ಶ್ರೀಮಂಗಲ, ಅ. ೧೮ : ತಂದೆ ಮತ್ತು ಮಗನ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವೇರ್ಪಟ್ಟು ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ನಡೆದಿದೆ.
ಪೊನ್ನಂಪೇಟೆ ತಾಲೂಕಿನ ಚಿಕ್ಕಮುಂಡೂರು ಗ್ರಾಮದ ಚಿಂಡಮಾಡ ಎನ್. ನಾಣಯ್ಯ (೭೦) ಮೃತ ದುರ್ಧೈವಿ. ಆರೋಪಿ ದೀಪು (೪೫) ತಲೆ ಮರೆಸಿಕೊಂಡಿದ್ದು, ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮಕ್ಕೆ ಮುಂದಾಗಿದ್ದಾರೆ.
ಗುರುವಾರ ರಾತ್ರಿ ತಂದೆ ಮಗನ ನಡುವೆ ಮಾತಿಗೆ ಮಾತು ಬೆಳೆದು ಜಗಳವೇರ್ಪಟ್ಟಿದ್ದು, ಈ ಸಂದರ್ಭ ಮಗ ತಂದೆಗೆ ದೊಣ್ಣೆಯಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ. ನಾಣಯ್ಯ ಕುಸಿದು ಬಿದ್ದು ಸಾವಿಗೀಡಾಗಿದ್ದು, ಮಗ ರಾತ್ರಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.