ಗೋಣಿಕೊಪ್ಪಲು, ಅ. ೩: ಗೋಣಿಕೊಪ್ಪಲುವಿನ ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ನಡೆಯುವ ೪೬ನೇ ವರ್ಷದ ದಸರಾ ಜನೋತ್ಸವದ ಅಂಗವಾಗಿ ಹಸ್ತ ನಕ್ಷತ್ರ - ಕನ್ಯಾ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸುವ ಮೂಲಕ ಕಾರ್ಯಕ್ರಮ ಆರಂಭಿಸಲಾಯಿತು. ನಗರದ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ಮುಂಜಾನೆಯಿAದಲೇ ಶಾಸ್ತೊçÃಕ್ತವಾಗಿ ಪೂಜಾ ಕಾರ್ಯ ನೆರವೇರಿಸುವ ಮೂಲಕ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ದೇವಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಹಿರಿಯ ವೈದ್ಯ ಡಾ. ಶಿವಪ್ಪ ಅವರು ಭಕ್ತಿಗೀತೆ ಹಾಡುವ ಮೂಲಕ ಪೂಜಾ ಕಾರ್ಯಕ್ಕೆ ಚಾಲನೆ ನೀಡಿದರು. ಮುಂಜಾನೆಯೆ ಗಣಪತಿ ಹೋಮದೊಂದಿಗೆ ಪೂಜೆ ಆರಂಭವಾಯಿತು. ಶ್ರೀ ಕಾವೇರಿ ದಸರಾ ಸಮಿತಿಯ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅಧ್ಯಕ್ಷತೆಯಲ್ಲಿ ಚಾಮುಂಡೇಶ್ವರಿ ದೇವಿಯ ಪ್ರತಿಷ್ಠಾಪನೆ ನೆರವೇರಿತು.
ಪ್ರತಿ ವರ್ಷದಂತೆ ಈ ಸಾಲಿನಲ್ಲಿಯೂ ಕೇಶವ್ ಕಾಮತ್ ಹಾಗೂ ಸಹೋದರರು ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ದಸರಾ ಸಮಿತಿಗೆ ಹಸ್ತಾಂತರ ಮಾಡಿದರು. ಈ ವೇಳೆ ಮಾತನಾಡಿದ ಹಿರಿಯರಾದ ಎಂ.ಪಿ. ಕೇಶವ್ ಕಾಮತ್ ಕಳೆದ ೪೬ ವರ್ಷಗಳ ಹಿಂದೆ ಪ್ರಾರಂಭವಾದ ಗೋಣಿಕೊಪ್ಪ ದಸರಾ ಹಂತಹAತವಾಗಿ ಉತ್ತಮವಾಗಿ ಸಾಗುತ್ತ ಬರುತ್ತಿದೆ. ನಾಗರಿಕರಿಗೆ ೧೦ ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಕಾವೇರಿ ಕಲಾ ವೇದಿಕೆಯಲ್ಲಿ ಉತ್ತಮವಾಗಿ ಮೂಡಿ ಬರಲಿದೆ. ಸರ್ಕಾರದ ಅನುದಾನವು ಲಭಿಸುತ್ತಿರುವುದು ದಸರಾ ಯಶಸ್ವಿಗೆ ಕಾರಣವಾಗಿದೆ ಎಂದರು.
ಕುಲ್ಲಚAಡ ಪ್ರಮೋದ್ ಗಣಪತಿ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು
(ಮೊದಲ ಪುಟದಿಂದ) ಶಾಸ್ತೊçÃಕ್ತವಾಗಿ ಚಾಮುಂಡೇಶ್ವರಿ ದೇವಿಯನ್ನು ಪ್ರತಿಷ್ಠಾಪಿಸಿ ದೇವಿಯ ಆರ್ಶೀವಾದದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇವೆ. ಸರ್ಕಾರದಿಂದ ಶಾಸಕ ಪೊನ್ನಣ್ಣನವರು ೭೫ ಲಕ್ಷ ಅನುದಾನ ಒದಗಿಸಿದ್ದಾರೆ. ಉತ್ತಮ ರೀತಿಯಲ್ಲಿ ದಸರಾ ಆಚರಣೆ ನಡೆಯಲಿದೆ. ನಾಗರಿಕರ ಸಹಕಾರ ಅಗತ್ಯ ಎಂದರು.
ಇದೇ ಮೊದಲ ಬಾರಿಗೆ ನಗರದ ಬಸ್ ನಿಲ್ದಾಣದಲ್ಲಿ ಸೈಕ್ಲೋನ್ ರಮೇಶ್ ಅವರ ತಂಡದಿAದ ಉತ್ತಮ ನೃತ್ಯ ಪ್ರದರ್ಶನ ಮಾಡುವ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ದಿಲನ್ ಚಂಗಪ್ಪ ಮುಂದಾಳತ್ವದಲ್ಲಿ ಕಾರ್ಯಕ್ರಮ ಅರ್ಥಪೂರ್ಣವಾಗಿ ಜರುಗಿತು. ನಿಲ್ದಾಣದಲ್ಲಿ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯ ಪ್ರದರ್ಶನ ಗಮನ ಸೆಳೆಯಿತು. ನೂರಾರು ಸಂಖ್ಯೆಯಲ್ಲಿ ನಾಗರಿಕರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾವೇರಿ ದಸರಾ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಬಿ.ಎನ್. ಪ್ರಕಾಶ್, ಮನ್ನಕ್ಕಮನೆ ಸೌಮ್ಯಬಾಲು, ಕುಲ್ಲಚಂಡ ಬೋಪಣ್ಣ ಸೇರಿದಂತೆ ದಸರಾ ಸಮಿತಿಯ ವಿವಿಧ ಪದಾಧಿಕಾರಿಗಳಾದ ಎನ್.ಎಸ್. ಕಂದಾ ದೇವಯ್ಯ, ದಿಲನ್ ಚಂಗಪ್ಪ, ಧ್ಯಾನ್ ಸುಬ್ಬಯ್ಯ, ನಾಯಂದರ ಶಿವಾಜಿ, ಎಂ. ಮಂಜುಳ, ಕಡೇಮಾಡ ಕುಸುಮಾ ಜೋಯಪ್ಪ, ಧನಲಕ್ಷಿö್ಮ, ವಿ.ಟಿ. ವಾಸು, ಕೆ. ರಾಜೇಶ್, ಶ್ರೀ ಕಾವೇರಿ ದಸರಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. -ಹೆಚ್.ಕೆ. ಜಗದೀಶ್, ದಿನೇಶ್