ಸೋಮವಾರಪೇಟೆ, ಅ. ೫: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ನವರಾತ್ರಿ ಪ್ರಯುಕ್ತ ಪಟ್ಟಣದಲ್ಲಿ ಪ್ರಥಮ ಬಾರಿಗೆ ‘ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯದರ್ಶನ ಕಾರ್ಯಕ್ರಮವನ್ನು ತಾ.೭ರಿಂದ ೧೨ ರವರೆಗೆ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ಡಿ.ಕೆ. ಪ್ರಾಣೇಶ್ ಮತ್ತು ಕೋಮಲ ಅವರುಗಳು ತಿಳಿಸಿದ್ದಾರೆ.

ತಾ. ೭ ರಿಂದ ೧೨ರವರೆಗೆ ಪ್ರತಿದಿನ ಬೆಳಿಗ್ಗೆ ೭ರಿಂದ ಸಂಜೆ ೮ರ ತನಕ ಜೇಸಿವೇದಿಕೆ ಮುಂಭಾಗದ ಅಟಲ್‌ಜಿ ಕನ್ನಡ ಭವನದಲ್ಲಿ ಕಾರ್ಯಕ್ರಮ ನಡೆಯಲಿದೆ. ತಾ.೧೪ರಿಂದ ಮಿನಿ ವಿಧಾನಸೌಧ ಹಿಂಬದಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ‘ನೆಮ್ಮದಿಯ ಜೀವನಕ್ಕೆ ಧ್ಯಾನವೇ ದಿವ್ಯ ಔಷದಿ’ü ಬಗ್ಗೆ ಪ್ರವಚನ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಳಿಗ್ಗೆ ೬.೩೦ ರಿಂದ ೮ ಗಂಟೆಯವರೆಗೆ ಸಾರ್ವಜನಿಕರಿಗೆ, ೧೦.೩೦ರಿಂದ ಹಿರಿಯ ನಾಗರಿಕರಿಗೆ, ಸಂಜೆ ೪ರಿಂದ ಮಹಿಳೆಯರಿಗೆ, ಸಂಜೆ ೬.೩೦ರಿಂದ ೮ಗಂಟೆಯವರೆಗೆ ಸಾರ್ವಜನಿಕರಿಗೆ ಉಚಿತ ಪ್ರವಚನ ನಡೆಯಲಿದೆ ಎಂದು ತಿಳಿಸಿದ್ದಾರೆ.

ಇಂದು ಸಮಾಜದಲ್ಲಿ ನಕಾರಾತ್ಮಕ ಭಾವನೆಗಳು ಮಿತಿಮೀರಿ ಬೆಳೆಯುತ್ತಿವೆ. ಇದರಿಂದ ಅನಾರೋಗ್ಯ ಹೆಚ್ಚಾಗುತ್ತಿದೆ. ಸಂಬAಧದಲ್ಲಿ ಬಿರುಕು ಬೀಳುತ್ತಿದೆ. ಮೂಢನಂಬಿಕೆ ಹೆಚ್ಚುತ್ತಿದೆ. ಇವುಗಳನ್ನು ಸುಧಾರಿಸಿಕೊಳ್ಳಲು ಭಗವಂತನು ಕಲಿಸುವ ರಾಜಯೋಗವು ಸಹಕಾರಿಯಾಗುತ್ತದೆ. ದಿನ ೨೪ ಗಂಟೆಯಲ್ಲಿ ಒಂದು ಗಂಟೆಯನ್ನು ಪ್ರವಚನ ಕೇಳಲು ಮುಂದಾದರೆ ಆರೋಗ್ಯ, ನೆಮ್ಮದಿ ಲಭಿಸುತ್ತದೆ ಎಂದ ಅವರು, ರಾಜಯೋಗ ಕಾರ್ಯಕ್ರಮದಲ್ಲಿ ನೀತಿ ಶಿಕ್ಷಣದ ಜೊತೆಗೆ ವ್ಯಸನಮುಕ್ತ ಆಂದೋಲನವನ್ನು ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.