ವೀರಾಜಪೇಟೆ, ಅ. ೨: ಸೇವಾ ಮನೋಭಾವನೆ ಪ್ರತಿಯೊಬ್ಬರಲ್ಲೂ ಇರಬೇಕು. ಅದರಲ್ಲೂ ಪ್ರಮುಖವಾಗಿ ಯುವಕರು ಪ್ರಕೃತಿಯನ್ನು ಆದಷ್ಟು ಮಾಲಿನ್ಯ ಮುಕ್ತ ಮಾಡುವುದರ ಕಡೆಗೆ ಗಮನಹರಿಸಬೇಕು ಎಂದು ಕಾವೇರಿ ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್ ಸಲ್ದಾನ ಹೇಳಿದರು.

ವೀರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ರಾಷ್ಟಿçÃಯ ಸೇವಾ ಯೋಜನಾ ದಿನಾಚರಣೆ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಬೆನಡಿಕ್ಟ್ ಆರ್ ಸಲ್ದಾನ ಅವರು ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿ ‘ನನ್ನ ಮನೆ, ನನ್ನ ಕಾಲೇಜು, ನಮ್ಮನ್ನು ಯಾರೋ ಗಮನಿಸುತ್ತಿದ್ದಾರೆ’ ಎಂಬ ಕಾರಣಕ್ಕಾಗಿ ಶುಚಿತ್ವವನ್ನು ಕಾಪಾಡುವುದಲ್ಲ. ನಾವು ಎಲ್ಲೇ ಇದ್ದರೂ ನಮ್ಮ ಸುತ್ತಲಿನ ಪ್ರದೇಶವನ್ನು ಸದಾ ಸ್ವಚ್ಛವಾಗಿರಬೇಕು ಎಂಬ ಮನೋಭಾವನೆ ಹಾಗೂ ಸಮಾಜಕ್ಕೆ ಸೇವೆ ಸಲ್ಲಿಸುವ ಭಾವನೆ ಮೊದಲು ನಮ್ಮಲ್ಲಿ ಬಂದರೆ ನಮ್ಮನ್ನು ನೋಡಿ ಇತರರೂ ಬದಲಾಗುತ್ತಾರೆ ಎಂದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರಿಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸ್ವಚ್ಛತೆ ಎಂಬುದು ಮನದಿಂದ ಆರಂಭವಾಗಬೇಕು. ನಾವು ದೇಹ ಸ್ವಚ್ಛತೆಗೆ ಎಷ್ಟು ಪ್ರಾತಿನಿಧ್ಯವನ್ನು ನೀಡುತ್ತೇವೋ ಅದೇ ರೀತಿ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಯುವಜನತೆ ದೇಶದ ಶಕ್ತಿ ಎಂಬ ನಾಣ್ಣುಡಿಯಂತೆ ಯುವ ಜನತೆ ಬದಲಾದರೆ ದೇಶ ಬದಲಾಗುತ್ತದೆ ಎಂದರು.

ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಸ್ವಚ್ಛತೆಯೇ ಸೇವೆ ಎಂಬ ಧ್ಯೇಯವಾಕ್ಯದಡಿಯಲ್ಲಿ ವೀರಾಜಪೇಟೆ ಗೋಣಿಕೊಪ್ಪ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಎರಡು ಬದಿಗಳಲ್ಲಿದ್ದ ಪ್ಲಾಸ್ಟಿಕ್, ಪೇಪರ್, ಬಾಟಲಿ, ಕಸವನ್ನು ಸಂಗ್ರಹಿಸಿ ಪರಿಸರ ಸ್ವಚ್ಛತೆಯನ್ನು ಮಾಡಿದರು.

ಈ ಸಂದರ್ಭ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನ ಸಂಘದ ಸಂಚಾಲಕ ನಾಗರಾಜು, ಎನ್.ಎಸ್.ಎಸ್. ಯೋಜನಾಧಿಕಾರಿ ಸುನಿಲ್ ಕುಮಾರ್ ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ವರ್ಗದವರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.