ಚೆಯ್ಯಂಡಾಣೆ, ಅ. ೫: ಸುನ್ನಿ ಜಂಮಿಯ್ಯತ್ತುಲ್ ಮುಹಲೀಮ್ (ಎಸ್‌ಜೆಎಂ) ಮೂರ್ನಾಡು ರೇಂಜ್ ಹಾಗೂ ಎಸ್.ವೈ.ಎಸ್ ಮಡಿಕೇರಿ ಝೋನ್ ಸಂಯುಕ್ತಾಶ್ರಯದಲ್ಲಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಅಂಗವಾಗಿ ಮೂರ್ನಾಡು ಪಟ್ಟಣದಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾ ನಡೆಯಿತು.

ಕೂರ್ಗ್ ಜಂಮಿಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ವೀರಾಜಪೇಟೆ ಪ್ರಾರ್ಥನೆ ನೆರವೇರಿಸುವ ಮೂಲಕ ಸಂದೇಶ ಜಾಥಾಕ್ಕೆ ಚಾಲನೆ ನೀಡಿದರು.

ಮೂರ್ನಾಡು ಕಾಲೇಜು ಮೈದಾನದಿಂದ ಆರಂಭಗೊAಡ ಜಾಥಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಬಸ್ ನಿಲ್ದಾಣದಲ್ಲಿ ಮುಕ್ತಾಯಗೊಂಡಿತು.

ಜಾಥಾದಲ್ಲಿ ವಿವಿಧ ಮದ್ರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ, ಸ್ಕೌಟ್, ಪ್ಲವರ್ ಶೋ, ಪ್ರವಾದಿ ಕೀರ್ತನೆ ನೋಡುಗರ ಗಮನ ಸೆಳೆಯಿತು.

ಜಾಥಾವನ್ನು ಉದ್ದೇಶಿಸಿ ಪ್ರಖ್ಯಾತ ಯುವವಾಗ್ಮಿ ವಕೀಲ ಅಬ್ದುಲ್ಲಾ ಹಿಮಮಿ ಸಖಾಫಿ ಕೊಂಡAಗೇರಿ ಮಾತನಾಡಿ, ಮೊಹಮ್ಮದ್ ಪೈಗಂಬರ್ ರವರ ಜೀವನ ಶೈಲಿ ಅವರ ಆದರ್ಶ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಅವರ ಶಾಂತಿಯ ಸಂದೇಶ ಎಲ್ಲರಿಗೂ ಮಾದರಿಯಾಗಬೇಕೆಂದರು.

ಈ ಸಂದರ್ಭ ಕೂರ್ಗ್ ಜಂಮೀಯ್ಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ ಎಮ್ಮೆಮಾಡು,ಕೆಎಂಜೆ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್, ಕಾರ್ಯದರ್ಶಿ ಅಹ್ಮದ್ ಮದನಿ, ಹನೀಫ್ ಸಖಾಫಿ ಕೊಂಡAಗೇರಿ, ಮುನೀರ್ ಮಹ್ಳರಿ ಪಡಿಯಾಣಿ, ಇಸ್ಮಾಯಿಲ್ ಸಖಾಫಿ, ಕೊಂಡAಗೇರಿ, ಶಂಸುದ್ದೀನ್ ಅಮ್ಜದಿ ಬಲಮುರಿ,

ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಝುಬೈರ್ ಸಅದಿ,ಕಾರ್ಯದರ್ಶಿ ಜುನೈದ್ ಆಮ್ಮತ್ತಿ, ಮುಹಮ್ಮದ್ ಸಖಾಫಿ,

ಅಬ್ದುಲ್ಲಾ ಮುಸ್ಲಿಯಾರ್, ಬಶೀರ್ ಕೊಟ್ಟಮುಡಿ,ಖಾದರ್ ಮೂರ್ನಾಡು, ಹಂಝ ರಹ್ಮಾನಿ, ನಝಿರ್ ಸಖಾಫಿ,ಮೈಮ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.