ಮಡಿಕೇರಿ, ಅ. ೮: ಕೂಡಿಗೆ ಹಾಗೂ ಸೋಮವಾರಪೇಟೆ ಟರ್ಫ್ ಮೈದಾನದಲ್ಲಿ ನಡೆಯುತ್ತಿದ್ದ ಸಿಬಿಎಸ್ಇ ದಕ್ಷಿಣ ವಲಯ ಹಾಕಿ ಪಂದ್ಯಾವಳಿಯಲ್ಲಿ ೧೭ ವರ್ಷದೊಳಗಿನ ವಿಭಾಗದಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯ ಬಾಲಕಿಯರ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾವಳಿಯಲ್ಲಿ ಕೊಡಗು ವಿದ್ಯಾಲಯ ಬಾಲಕಿಯರ ತಂಡ ನಾಯಕಿ ಪರ್ಲಿನ್ ಪೊನ್ನಮ್ಮ ಹಾಗೂ ಉಪನಾಯಕಿ ತೃಪ್ತ ಮುಂದಾಳತ್ವದಲ್ಲಿ ಉತ್ತಮ ಪ್ರದರ್ಶನ ನೀಡಿತು.
೧೭ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮಡಿಕೇರಿಯ ಕೊಡಗು ವಿದ್ಯಾಲಯ, ಬಾಲಕರ ವಿಭಾಗದಲ್ಲಿ ಬಾಗಲಕೋಟೆಯ ಬಸವೇಶ್ವರ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆ ಜಯ ಗಳಿಸಿದವು.
ವಯೋಮಿತಿ ೧೪ರ ಬಾಲಕಿಯರ ವಿಭಾಗದಲ್ಲಿ ಬಳ್ಳಾರಿ ಡ್ರೀಮ್ ವರ್ಲ್ಡ್ ಸ್ಕೂಲ್, ಬಾಲಕರ ವಿಭಾಗದಲ್ಲಿ ಅಹಮದ್ ನಗರದ ಯಶ್ ಅಕಾಡೆಮಿ, ೧೯ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಬಾರಾಮತಿಯ ಅನಿಕೇತನ ಆಂಗ್ಲ ಮಾಧ್ಯಮ ಶಾಲೆ ಹಾಗೂ ಬಾಲಕರ ವಿಭಾಗದಲ್ಲಿ ದೆಹಲಿ ಪಬ್ಲಿಕ್ ಸ್ಕೂಲ್ ಬೆಂಗಳೂರು ಈಸ್ಟ್ ಜಯ ಗಳಿಸಿದವು.
ನಗರದ ಕೊಡಗು ವಿದ್ಯಾಲಯವು ಕಳೆದ ೪ ದಿನಗಳಿಂದ ಇಲ್ಲಿನ ಕೂಡಿಗೆ ಹಾಕಿ ಮೈದಾನ ಹಾಗೂ ಸೋಮವಾರಪೇಟೆ ಟರ್ಫ್ ಮೈದಾನದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಕೇರಳದ ಒಟ್ಟು ೩೭ ತಂಡಗಳು ಭಾಗವಹಿಸಿದ್ದವು. ಒಟ್ಟು ೮೨ ಪಂದ್ಯಗಳು ನಡೆದವು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಂತರಾಷ್ಟಿçÃಯ ಹಾಕಿ ಆಟಗಾರ ಮತ್ತು ಲೆಫ್ಟಿನೆಂಟ್ ಕರ್ನಲ್ ಬಿ.ಕೆ. ಸುಬ್ರಮಣಿ ಅವರು ತಮ್ಮ ಪ್ರವಾಸವನ್ನು ನೆನೆಸಿಕೊಂಡು ಕ್ರೀಡಾಪುಟುಗಳಿಗೆ ಹಿತವಚನ ನೀಡಿದರು.
ಇದೇ ಸಂದರ್ಭ ್ಲ ಸಿಬಿಎಸ್ಇ ಎಸ್. ಅಫ್ಸರ್ ಅಹ್ಮದ್ ಅವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು. ನಂತರ ಅವರು ಮಾತನಾಡಿ ಶಾಲಾ ವತಿಯಿಂದ ಮಾಡಿದ ಟೂರ್ನಮೆಂಟ್ ಆಯೋಜನೆ ಹಾಗೂ ಆತಿಥ್ಯದ ಬಗ್ಗೆ ಶ್ಲಾಘಿಸಿದರು. ವಿಶೇಷವಾಗಿ ಸಾರಿಗೆ ಸಿಬ್ಬಂದಿ ಮತ್ತು ತಾಂತ್ರಿಕ ತಂಡವನ್ನು ಪ್ರಶಂಸಿಸಿದರು. ಇದೇ ಸಂದರ್ಭ ದೈಹಿಕ ಶಿಕ್ಷಕÀ ದೀನ ಎಚ್.ಡಿ., ಮೇಜರ್ ದಾಮೋದರ ಗೌಡ ಹಾಗೂ ಪಾರ್ವತಿ ಅವರನ್ನು ಸನ್ಮಾನಿಸಲಾಯಿತು.
ಕೊಡಗಿನ ವಿವಿಧ ಕಡೆಗಳಿಂದ ಆಗಮಿಸಿದ್ದ ರೆಫ್ರಿಗಳು ತಮ್ಮ ಕೆಲಸವನ್ನು ಸೂಕ್ತವಾಗಿ ನಿಭಾಯಿಸಿದರು.
ಪ್ರತಿಭಾ, ಸೋನ ಮತ್ತು ರಾಜೇಶ್ವರಿ ಪ್ರಾರ್ಥನೆ, ನಿರೂಪಣೆ ಯನ್ನು ರೇಖಾ ಮತ್ತು ವೀಣಾ ಅವರು ಮಾಡಿದರು. ಪ್ರಮೀಳಾ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.
ನಮ್ರತ ಹಾಗೂ ಬಿಂದು ಅವರು ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲೆ ಸುಮಿತ್ರಾ ಕೆ.ಎಸ್., ಆಡಳಿತ ನಿರ್ವಹಣಾಧಿಕಾರಿ ರವಿ ಪಿ., ಕೊಡವ ಸಮಾಜದ ಕಾರ್ಯದರ್ಶಿ ನಂದಿನೆರವAಡ ದಿನೇಶ್, ಅಂಜು ಸುಬ್ರಮಣಿ, ಪಳಂಗAಡ ಲವಕುಮಾರ್ ಉಪಸ್ಥಿತರಿದ್ದರು.