ನಾಪೋಕ್ಲು, ಅ. ೨: ಲಯನ್ಸ್ ಸಂಸ್ಥೆಯ ಸದಸ್ಯರು ಸೇವಾ ಮನೋಭಾವನೆಯಿಂದ ಕಾರ್ಯಗಳನ್ನು ಕೈಗೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಲಯನ್ಸ್ ಗವರ್ನರ್ ಕುಟ್ಟಂಡ ಕನ್ನಿಕಾ ಅಯ್ಯಪ್ಪ ಹೇಳಿದರು. ನಾಪೋಕ್ಲು ಲಯನ್ಸ್ ಕ್ಲಬ್ (ಸಂಸ್ಥೆ) ವತಿಯಿಂದ ಇಲ್ಲಿನ ಕೊಡವ ಸಮಾಜದ ರಿಕ್ರಿಯೇಶನ್ ಸ್ಪೋರ್ಟ್ಸ್ ಕ್ಲಬ್ನಲ್ಲಿ ಆಯೋಜಿಸ ಲಾಗಿದ್ದ ಬ್ಯಾಡ್ಮಿಂಟನ್ ಸ್ಪರ್ಧೆ, ರಾಜ್ಯಪಾಲರ ಭೇಟಿ ಹಾಗೂ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದಸ್ಯ ರನ್ನು ಉದ್ದೇಶಿಸಿ ಮಾತನಾಡಿದರು. ಲಯನ್ಸ್ ಸೇವಾ ಪರ ಸಂಘಟನೆಯಾಗಿದೆ. ಸಮಾಜ ಮುಖಿ ಕಾರ್ಯಕ್ರಮಗಳು ನಡೆಸುವುದರ ಮೂಲಕ ಸಂಸ್ಥೆ ಮತ್ತಷ್ಟು ಅಭಿವೃದ್ಧಿ ಹೊಂದಬೇಕು ಎಂದರು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸನ್ಮಾನಿತ ನಿವೃತ್ತ ಶಿಕ್ಷಕ ಚೇಯ್ಯಂಡ ರಘು ತಿಮ್ಮಯ್ಯ, ಪ್ರಾಂತೀಯ ರಾಜ್ಯಪಾಲರ ರಾಯಭಾರಿ ಮೋಹನ ದಾಸ್, ವಲಯ ಅಧ್ಯಕ್ಷರಾದ ಕನ್ನಂಡ ಬೊಳ್ಳಪ್ಪ, ಲಯನ್ಸ್ ಸಂಸ್ಥೆಯ ಮಹದೇವಪ್ಪ, ಸುಮನ್ ಬಾಲಚಂದ್ರ, ವಲಯ ಸಂಯೋಜಕ ಪ್ರಸನ್ನ, ಕಾರ್ಯದರ್ಶಿ ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಖಜಾಂಚಿ ಕಾಂಡAಡ ರೇಖಾ ಪೊನ್ನಣ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ್ತ ಶಿಕ್ಷಕ ಚೇಯ್ಯಂಡ ರಘು ತಿಮ್ಮಯ್ಯ (ಪತ್ನಿ ಕಸ್ತೂರಿ) ದಂಪತಿಯ ವೇದಿಕೆಯಲ್ಲಿದ್ದ ಗಣ್ಯರು ಸನ್ಮಾನಿಸಿ ಗೌರವಿಸಿದರು. ಶೈಲಾ ಭೀಮಯ್ಯ ಪ್ರಾರ್ಥಿಸಿ, ಕನ್ನಂಬಿರ ಸುಧಿ ತಿಮ್ಮಯ್ಯ ಧ್ವಜ ವಂದನೆ ನೆರವೇರಿಸಿದರು. ಕಾರ್ಯದರ್ಶಿ ರೇಷ್ಮಾ ಉತ್ತಪ್ಪ ವರದಿ ವಾಚಿಸಿ ವಂದಿಸಿದರು. ಈ ಸಂದರ್ಭ ಲಯನ್ಸ್ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಮೂರನೇ ವರ್ಷದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ವಿಜೇತರಿಗೆ ಪಾರಿ ತೋಷಕಗಳನ್ನು ವಿತರಿಸಲಾಯಿತು. ಬ್ಯಾಡ್ಮಿಂಟನ್ ಸ್ಪರ್ಧೆಯ ಕಾರ್ಯಕ್ರಮ ವನ್ನು ಬೆಳಿಗ್ಗೆ ಲಯನ್ಸ್ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಉದ್ಘಾಟಿಸಿದರು.
ಪ್ರಾಂತೀಯ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧಾ ವಿಜೇತರು
(ಪುರುಷರ ವಿಭಾಗದಲ್ಲಿ) ಭರತ್ ಮತ್ತು ಲವ ಕಾಳಪ್ಪ ಪ್ರಥಮ, ಕನ್ನಂಬಿರ ಸುಧಿ ತಿಮ್ಮಯ್ಯ ಮತ್ತು ಸುಬ್ರಮಣಿ ದ್ವಿತೀಯ ಸ್ಥಾನ ಗಳಿಸಿದರು. ಮಿಕ್ಸ್ ಡಬಲ್ಸ್ನಲ್ಲಿ ಸುಬ್ರಮಣಿ ಮತ್ತು ಕವಿತಾ ಪ್ರಥಮ, ಅಪ್ಪಣ್ಣ ಮತ್ತು ಇಂದಿರಾ ದ್ವಿತೀಯ ಸ್ಥಾನಗಳಿಸಿದರು. ವಿಜೇತರಿಗೆ ಪಾರಿತೋಷಕಗಳನ್ನು ವಿತರಿಸಲಾಯಿತು.