಿ ಬೇಪಡಿಯಂಡ ವಿಲಿನ್, ಕೋಶಾಧಿಕಾರಿ ಐತಿಚಂಡ ಪ್ರಕಾಶ್ ಕಾರ್ಯಪ್ಪ, ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲೀಲಾವತಿ ಪ್ರಾರ್ಥಿಸಿ, ಕೋಡಿರ ವಿನೋದ್ ನಾಣಯ್ಯ ಸ್ವಾಗತಿಸಿ,ಬೇಪಡಿಯಂಡ ವಿಲಿನ್ ಸರ್ವರನ್ನು ವಂದಿಸಿದರು. -ಚಿತ್ರ ವರದಿ -ಅಶ್ರಫ್ ಚೆಯ್ಯಂಡಾಣೆ: ಕೊಡಗಿನಲ್ಲಿ ಪ್ರಥಮ ಬಾರಿಗೆ ಕೊಡವ ೬೦ ಕುಟುಂಬಗಳ ನಡುವೆ ಹಾಕಿ ಪಂದ್ಯಾಟವನ್ನು ಕರಡ ಗ್ರಾಮದಲ್ಲಿ ಆರಂಭಿಸಿದ ಹಾಕಿ ಉತ್ಸವದ ಜನಕ ಪಾಂಡAಡ ಕುಟ್ಟಪ್ಪ ಅವರ ಪುತ್ಥಳಿ ನಿರ್ಮಾಣ ಕಾರ್ಯಕ್ಕೆ ಪಾಂಡAಡ ಮೊಣ್ಣಪ್ಪ ಶಂಕುಸ್ಥಾಪನೆ ನೆರವೇರಿಸಿದರು.

೬೦ ಕೊಡವ ಕುಟುಂಬಗಳ ನಡುವಿನ ೧೯೯೭ ರಲ್ಲಿ (೨೭ ವರ್ಷಗಳ ಹಿಂದೆ) ಪ್ರಪ್ರಥಮವಾಗಿ ಪ್ರಾರಂಭಗೊAಡ ಕೌಟುಂಬಿಕ ಹಾಕಿ ಹಬ್ಬ ಇಂದು ೩ ಬಾರಿ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಪೀಪಲ್ ಆಫ್ ದಿ ಇಯರ್ ಪ್ರಶಸ್ತಿ ಹಾಗೂ ೨೦೨೪ ರಲ್ಲಿ ವಿಶ್ವ ದಾಖಲೆಯ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಗೆ ಸ್ಥಾನ ಪಡೆದಿದೆ. ಇದರ ಅಂಗವಾಗಿ ಕರಡ ಸರಕಾರಿ ಪ್ರಾಥಮಿಕ ಶಾಲೆಯ

ಸಮೀಪದಲ್ಲಿ ಇರುವ ಮೈದಾನದಲ್ಲಿ ಹಾಕಿಯ ಜನಕ, ಕುಟ್ಟಪ್ಪ ಅವರ ಪುತ್ಥಳಿ ನಿರ್ಮಾಣಕ್ಕೆ ಶಂಕುಸ್ಥಾಪನೆ ತಾ. ೨೪ ರಂದು ದ್ವಿತೀಯ ವರ್ಷದ ಕಡಿಯತ್‌ನಾಡ್ ಕಪ್ ಹಾಕಿ ಪಂದ್ಯಾಟದ ಸಂದರ್ಭ ನೆರವೇರಿತು. ಹಾಕಿ ಜನಕನ ಪುತ್ಥಳಿಯನ್ನು ಕೊಡವ ಕಲ್ಚರಲ್ ಮತ್ತು ರಿಕ್ರಿಯೇಷನ್ ಕ್ಲಬ್ ಕರಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ನಿರ್ಮಿಸುತ್ತಿದೆ.