ಮಡಿಕೇರಿ, ಅ. ೪: ಓಡಿಪಿ ಸಂಸ್ಥೆ, ಚೆನ್ನಯ್ಯನಕೋಟೆ ಪಂಚಾಯಿತಿ ಹಾಗೂ ಆರೋಗ್ಯ ಕೇಂದ್ರದ ಸಹಕಾರದಲ್ಲಿ ಆರೋಗ್ಯ ಕೇಂದ್ರ ಹಾಗೂ ತಿತಿಮತಿಯ ಮರೂರು ಅಂಗನವಾಡಿಯ ಸುತ್ತ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಯಿತು.
ಹೊಳಮಾಳದ ಚೆನ್ನಯ್ಯನಕೋಟೆ ಸಮುದಾಯ ಆರೋಗ್ಯ ಕೇಂದ್ರದ ಪಿಹೆಚ್ಓಗಳಾದ ಸಾಗರ, ವಿಕ್ರಮ್, ಆಶಿಕಾ, ಆಶಾಕಾರ್ಯಕರ್ತೆಯರಾದ ಲಲಿತಾ, ತಿತಿಮತಿಯ ಚಂದ್ರಕಲಾ ರಾಜಮ್ಮ, ವಿಹೆಚ್ಇಒ ಶಿವಯ್ಯ, ಪಂಚಾಯಿತಿ ಸದಸ್ಯೆಯರಾದ ಆಶಾ, ರೇಷ್ಮ ಹಾಗೂ ಶಿಲ್ಪ ಹಾಜರಿದ್ದರು. ಸ್ವಸಹಾಯ ಸಂಘದ ಸದಸ್ಯರಾದ ಬಿಂದು, ಶೃತಿ, ಚಂದ್ರಕಲಾ ಇನ್ನಿತರರು ಹಾಜರಿದ್ದರು.