ಸೋಮವಾರಪೇಟೆ, ಅ. ೫: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ತಾ. ೭ರಿಂದ ವಾರ್ಡ್ ಸಭೆಗಳು ನಡೆಯಲಿವೆ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಂ.ಆರ್. ವಿನೋದ್ ತಿಳಿಸಿದ್ದಾರೆ.
ತಾ. ೭ರಂದು ನೇಗಳ್ಳೆ-ಕರ್ಕಳ್ಳಿ ಗ್ರಾಮದ ವಾರ್ಡ್ ಸಭೆಯು ಪೂರ್ವಾಹ್ನ ೧೦.೩೦ ಗಂಟೆಗೆ ನೇಗಳ್ಳೆ-ಕರ್ಕಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾ.ಪಂ. ಸದಸ್ಯ ಎನ್.ಜಿ. ರಾಮ್ದೇವ್ ಅಧ್ಯಕ್ಷತೆಯಲ್ಲಿ, ಮಸಗೋಡು ಗ್ರಾಮದ ವಾರ್ಡ್ ಸಭೆ ಅಪರಾಹ್ನ ೨ ಗಂಟೆಗೆ ತಣ್ಣೀರುಹಳ್ಳ ಗ್ರಾಮದ ಸಮುದಾಯ ಭವನದಲ್ಲಿ ಸದಸ್ಯ ಟಿ.ಆರ್. ಪ್ರವೀಣ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಯಲಕನೂರು ಗ್ರಾಮದ ವಾರ್ಡ್ ಸಭೆ ತಾ. ೮ರಂದು ಪೂರ್ವಾಹ್ನ ೧೦.೩೦ ಗಂಟೆಗೆ ಯಲಕನೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸದಸ್ಯೆ ಸುಮಿ ಅವರ ಅಧ್ಯಕ್ಷತೆಯಲ್ಲಿ, ನೇರುಗಳಲೆ ಗ್ರಾಮದ ವಾರ್ಡ್ ಸಭೆ ಅಪರಾಹ್ನ ೨ ಗಂಟೆಗೆ ನೇರುಗಳಲೆ ಗ್ರಾಮ ಪಂಚಾಯಿತಿ ಸಮುದಾಯ ಭವನದಲ್ಲಿ ಸದಸ್ಯೆ ಪುಷ್ಪ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ವಿನೋದ್ ಮಾಹಿತಿ ನೀಡಿದ್ದಾರೆ.