ನಾಪೋಕ್ಲು, ಅ. ೮: ಇಲ್ಲಿನ ಇಂದಿರಾ ನಗರದ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಶನಿವಾರ ಶಾಸಕ ಎ.ಎಸ್ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.
೧೦ ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಗೊಳ್ಳಲಿದ್ದು ಇಂದಿರಾನಗರದ ವಿವೇಕಾನಂದ ಯುವಕ ಸಂಘದ ಪದಾಧಿಕಾರಿಗಳು ಸಮುದಾಯ ಭವನದ ಅವಶ್ಯಕತೆ ಇದೆ ಎಂದು ಶಾಸಕ ಪೊನ್ನಣ ಅವರಿಗೆ ಈ ಹಿಂದೆ ಮನವಿ ಮಾಡಿದ್ದರು. ಶಾಸಕರ ಮುತುವರ್ಜಿಯಿಂದ ಸಮುದಾಯ ಭವನಕ್ಕೆ ಅನುದಾನ ದೊರೆತಿದೆ. ಇಂದಿರಾನಗರ ವಿವೇಕಾನಂದ ಯುವಕ ಸಂಘದ ಪ್ರಮುಖ ಜಲೇಂದ್ರ ಮಾತನಾಡಿ ಸಂಘದ ಪರವಾಗಿ ಶಾಸಕರಿಗೆ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ ಅರುಣ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಕೆಡಿಪಿ ಸದಸ್ಯ ಎಂ.ಹೆಚ್. ಅಬ್ದುಲ್ ರಹಿಮಾನ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್ ಕೆ.ಎ., ಕೊಡಗು ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ವೈಸಿ ಕತ್ತನಿರ , ಕೊಡಗು ಜಿಲ್ಲಾ ಕಾರ್ಮಿಕ ಸಂಘದ ಉಪಾಧ್ಯಕ್ಷ ಪರವಂಡ ಮಿರ್ಶಾದ್, ಕುಲ್ಲೇಟಿರ ಅರುಣ್ ಬೇಬ, ಸಾಬಾ ತಿಮ್ಮಯ್ಯ , ಶಶಿ ಯು ಕೆ, ಪಟ್ಟಾಭಿ ಪ್ರಕಾಶ್, ವಿಕ್ರಂ ಬಿ.ಎಸ್., ಮಹಮ್ಮದ್ ಸಿ.ಎ., ಅರಫತ್, ಶ್ರೀಧರ, ಇಬ್ರಾಹಿಂ ಸಿ.ಎ. ಉಪಸ್ಥಿತರಿದ್ದರು.