ಸಿದ್ದಾಪುರ, ಅ. ೧೮: ಹಾಡಿಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಚೆಸ್ಕಾಂ ಅಧಿಕಾರಿಗಳು ಗ್ರಾಮ ಪಂಚಾಯಿತಿಗೆ ದಂಡ ವಿಧಿಸಿ ಶಾಕ್ ನೀಡಿದೆ.

ಮಾಲ್ದಾರೆ ಗ್ರಾ.ಪಂ ಮೀನುಕೊಲ್ಲಿ , ತಿತಿಮತಿ ವಲಯ ಮೀಸಲು ಅರಣ್ಯಕ್ಕೆ ಹೊಂದಿಕೊAಡಿರುವ ಗ್ರಾಮವಾಗಿದೆ. ಈ ಗ್ರಾಮವು ಬಹುತೇಕ ಹಾಡಿಗಳಿಂದ ಕೂಡಿದ್ದು ಕಾಡು ಪ್ರಾಣಿಗಳ ಹಾವಳಿಯ ನಡುವೆ ಸಾರ್ವಜನಿಕರು ದಿನದೂಡಬೇಕಾದ ಅನಿವಾರ್ಯತೆ ಎದುರಾಗಿದೆ.

ಮಾಲ್ದಾರೆ ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಚೆತಿಟ್ಟು, ಹಣ್ಣಿನತೋಟ ,ದೊಡ್ಡಹಡ್ಲು, ಗೇಟ್ ಹಾಡಿ, ತಟ್ಟಳ್ಳಿ, ಅಸ್ತಾನ ಎಂಬ ಆರು ಹಾಡಿಗಳಿವೆ. ಅಲ್ಲದೆ ಅತೀ ಹೆಚ್ಚು ಕಾಡಾನೆ ಹಾವಳಿ ಇರುವ ಅಚ್ಚುತ ಪೈಸಾರಿ, ಮೈಲಾತ್ ಪುರ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾ.ಪಂ ವತಿಯಿಂದ ಬೀದಿ ದೀಪ ಅಳವಡಿಸಲಾಗಿದೆ. ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಿದ್ದು ರಾತ್ರಿ ಸಮಯದಲ್ಲಿ ತುರ್ತಾಗಿ ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿ ದೀಪಗಳನ್ನು ಅಳವಡಿಸಲಾಗಿದೆ.

ಮಾಲ್ದಾರೆ ಗ್ರಾಮ ಪಂಚಾಯಿತಿ ಗ್ರಾಮಸ್ಥರ ಹಿತದೃಷ್ಟಿಯಿಂದ ಬೀದಿ ದೀಪ ಅಳವಡಿಸಿದ್ದರೆ ಇತ್ತ ಚೆಸ್ಕಾಂ ಮಾಲ್ದಾರೆ ಗ್ರಾಮ ಪಂಚಾಯಿತಿ ಮೇಲೆ ಭಾರೀ ಮೊತ್ತದ ದಂಡವನ್ನು ವಿಧಿಸಿದೆ. ಕಾಡು ಪ್ರಾಣಿಗಳ ಹಾವಳಿಯಿಂದ ಗ್ರಾಮಸ್ಥರು ರಕ್ಷಣೆ ಪಡೆಯಲೆಂಬ ಉದ್ದೇಶದಿಂದ ಹಾಡಿಗಳು ಹಾಗೂ ಅತೀ ಹೆಚ್ಚು ಕಾಡಾನೆ ಹಾವಳಿ ಇರುವ ಪ್ರದೇಶಗಳಲ್ಲಿ ಬೀದಿ ದೀಪ ಅಳವಡಿಸಲಾಗಿತ್ತು. ಬೀದಿ ದೀಪ ಹಾಗೂ ವ್ಯಾಪ್ತಿಯ ಮನೆಗಳ ವಿಸ್ತೀರ್ಣ ದೂರ ಇರುವ ಹಿನ್ನೆಲೆಯಲ್ಲಿ ಮೀಟರ್ ಅಳವಡಿಕೆ ಅಸಾಧ್ಯ ಎಂಬುದು ಗ್ರಾ.ಪಂ. ವಾದ. ಇತ್ತ ಅಕ್ರಮವಾಗಿ ಬೀದಿ ದೀಪಗಳನ್ನು ಅಳವಡಿಸಲಾಗಿದೆ

(ಮೊದಲ ಪುಟದಿಂದ) ಎಂಬ ಆರೋಪದಲ್ಲಿ ಸೆಸ್ಕ್ ಮಾಲ್ದಾರೆ ಗ್ರಾಮ ಪಂಚಾಯಿತಿಗೆ ರೂ. ೪೮,೧೮೦ ದಂಡ ವಿಧಿಸಿದೆ.

