ಸೋಮವಾರಪೇಟೆ, ಅ. ೪: ತಾಲೂಕಿನಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಪರಿಸರ ಸಂರಕ್ಷಣಾ ಕ್ಷೇತ್ರದಲ್ಲಿ ಕಳೆದ ನಾಲ್ಕೆöÊದು ವರ್ಷಗಳಿಂದ ಕೆಲಸ ಮಾಡುತ್ತಿರುವ ‘ನಾವು ಪ್ರತಿಷ್ಠಾನ’ ಸಂಸ್ಥೆಯ ಕಾರ್ಯ ಚಟುವಟಿಕೆಗಳ ಮಾಹಿತಿಯನ್ನೊಳಗೊಂಡ ವದ್ದಳ್ಳಿ ಪ್ರಕಾಶನದ ಕಿರು ಪುಸ್ತಕವನ್ನು ಸಾಮಾಜಿಕ ಕಾರ್ಯಕರ್ತೆ ಮೋನಿಕಾ ಅವರು ಸಂಸ್ಥೆಯ ಕಚೇರಿಯಲ್ಲಿ ಲೋಕಾರ್ಪಣೆಗೊಳಿಸಿದರು.

ಕಾರ್ಯಕ್ರಮದಲ್ಲಿ ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು, ಕಾರ್ಯಕಾರಿ ನಿರ್ದೇಶಕಿ ಸುಮನ್ ಮ್ಯಾಥ್ಯೂ, ಸದಸ್ಯರುಗಳಾದ ಪೊನ್ನಪ್ಪ, ರವಿಕುಮಾರ್, ಪ್ರಜ್ವಲ್, ಕಾರ್ತಿಕ್ ಕಿರಗಂದೂರು ಇದ್ದರು.