ವೀರಾಜಪೇಟೆ, ಅ. ೧೮: ವೀರಾಜಪೇಟೆ ಪುರಸಭೆಯ ವ್ಯಾಪ್ತಿಯನ್ನು ವಿಸ್ತಾರಗೊಳಿಸಿರುವ ಹಿನ್ನೆಲೆಯಲ್ಲಿ ಪುರಸಭೆಯ ಆಡಳಿತ ಸಮಿತಿಗೆ ಹೆಚ್ಚುವರಿ ನಾಮನಿರ್ದೇಶನ ಸದಸ್ಯರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ. ಇದರಂತೆ ಆತಿಫ್ ಮನ್ನಾ, ಹೆಚ್.ಬಿ. ಅನಿತಾ ಅವರು ನಾಮನಿರ್ದೇಶನಗೊಂಡಿದ್ದಾರೆ.