ಮಡಿಕೇರಿ, ಅ. ೩: ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಸುಮಿತ್ರ ಕೆ.ಎಸ್ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ್ದ ಅಮೂಲ್ಯ ಸೇವೆಗಾಗಿ ಪ್ರಗತಿಪರ ಪ್ರಾಂಶುಪಾಲೆ ಪ್ರಶಸ್ತಿ ಲಭಿಸಿದೆ.

ಆಂಧ್ರಪ್ರದೇಶ ಮತ್ತು ತೆಲಂಗಾಣ ಶಿಕ್ಷಣೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಯಿತು. ಎಜುಕೇಶನ್ ಟುಡೇನ ಎಜುಕೇಶನ್ ನ್ಯೂಸ್ ನೆಟ್‌ವರ್ಕ್ (ಇಎನ್‌ಎನ್) ಕಾರ್ಯಕ್ರಮ ಆಯೋಜಿಸಿತ್ತು. ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಸುಮಿತ್ರ ಅವರು ಸಲ್ಲಿಸಿರುವ ಸೇವೆ, ದೃಢಸಂಕಲ್ಪ ಮತ್ತು ಶ್ರಮವನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.