ಮಡಿಕೇರಿ, ಅ. ೮: ಉಡುಪಿ ಸಾಲಿಗ್ರಾಮದ ಡಿವೈನ್ ಪಾರ್ಕ್ ಟ್ರಸ್ಟ್ ಅಂಗ ಸಂಸ್ಥೆಯಾದ ವಿವೇಕ ಜಾಗೃತ ಬಳಗದಿಂದ (ಶ್ರೀಮಂಗಲ) ಆತ್ಮೋನ್ನತಿ ಶಿಬಿರ ಕಾರ್ಯಕ್ರಮ ಕೈಕೇರಿಯ ಭಗವತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಸುಂದರೇ ಗೌಡ ಮತ್ತು ಯಶ್ವಂತ್ ಅವರು ಭಾಗವಹಿಸಿದ್ದರು. ಪ್ರಸ್ತುತ ಕಾಲ ಘಟ್ಟದಲ್ಲಿ ಅಧ್ಯಾತ್ಮಿಕ ಪಾಲನೆಯಿಂದ ಆತ್ಮ ಮತ್ತು ಅಂತರAಗದ ಶುದ್ದಿಯಿಂದ ಒತ್ತಡ ಮುಕ್ತ ಶಾಂತಿಯುತ ಆರೋಗ್ಯಕರ ಜೀವನ ಸಾಧ್ಯ. ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು. ಅಧ್ಯಾತ್ಮಿಕ ಪ್ರಸಾರ ಪ್ರತಿ ಗ್ರಾಮ ಗ್ರಾಮಗಳಲ್ಲಿ ನಡೆಯುವ ಮೂಲಕ ಅಧ್ಯಾತ್ಮಿಕ ಜಾಗೃತಿ ಮೂಡಿಸುವ ಕೆಲಸ ಕಾರ್ಯಗಳು ಆಗಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮಂಗಲ ವಿವೇಕ ಜಾಗೃತ ಬಳಗದ ಅಧ್ಯಕ್ಷೆ ಸುಮಿತ್ರ ವಹಿಸಿದ್ದರು. ಬೆಂಜಾAಡ ರಶ್ಮಿ ದೇವಯ್ಯ ನಿರೂಪಿಸಿದರು. ಕಾರ್ಯಕರ್ತರಾದ ಬೆಂಜಾAಡ ದೇವಯ್ಯ , ಕುಮಾರ್, ಬೇಬಿ ಶಾಂತಿ ವನಜಾ ಅವರು ಭಾಗವಹಿಸಿದ್ದರು.