ಮಾಲ್ದಾರೆ ಗ್ರಾಮ ಪಂಚಾಯಿತಿ ಕಾಡಂಚಿನಲ್ಲಿರುವ ಹಿನ್ನೆಲೆಯಲ್ಲಿ ಇಲ್ಲಿ ಬೀದಿ ದೀಪ ಅವಶ್ಯಕವಾಗಿದೆ.ಕಾಡಾನೆ ಹಾವಳಿ ಇರುವ ಕಾರಣದಿಂದ ಇಲ್ಲಿನ ಹಾಡಿಗಳು ಹಾಗೂ ಗ್ರಾಮಗಳಿಗೆ ಪಂಚಾಯಿತಿ ವತಿಯಿಂದ ಬೀದಿ ದೀಪ ಅಳವಡಿಸಲಾಗಿದೆ. ಕಳೆದ ಬಾರಿಯೂ ಕೂಡ ಸೆಸ್ಕ್ ಅಕ್ರಮವಾಗಿ ಬೀದಿ ದೀಪವನ್ನು ಅಳವಡಿಸಲಾಗಿದೆ ಎಂದು ಆರೋಪಿಸಿ ಗ್ರಾ.ಪಂ.ಗೆ ಚೆಸ್ಕಾಂ ದಂಡ ವಿಧಿಸಿತ್ತು. ಅಲ್ಲದೆ ಬೀದಿ ದೀಪಗಳನ್ನು ತೆರವುಗೊಳಿಸಬೇಕೆಂಬ ಆದೇಶವನ್ನು ಮಾಡಿದ್ದರು. ಇದೀಗ ಮತ್ತೊಮ್ಮೆ ಗ್ರಾ.ಪಂ ವಿರುದ್ದ ಸೆಸ್ಕ್ ಕ್ರಮಕ್ಕೆ ಮುಂದಾಗಿದೆ ಎಂದು ಮಾಲ್ದಾರೆ ಉಪಾಧ್ಯಕ್ಷ ಕುಂಞಣ್ಣ ತಿಳಿಸಿದ್ದಾರೆ.

ಮಾಲ್ದಾರೆ ಗ್ರಾ.ಪಂ ಸೆಸ್ಕ್ ನಿಯಮಗಳಿಗೆ ವಿರುದ್ಧವಾಗಿ ಬೀದಿ ದೀಪಗಳನ್ನು ಅಳವಡಿಸಿದೆ. ಈ ಕುರಿತು ಎರಡು ವರ್ಷಗಳ ಹಿಂದೆ ಕೂಡ ಇಲಾಖೆಯು ಗ್ರಾಮ ಪಂಚಾಯಿತಿಗೆ ಮನವರಿಕೆ ಮಾಡಿದೆ. ಇಲಾಖೆಯ ನಿಯಮಗಳಿಗೆ ವಿರುದ್ಧವಾಗಿ ಅಕ್ರಮವಾಗಿ ಬೀದಿ ದೀಪಗಳನ್ನು ಅಳವಡಿಸಿದ್ದ ಹಿನ್ನೆಲೆಯಲ್ಲಿ ಕಳೆದ ಬಾರಿಯೂ ದಂಡ ವಿಧಿಸಿದೆ. ಗ್ರಾ.ಪಂ ಸೆಸ್ಕ್ ಅನುಮತಿ ಹಾಗೂ ಮಾನದಂಡದೊAದಿಗೆ ಬೀದಿ ದೀಪಗಳನ್ನು ಅಳವಡಿಸಿದರೆ ಸಮಸ್ಯೆ ಬಗೆಹರಿಯಲಿದೆ. ಇಲ್ಲದಿದ್ದಲ್ಲಿ ಮೇಲಾಧಿಕಾರಿಗಳ ಆದೇಶದಂತೆ ಬೀದಿ ದೀಪವನ್ನು ತೆರವುಗೊಳಿಸಲಾಗುವುದು.

-ಸ್ವರಾಜ್, ಕಿರಿಯ ಅಭಿಯಂತರರು ಚೆಸ್ಕಾಂ, ಸಿದ್ದಾಪುರ