ಶನಿವಾರಸಂತೆ, ಅ. ೨: ಪಟ್ಟಣದ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಮೂರ್ನಾಡುವಿನಲ್ಲಿ ನಡೆದ ಕೊಡಗು ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಬಾಲಕಿಯರ ವಿಭಾಗದ ಟೆನ್ನಿಕಾಯ್ಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿ, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿಯರಾದ ದ್ವಿತೀಯ ಪಿ.ಯು. ತರಗತಿಯ ಬಿ.ಎಸ್. ಲಾವಣ್ಯಾ, ಡಿ.ಎಂ. ಮೋಕ್ಷಾ ಹಾಗೂ ಪ್ರಥಮ ಪಿ.ಯು. ತರಗತಿಯ ಡಿ.ಆರ್. ಸಿರಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.