ಕೋವರ್ ಕೊಲ್ಲಿ ಇಂದ್ರೇಶ್

ಬೆಳಗಾವಿ, ಅ. ೧೮: ಬೆಳಗಾವಿಯ ಆಂಜನೇಯ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣವರ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಮಾಳಮಾರುತಿ ಠಾಣೆ ಪೊಲೀಸರು ಗುರುವಾರ ಪತ್ನಿ ಸೇರಿ ಮೂವರನ್ನು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಉದ್ಯಮಿ ಪತ್ನಿ ಉಮಾ ಪದ್ಮಣ್ಣವರ (೪೧), ಅವರ ಫೇಸ್‌ಬುಕ್ ಸ್ನೇಹಿತ, ಶನಿವಾರಸಂತೆ ಗ್ರಾಮದ ಶೋಭಿತ್ ಗೌಡ (೩೦) ಮತ್ತು ಶನಿವಾರಸಂತೆಯ ಪವನ್ (೨೭) ಬಂಧಿತ ಆರೋಪಿಗಳು. ಈಗ ಮೂವರನ್ನು ಹಿಂಡಲಗಾದಲ್ಲಿರುವ ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ.

ನಗರದ ರಿಯಲ್ ಎಸ್ಟೇಟ್ ಉದ್ಯಮಿ ಸಂತೋಷ್ ಪದ್ದಣ್ಣನವರ (೪೭) ಅಕ್ಟೋಬರ್ ೯ ರ ಸಂಜೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಅಕ್ಟೋಬರ್ ೧೦ ರಂದು ವೀರಶೈವ ಸಂಪ್ರದಾಯದAತೆ ಅಂತ್ಯಕ್ರಿಯೆಯೂ ನಡೆದಿತ್ತು. ಮೃತರ ಮಗಳಾದ ಬೆಂಗಳೂರಿನಲ್ಲಿ ಮೊದಲ ವರ್ಷದ ಇಂಜಿನಿಯರಿAಗ್ ವ್ಯಾಸಂಗ ಮಾಡುತ್ತಿರುವ ಸಂಜನಾಗೆ ಅಪ್ಪನ ಕೊನೆ ಕ್ಷಣಗಳನ್ನು ನೋಡುವ ಕುತೂಹಲ ಆಗಿದೆ. ಆಕೆ ಅಕ್ಟೋಬರ್ ೧೨ ರಂದು ತಾಯಿಯೊಡನೆ ಅಂದಿನ ಕ್ಷಣಗಳ ವೀಡಿಯೋ ತೋರಿಸಲು ಒತ್ತಾಯಿಸಿದ್ದಾಳೆ. ಆಗ ತಾಯಿ ಅದಕ್ಕೇನು ಈಗಲೇ ಅರ್ಜೆಒಟ್? ಸ್ನಾನ ಮಾಡಿ, ಊಟ ಮಾಡಿ ಬಾ ನಂತರ ನೋಡಿದರಾಯ್ತು ಅಂದಿದ್ದಾಳೆ. ಆದರೆ ಮಗಳು ಬರುವಷ್ಟರಲ್ಲಿ ೮ನೇ ತರಗತಿ ಒದುತ್ತಿರುವ ಮಗನಿಗೆ ಹೇಳಿ ಅಂದಿನ ಸಂಪೂರ್ಣ ಸಿಸಿಟಿವಿ ವೀಡಿಯೋಗಳನ್ನು ಡಿಲೀಟ್ ಮಾಡಿಸಿದ್ದಾಳೆ. ಉದ್ಯಮಿಯ ಮೂರು ಅಂತಸ್ತಿನ ಮನೆಯಲ್ಲೇ ಸುಮಾರು ೧೫ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿಕೊಂಡಿದ್ದರು.

ಇದರಿAದ ಸಂದೇಹ ಮತ್ತು ಸಿಟ್ಟುಗೊಂಡ ಮಗಳು ಸಾವಿನ ತನಿಖೆ ನಡೆಸುವಂತೆ ಪೊಲೀಸರಿಗೆ ಅಕ್ಟೋಬರ್ ೧೫ ರಂದು ದೂರು ಕೊಟ್ಟಿದ್ದಾಳೆ. ಕ್ಷಿಪ್ರ ತನಿಖೆ ಕೈಗೊಂಡ ಪೊಲೀಸರು ಎದುರು ಮನೆಯ

(ಮೊದಲ ಪುಟದಿಂದ) ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ೧೬ ರಂದೇ ಮೂವರನ್ನೂ ಬಂಧಿಸಿದ್ದಾರೆ.

