ಗುಡ್ಡೆಹೊಸೂರು, ಅ. ೫: ಅಶುಚಿತ್ವದಿಂದ ಕೂಡಿದೆ ಹಾಗೂ ಕೆಟ್ಟ ಪದಾರ್ಥ ವನ್ನು ಅಡುಗೆ ತಯಾರಿಕೆ ಯಲ್ಲಿ ಬಳಸಿದ ಹಿನ್ನೆಲೆ ಹೊಟೇಲ್‌ಗೆ ಸ್ಥಳೀಯ ಗ್ರಾ.ಪಂ. ಬೀಗ ಜಡಿಯಿತು.

ಇಲ್ಲಿಗೆ ಸಮೀಪದ ನಂಜರಾಯಪಟ್ಟಣದ ‘ಚಾಟ್ಸ್’ ಎಂಬ ಹೊಟೇಲ್‌ನಲ್ಲಿ ಕೊಳೆತ ಮೀನು, ಮಾಂಸ, ಮತ್ತು ತರಕಾರಿಗಳಿಂದ ಗ್ರಾಹಕರಿಗೆ ಅಡುಗೆ ತಯಾರಿಸಿಕೊಡಲಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಮತ್ತು ಅಭಿವೃದ್ದಿ ಅಧಿಕಾರಿ ಎಂ.ಎಸ್. ರಾಜಶೇಖರ್, ಕಾರ್ಯದರ್ಶಿ ಹೋಟೆಲ್‌ಗೆ ಭೇಟಿ ನೀಡಿ ಅಶುಚಿತ್ವದಿಂದ ಕೂಡಿದ ಹೊಟೇಲ್‌ನ್ನು ಬಂದ್ ಮಾಡಿಸಿ ಕ್ರಮಕೈಗೊಂಡರು.

-ಗಣೇಶ್ ಕುಡೆಕ್ಕಲ್