*ಗೋಣಿಕೊಪ್ಪ, ಅ. ೩: ೪೬ನೇ ವರ್ಷದ ಕಾವೇರಿ ದಸರಾ ಸಮಿತಿ ದಸರಾ ಜನೋತ್ಸವ ಅಚರಣೆಯ ೯ನೇ ವರ್ಷದ ಮಹಿಳಾ ದಸರಾದ ಲಾಂಛನವನ್ನು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ರಮಾವತಿ ಬಿಡುಗಡೆಗೊಳಿಸಿದರು.

ಗ್ರಾ.ಪಂ. ಹಳೆಯ ಕಟ್ಟಡ ಸಭಾಂಗಣದಲ್ಲಿ ಮಹಿಳಾ ದಸರಾ ಸಮಿತಿ ಸದಸ್ಯರುಗಳ ಉಪಸ್ಥಿತಿಯಲ್ಲಿ ಲಾಂಛನ ಅನಾವರಣ ಮಾಡಲಾಯಿತು.

ಈ ಸಂದರ್ಭ ಮಹಿಳಾ ದಸರಾ ಅದ್ಯಕ್ಷೆ ಎಂ. ಮಂಜುಳಾ ಮಾತನಾಡಿ, ವಿವಿಧÀ ಮನರಂಜನೆ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳಾ ದಸರಾವನ್ನು ಅರ್ಥಪೂರ್ಣವಾಗಿ ನಡೆಸಲಾಗುವುದು.

ಮಹಿಳಾ ಸಬಲೀಕರಣ ಮತ್ತು ಮಹಿಳೆಯರ ಬಲವರ್ಧನೆಗಾಗಿ ಮಹಿಳಾ ದಸರಾವನ್ನು ೯ ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು.

ಮಹಿಳೆಯರು ಗೋಣಿಕೊಪ್ಪ ದಸರಾ ಜನೋತ್ಸವದಲ್ಲಿ ತೊಡಗಿಸಿಕೊಳ್ಳುವ ಮೂಲಕ ತಮ್ಮ ಮಾನಸಿಕ ದೃಢತೆಯನ್ನು ಹೆಚ್ಚಿಸಿಕೊಳ್ಳಲು ಸಾಧ್ಯವಿದೆ ಮತ್ತು ಸಾಮಾಜಿಕವಾಗಿ ಗುರುತಿಸಿಕೊಳ್ಳಲು ಕೂಡ ಈ ಮಹಿಳಾ ದಸರಾ ವೇದಿಕೆ ಸಾಧ್ಯವಾಗುತ್ತಿದೆ.

ಈ ಬಾರಿ ತಾ. ೬ ರಂದು ಮಹಿಳಾ ದಸರಾ ನಡೆಯಲಿದೆ ಎಂದರು. ಕಾವೇರಿ ದಸರಾ ಸಮಿತಿ ಅಧ್ಯಕ್ಷ ಪ್ರಮೋದ್ ಗಣಪತಿ, ಪ್ರಧಾನ ಕಾರ್ಯದರ್ಶಿ ಕಂದಾ ದೇವಯ್ಯ, ಕಾರ್ಯದರ್ಶಿ, ವರಲಕ್ಷಿö್ಮ, ಸಾಂಸ್ಕತಿಕ ಸಮಿತಿ ಸಂಚಾಲಕ ಪಾರುವಂಗಡ ದಿಲನ್ ಚಂಗಪ್ಪ, ಮಹಿಳಾ ದಸರಾ ಸಮಿತಿ ಉಪಾಧ್ಯಕ್ಷೆ ಕಡೇಮಾಡ ಕುಸುಮ ಜೋಯಪ್ಪ, ಖಜಾಂಚಿ ರಜನಿ, ಪದಾಧಿಕಾರಿಗಳಾದ ಓಮನ, ಗೀತಾ ನಾಯ್ಡು, ನೂರೇರ ಧÀನ್ಯ ರವೀಂದ್ರ, ಸುಲೇಖ, ಸಪೂರ ಬಾನು, ಸುನೀತಾ, ಸುಮಿತ್ರ, ರಸೀಯ, ಯಾಸ್ಮಿನ್, ಚಂದನ ಮಂಜುನಾಥ್ ಹಾಗೂ ಧÀನಲಕ್ಷಿö್ಮ ಇದ್ದರು.