ಸೋಮವಾರಪೇಟೆ, ಅ. ೪: ತಾಲೂಕಿನ ಕಿರಗಂದೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ತಾಕೇರಿ ಗ್ರಾಮದ ಚಂದಾಣಿ ಬಾಣೆಯಲ್ಲಿರುವ ಬಸ್ ನಿಲ್ದಾಣವನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿಯಲಾಯಿತು.
ಕಿರಗಂದೂರು ಶಕ್ತಿ ಕೇಂದ್ರದ ಅಧ್ಯಕ್ಷ ಎಚ್.ಎಂ. ಸುಧೀರ್, ಕಿರಗಂದೂರು ಬೂತ್ ಅಧ್ಯಕ್ಷ ಕೆ.ಪಿ. ಚಂದ್ರಾಜು, ತಾಕೇರಿ ಬೂತ್ ಅಧ್ಯಕ್ಷ ರಾಜ್ಕುಮಾರ್, ಶಿವಕುಮಾರ್, ಸಂತೋಷ್, ಸಚಿನ್, ಸುರೇಶ, ನಿತ್ಯ ಹಾಗೂ ಇತರರು ಉಪಸ್ಥಿತರಿದ್ದರು.