ಮಡಿಕೇರಿ, ಅ. ೧೮: ಜಗದ್ವಿಖ್ಯಾತ "ನಾಡಹಬ್ಬ ಮೈಸೂರು ದಸರಾ ಮಹೋತ್ಸವ ೨೦೨೪"ರ ಪಂಚ ಕಾವ್ಯೋತ್ಸವ ಕವಿಗೋಷ್ಠಿಯಲ್ಲಿ ಕೊಡಗಿನ ಕವಿ ಪ್ರತಿನಿಧಿಗಳಾಗಿ ವೈಲೇಶ ಪಿ.ಎಸ್., ಉಳುವಂಗಡ ಕಾವೇರಿ ಉದಯ, ಲೀಲಾಕುಮಾರಿ ತೊಡಿಕಾನ, ಪೂಜಾರಿರ ಕೃಪಾ ದೇವರಾಜ್ ಮತ್ತು ಹೇಮಂತ್ ಪಾರೇರಾ ಕವಿಗೋಷ್ಠಿಯಲ್ಲಿ ತಮ್ಮ ಕವನಗಳನ್ನು ವಾಚಿಸಿದರು. ನಾಲ್ಕನೆಯ ದಿನದ ಸಮಷ್ಟಿ (ಬಹುಭಾಷಾ) ಕವಿಗೋಷ್ಠಿಯಲ್ಲಿ ಕೊಡಗಿನ ಕೊಡವ ಭಾಷಾ ಪ್ರತಿನಿಧಿ ಯಾಗಿ ಮುಲ್ಲೇಂಗಡ ಮಧೋಶ್ ಪೂವಯ್ಯ ಮತ್ತು ಕೊಡಗಿನ ಬ್ಯಾರಿ ಭಾಷೆಯ ಪ್ರತಿನಿಧಿಯಾಗಿ ಮುನೀರ್ ಅಹಮದ್ ಭಾಗವಹಿಸಿದ್ದರು.