ವೀರಾಜಪೇಟೆ, ಅ. ೧೮: ಬಾಳುಗೋಡು ಕಂಡಿಮಕ್ಕಿ ದೇವಾಲಯದಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಭಕ್ತಾದಿಗಳ ಅನೂಕೂಲಕ್ಕಾಗಿ ೨ ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಭರವಸೆ ನೀಡಿದರು.

ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಕಂಡಿಮಕ್ಕಿ ತ್ರಿಮೂರ್ತಿ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ನೂತನ ಕಾಂಕ್ರಿಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿ ದೇವಾಲಯದ ಆಡಳಿತ ಮಂಡಳಿ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ ಎಂ ಗಣೆೆÃಶ್ ಅವರ ಕೋರಿಕೆಯಂತೆ ಈ ರಸ್ತೆಗೆ ರೂ. ೫ ಲಕ್ಷ ವೆಚ್ಚದಲ್ಲಿ ನೂತನ ರಸ್ತೆ ನಿರ್ಮಿಸಲಾಗಿದೆ. ಭಕ್ತಾದಿಗಳು ಭೋಜನಾಲಯಕ್ಕೆ ತೆರಳುವ ರಸ್ತೆ ತೀರಾ ದುಸ್ಥಿತಿಯಲ್ಲಿದ್ದು ಭಕ್ತರಿಗೆ ತೊಂದರೆ ಆಗುತ್ತಿತ್ತು. ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತಿದ್ದು ಸಮಗ್ರ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ರೂ. ೨ ಲಕ್ಷ ಅನುದಾನ ಒದಗಿಸುತ್ತಿರುವುದಾಗಿ ಸುಜಾ ಕುಶಾಲಪ್ಪ ಹೇಳಿದರು.

ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ವತಿಯಿಂದ ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಆಡಳಿತ ಮಂಡಳಿಯ ಅಧ್ಯಕ್ಷ ಸಿ.ಕೆ. ಭಿಮಯ್ಯ ಕಾರ್ಯದರ್ಶಿ ಸುರೇಂದ್ರ ಉಪಾಧ್ಯಕ್ಷ ಅನಿಲ್ ಸದಸ್ಯರಾದ ಸುನಿಲ್, ಸುರಂಜನ್, ಉದಯ, ಸುಮಂತ್, ಸುಬ್ರಮಣಿ, ಪ್ರಶಾಂತ್ ನವೀನ್, ದಿನೇಶ್, ಮನು, ಇಂದ್ರಕುಮಾರ್ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ ಎಂ ಗಣೇಶ್ ಹಾಗೂ ಗ್ರಾಮದ ಪ್ರಮುಖರು ಹಿರಿಯರು ಉಪಸ್ಥಿತರಿದ್ದರು.