ಪೊನ್ನಂಪೇಟೆ, ಅ. ೨: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ಘಟಕದ ವತಿಯಿಂದ ರಾಷ್ಟಿçÃಯ ಸೇವಾ ಯೋಜನೆ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭ ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಎನ್.ಎಸ್.ಎಸ್. ಧ್ವಜಾರೋಹಣ ನೆರವೇರಿಸಿ ಮಾತನಾಡಿ, ರಾಷ್ಟಿçÃಯ ಸೇವಾ ಯೋಜನೆಯು ವಿದ್ಯಾರ್ಥಿಗಳಲ್ಲಿ ರಾಷ್ಟಿçÃಯ ಭಾವೈಕ್ಯತೆಯನ್ನು ಮೂಡಿಸುವುದರ ಜೊತೆಗೆ, ಸಮಾಜ ಸೇವೆ ಮಾಡುವ ಗುಣವನ್ನು ಬೆಳೆಸುತ್ತದೆ ಎಂದರು.

ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಮಾತನಾಡಿ, ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವವನ್ನು ಕೊಡುವ ಗುಣವನ್ನು ಮೈಗೂಡಿಸಿಕೊಂಡು, ತಮ್ಮನ್ನು ಸದೃಢ ಸಮಾಜ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಈ ಸಂದರ್ಭ ಪದವಿ ಕಾಲೇಜು ಎನ್.ಎಸ್.ಎಸ್. ಅಧಿಕಾರಿ ಎನ್.ಪಿ. ರೀತಾ, ಪದವಿಪೂರ್ವ ಕಾಲೇಜು ಎನ್.ಎಸ್.ಎಸ್. ಅಧಿಕಾರಿ ವಿಪ್ರ ನೀಲಮ್ಮ, ಹಿರಿಯ ಉಪನ್ಯಾಸಕಿ ಪದ್ಮ, ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ನಯನ ತಮ್ಮಯ್ಯ, ಉಪನ್ಯಾಸಕರು, ಪದವಿ ಹಾಗೂ ಪದವಿಪೂರ್ವ ಕಾಲೇಜು ಎನ್.ಎಸ್.ಎಸ್. ಸ್ವಯಂ ಸೇವಕ, ಸೇವಕಿಯರು ಹಾಜರಿದ್ದರು.

ಸ್ವಚ್ಛತಾ ಅರಿವು

ಎನ್.ಎಸ್.ಎಸ್. ದಿನಾಚರಣೆ ಪ್ರಯುಕ್ತ ಪೊನ್ನಂಪೇಟೆ ತಾಲೂಕಿನ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಗ್ರಾಮ ಸಮೀಪದ ಬಸವೇಶ್ವರ ಗಿರಿಜನ ಹಾಡಿಗೆ ತೆರಳಿದ ವಿದ್ಯಾರ್ಥಿಗಳು, ಅಲ್ಲಿನ ಮನೆಮನೆಗೆ ತೆರಳಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ, ಮನೆ ಸಮೀಕ್ಷೆ ನಡೆಸಿದರು.

ರಸ್ತೆ ಬದಿಯ ಹಾಗೂ ಅಲ್ಲಿನ ಆಟದ ಮೈದಾನದಲ್ಲಿ ಬೆಳೆದಿದ್ದ ಕಾಡು ಕಡಿದು ಸ್ವಚ್ಛ ಮಾಡಿದರು. ಈ ಸಂದರ್ಭ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಅಧ್ಯಕ್ಷ ಪಿ.ಸಿ. ಮಂಜು ಬೋಪಣ್ಣ ಮಾತನಾಡಿ, ವಿದ್ಯಾರ್ಥಿಗಳು ಸೇವಾ ಮನೋಭಾವನೆಯೊಂದಿಗೆ ಹಾಡಿಗೆ ಆಗಮಿಸಿ ಇಲ್ಲಿನ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿ, ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಸಮೀಕ್ಷೆ ನಡೆಸುವ ಕಾರ್ಯ ಮಾಡಿರುವುದು ಶ್ಲಾಘನೀಯ. ಎನ್.ಎಸ್.ಎಸ್.ನಿಂದ ಕಲಿತ ಉತ್ತಮ ಗುಣಗಳನ್ನು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಳ್ಳಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಸವೇಶ್ವರ ಗಿರಿಜನ ಹಾಡಿಯ ಅಧ್ಯಕ್ಷ ವೈ.ಬಿ. ಗಪ್ಪು ಅವರು ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು, ಜಿಲ್ಲಾಧಿಕಾರಿ ಹಾಗೂ ಇನ್ನಿತರ ದೊಡ್ಡ ಹುದ್ದೆಗೆ ಸೇರಿ, ಸಮಾಜದಲ್ಲಿ ತುಳಿತಕ್ಕೊಳಗಾದವರ, ಬಡಜನರ ಸೇವೆಗೆ ಮುಂದಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗದ ವತಿಯಿಂದ ಹಾಡಿಯಲ್ಲಿ ಹಣ್ಣಿನ ಗಿಡಗಳನ್ನು ನೆಡಲಾಯಿತು. ಸ್ವಯಂ ಸೇವಕರು ನೃತ್ಯ ಹಾಗೂ ಹಾಡಿನ ಮೂಲಕ ರಂಜಿಸಿದರು.

ಈ ಸಂದರ್ಭ ಎನ್.ಎಸ್.ಎಸ್. ಅಧಿಕಾರಿ ಎನ್.ಪಿ. ರೀತಾ, ಜೆ.ಸಿ.ಐ. ಪೊನ್ನಂಪೇಟೆ ನಿಸರ್ಗ ಘಟಕದ ಕಾರ್ಯದರ್ಶಿಗಳಾದ ಸುಜಿತ್ ಮತ್ತು ಅಯ್ಯಪ್ಪ, ಉಪನ್ಯಾಸಕರಾದ ಪೂಜಾ, ಸಂತೋಷ್, ಬಸವೇಶ್ವರ ಹಾಡಿ ಗ್ರಾಮಸ್ಥರು, ಎನ್.ಎಸ್.ಎಸ್. ಸ್ವಯಂ ಸೇವಕ, ಸೇವಕಿಯರು ಹಾಜರಿದ್ದರು.