ಶನಿವಾರಸಂತೆಯ ಪಂಚಾಯ್ತಿ ಟ್ರಾಕ್ಟರ್ ಚಾಲಕನ ಪುತ್ರ ಶೋಭಿತ್ ಗೌಡ ಕಳೆದ ಎರಡು ವರ್ಷಗಳಿಂದ ಹರ್ಬಲ್ ಲೈಫ್ ಉತ್ಪನ್ನ ಮಾರಾಟ ಸಂಬAಧ ಉಮಾ ಪದ್ದಣ್ಣನವರ ಸಂಪರ್ಕಕ್ಕೆ ಬಂದಿದ್ದಾನೆ. ಪತ್ನಿ ಶೋಭಿತ್‌ನೊಂದಿಗೆ ಚಾಟ್ ಮಾಡುವುದು, ಮಾತಾಡುವುದೂ ಉದ್ಯಮಿಗೆ ಗೊತ್ತಾಗಿ ಶೋಭಿತ್‌ನಿಗೆ ೮ ತಿಂಗಳ ಹಿಂದೆಯೇ ವಾರ್ನಿಂಗ್ ಕೊಟ್ಟಿದ್ದಾರೆ. ಆಗ ಶೋಭಿತ್ ಆಯ್ತು ಇನ್ನು ನಾನು ಉಮಾ ಅವರನ್ನು ಸಂಪರ್ಕಿಸುವುದಿಲ್ಲ ಎಂದು ಭರವಸೆ ಕೊಟ್ಟಿದ್ದಾನೆ.

ಈ ಕುರಿತು ಮಾಹಿತಿ ನೀಡಿದ ಮಾಳಮಾರುತಿ ಇನ್ಸ್ಪೆಕ್ಟರ್ ಜಾಕೀರ್ ಅವರು ಕೆಲ ತಿಂಗಳ ಬಳಿಕ ಪುನಃ ಇಬ್ಬರೂ ಸಂಪರ್ಕದಲ್ಲಿ ಇದ್ದಾರೆ. ಪತಿಯಿಂದ ಸಂಪರ್ಕಕ್ಕೆ ಅಡ್ಡಿ ಎಂದು ಭಾವಿಸಿದ ಪತ್ನಿ ಆತನನ್ನೇ ಮುಗಿಸಿಬಿಡಲು ಯೋಜನೆ ರೂಪಿಸಿದ್ದಾಳೆ. ಅದರಂತೆ ಶೋಭಿತ್ ಮತ್ತು ಆತನ ಸ್ನೇಹಿತ ರಾಮನ್ ಕುಟ್ಟಿ ಎಂಬುವವರ ಮಗ ಪವನ್‌ನನ್ನು ಕರೆದುಕೊಂಡು ಬೆಳಗಾವಿಗೆ ಅಕ್ಟೋಬರ್ ೭ ರಂದೇ ಬಂದು ಲಾಡ್ಜ್ನಲ್ಲಿ ಉಳಿದುಕೊಂಡಿದ್ದಾರೆ. ಅಕ್ಟೋಬರ್ ೯ ರಂದು ಮದ್ಯಾಹ್ನ ಊಟದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟಿದ್ದರಿಂದ ನಿದ್ರೆಗೆ ಜಾರಿದ್ದ ಉದ್ಯಮಿಯನ್ನು ಈರ್ವರೂ ೭ ಘಂಟೆಗೆ ಮನೆಗೆ ತೆರಳಿ ಉಸಿರುಗಟ್ಟಿಸಿ ಕೊಂದು ೭.೫೫ ಕ್ಕೆ ಹೊರಬಂದಿದ್ದಾರೆ. ಇದು ಎದುರು ಮನೆ ಸಿಸಿ ಟಿವಿಯಲ್ಲಿ ದಾಖಲಾಗಿದೆ ಎಂದು ಜಾಕೀರ್ ತಿಳಿಸಿದರು. ಇದೀಗ ಬುಧವಾರ ಹೂತಿದ್ದ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೂವರೂ ಆರೋಪಿಗಳನ್ನು ೧೪ ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಧುನಿಕ ತಂತ್ರಜ್ಞಾನದಿAದ ಡಿಲೀಟ್ ಮಾಡಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಮರು ಪಡೆಯುವುದಾಗಿ ತಿಳಿಸಿದ ಇನ್ಸ್ಪೆಕ್ಟರ್ ಜಾಕೀರ್ ಅವರು ಅದರಲ್ಲಿ ಕೊಲೆಯ ನೇರ ದ್ಶಶ್ಯಾವಳಿಯೂ ಸಿಗಲಿದೆ ಎಂದು ತಿಳಿಸಿದರು. ಕೊಲೆ ನಡೆಸಿ ಇಬ್ಬರೂ ಆರೋಪಿಗಳೂ ಲಾಡ್ಜ್ನಲ್ಲಿಯೇ ಇದ್ದುದರಿಂದ ಬೆಳಗಾವಿ ಪೊಲೀಸರು ಆರೋಪಿಗಳನ್ನು ಅಲ್ಲಿಯೇ ಬಂಧಿಸಿದ್ದಾರೆ.

ಮೃತರ ಬಗ್ಗೆ ಅಕ್ಕ ಪಕ್ಕದ ನಿವಾಸಿಗಳಲ್ಲಿ ಅಷ್ಟೇನೂ ಒಳ್ಳೆ ಅಭಿಪ್ರಾಯ ಇರಲಿಲ್ಲ. ಖಾಸಗೀ ಲೇವಾದೇವಿ ಮಾಡುತಿದ್ದ ಉದ್ಯಮಿ ಮೀಟರ್ ಬಡ್ಡಿ ವಸೂಲಿ ಮಾಡುತಿದ್ದರೆಂಬ ಆರೋಪಗಳೂ ಇದ್ದವು.