ಮಡಿಕೇರಿ, ಅ. ೩: ಐತಿಹಾಸಿಕ ನಾಡಹಬ್ಬ ಮಡಿಕೇರಿ ದಸರಾ ಉತ್ಸವಕ್ಕೆ ಸಂಬAಧಿಸಿದAತೆ ಇಂದು ದಸರಾ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯಾಧ್ಯಕ್ಷರು ಪತ್ಯೇಕ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು.

ವೈವಿಧ್ಯಮಯ ಕಾರ್ಯಕ್ರಮ

ತಾ. ೪ ರಿಂದ ೧೨ ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ನಡೆಯಲಿವೆ ಎಂದು ಜಿಲ್ಲಾಧಿಕಾರಿ, ದಸರಾ ಸಮಿತಿ ಅಧ್ಯಕ್ಷ ವೆಂಕಟ್ ರಾಜಾ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ತಾ. ೪ ರಂದು ಸಂಜೆ ೬ ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ತಾ. ೫ ರಂದು ಬೆಳಿಗ್ಗೆ ‘ಮಕ್ಕಳ ದಸರಾ’, ಸಂಜೆ ೬ ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ತಾ. ೬ ಮತ್ತು ೭ ರಂದು ‘ಕಾಫಿ ದಸರಾ’ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಕೃಷಿ ಸಚಿವ ಚೆಲುವರಾಯಸ್ವಾಮಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದರು.

ವೈವಿಧ್ಯಮಯ ಕಾರ್ಯಕ್ರಮ

(ಮೊದಲ ಪುಟದಿಂದ) ತಾ. ೮ ರಂದು ‘ಮಹಿಳಾ ದಸರಾ’, ತಾ. ೯ ರಂದು ಕವಿಗೋಷ್ಠಿ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ತಾ. ೧೦ ರಂದು ‘ಜಾನಪದ ದಸರಾ’ ನಡೆಯಲಿದೆ. ಅಂದು ಸಂಜೆ ೬ ಗಂಟೆಗೆ ‘ಯುವ ದಸರಾ’ ನಡೆಯಲಿದ್ದು, ಯುವ ದಸರಾಕ್ಕೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಿದರು.

ತಾ. ೧೧ ರ ಆಯುಧ ಪೂಜೆಯಂದು ಸಂಜೆ ೬ ಗಂಟೆಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಹಿನ್ನೆಲೆ ಗಾಯಕ ರಾಜೇಶ್ ಕಷ್ಣನ್ ಮತ್ತು ತಂಡದವರಿAದ ಸಂಗೀತ ರಸಮಂಜರಿ ನಡೆಯಲಿದೆ. ತಾ. ೧೨ರಂದು ವಿಜಯದಶಮಿ ಪ್ರಯುಕ್ತ ದಶಮಂಟಪಗಳ ಶೋಭಾಯಾತ್ರೆ, ವೈವಿಧ್ಯಮ ಕಾರ್ಯಕ್ರಮಗಳು ಮೂಡಿ ಬರಲಿವೆ. ತಾ. ೧೧ ಅಥವಾ ೧೨ ರಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವÀ ಎನ್.ಎಸ್. ಭೋಸರಾಜು, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಆಗಮಿಸುವ ಸಾಧ್ಯತೆ ಇದೆ. ದಸರಾ ಆಚರಣೆಗೆ ಎಲ್ಲರ ಸಹಕಾರ ಅತ್ಯಗತ್ಯ. ದಸರಾ ಸಂದರ್ಭ ಯಾರೂ ಸಹ ಪ್ಲಾಸ್ಟಿಕ್ ಬಳಸದಂತೆ ಗಮನಹರಿಸಬೇಕು. ತ್ಯಾಜ್ಯವನ್ನು ಕಡ್ಡಾಯವಾಗಿ ಡಸ್ಟ್ಬಿನ್‌ಲ್ಲಿ ಹಾಕಬೇಕು.

ಅಗತ್ಯವಿರುವ ಕಡೆ ತಾತ್ಕಾಲಿಕ ಶೌಚಾಲಯ ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.

ವಿಜೃಂಭಣೆಯ ದಸರಾ

ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸರಾ ಸಮಿತಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಶಾಸಕ ಡಾ. ಮಂತರ್ ಗೌಡ ಅವರ ಪ್ರಯತ್ನದಿಂದ ಈ ಬಾರಿ ಹಿಂದೆAದಿಗಿAತಲೂ ಹೆಚ್ಚಿನ ಅನುದಾನ ಮಡಿಕೇರಿ ದಸರಾ ಉತ್ಸವಕ್ಕೆ ಬಂದಿದೆ.

ರೂ. ೧.೫೦ ಕೋಟಿ ಅನುದಾನ ಬಳಸಿ ಅತ್ಯಂತ

ವಿಜೃಂಭಣೆಯ ದಸರಾ

(ಮೊದಲ ಪುಟದಿಂದ) ಅದ್ಧೂರಿ ಹಾಗೂ ವಿಜೃಂಭಣೆಯಿAದ ಈ ಬಾರಿ ದಸರಾ ಉತ್ಸವ ನಡೆಯಲಿದೆ ಎಂದರು. ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಬಿ.ವೈ ರಾಜೇಶ್ ಯಲ್ಲಪ್ಪ ಮಾತನಾಡಿ, ನಗರದಲ್ಲಿ ಕರಗಗಳು ಸಾಗುವ ರಸ್ತೆ, ದಶಮಂಟಪಗಳು ಸಾಗುವ ರಸ್ತೆಗಳನ್ನು ತುರ್ತಾಗಿ ದುರಸ್ತಿಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ. ರೂ. ೧.೫೦ ಕೋಟಿ ಅನುದಾನ ಘೋಷಣೆಯಾಗಿರುವುದರಿಂದ ದಶಮಂಟಪಗಳಿಗೆ ಹಾಗೂ ಕರಗಗಳಿಗೆ ಕಳೆದ ಬಾರಿಗಿಂತ ಹೆಚ್ಚು ಅನುದಾನ ಸಿಗಲಿದೆ ಎಂದರು.

ದಶಮಂಟಪ ಸಮಿತಿ ಅಧ್ಯಕ್ಷ ಜಿ.ಸಿ ಜಗದೀಶ್ ಮಾತನಾಡಿ, ಮಂಟಪಗಳಿಗೆ ನಿಗದಿಪಡಿಸಿದ ಉದ್ದಗಲ ಸೇರಿದಂತೆ ಎತ್ತರದ ಮಿತಿಯನ್ನು ಪಾಲನೆ ಮಾಡಿ ದಶಮಂಟಪಗಳು ತಯಾರಾಗುತ್ತಿವೆ. ಧ್ವನಿ ಮಿತಿ ಸಂಬAಧ ೨ ದಿನಗಳಲ್ಲಿ ಸಂಬAಧಿಸಿದವರೊAದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ದಸರಾ ಸಮಿತಿ ಖಜಾಂಚಿ ಅರುಣ್ ಶೆಟ್ಟಿ, ಟೀಂ ತ್ರೀಡಿಯ ಲೋಕೇಶ್ ಉಪಸ್ಥಿತರಿದ್ದರು.