ಸೋಮವಾರಪೇಟೆ, ಅ. ೨: ನೆರೆಯ ಆಂಧ್ರ ಪ್ರದೇಶದ ತಿರುಪತಿ ಬಾಲಾಜಿ ದೇವಸ್ಥಾನ ದಲ್ಲಿ ಭಕ್ತಾದಿಗಳಿಗೆ ನೀಡುವ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬಿನ ಎಣ್ಣೆಯನ್ನು ಬಳಸಿ ರುವುದು ಅಘಾತಕಾರಿ ವಿಷಯವಾಗಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿ ರುವ ದ್ರೋಹಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ದೇವಸ್ಥಾನ, ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಆಗ್ರಹಿಸಿದೆ.

ಈ ಬಗ್ಗೆ ತಾಲೂಕು ತಹಶೀಲ್ದಾರ್ ಶ್ರೀಧರ್ ಕಂಕನವಾಡಿ ಅವರ ಮೂಲಕ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಮನವಿ ಸಲ್ಲಿಸಿರುವ ಸಂಘವು, ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ.

ದೇವಸ್ಥಾನದಲ್ಲಿ ಕೊಡುವ ಲಾಡು ಕೇವಲ ಆಹಾರವಲ್ಲ; ಅದೊಂದು ಅಧ್ಯಾತ್ಮಿಕ ಭಾಗವಾಗಿದೆ. ಅದರಲ್ಲಿ ಪ್ರಾಣಿಗಳ ಕೊಬ್ಬು ಬಳಸಿ ರುವುದು ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ. ಈ ಕಾರಣದಿಂದ ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು ಎಂದು ಮನವಿ ಪತ್ರದಲ್ಲಿ ಆಗ್ರಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ ರೆಡ್ಡಿ ಮತ್ತು ಅವರ ತಂದೆ ರಾಜಶೇಖರ್ ರೆಡ್ಡಿ ಅವರ ಸರ್ಕಾರದ ಅವಧಿಯಲ್ಲಿ ತಿರುಪತಿ ದೇವಸ್ಥಾನಕ್ಕೆ ಸಂಬAಧಿಸಿ ತೆಗೆದು ಕೊಂಡ ಎಲ್ಲಾ ನಿರ್ಧಾರಗಳನ್ನು ಕೂಲಂಕಷವಾಗಿ ತನಿಖೆ ಮಾಡಬೇಕು. ಹಿಂದು ವಿರೋಧಿ ನಿರ್ಣಯ ಗಳು ಇದ್ದಲ್ಲಿ ಅವುಗಳನ್ನು ರದ್ದು ಪಡಿಸಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಮನವಿ ಸಲ್ಲಿಸುವ ಸಂದರ್ಭ ಮಹಾಸಭಾದ ಪದಾಧಿಕಾರಿಗಳಾದ ಮಂಜುನಾಥ ಆಚಾರ್ಯ, ಜಗದೀಶ್ ಉಡುಪ, ಪಿ.ಎನ್. ಪ್ರಸಾದ್, ಪ್ರಸನ್ನ ಗಾಂವಕ್ಕರ್, ಚಿತ್ರಕುಮಾರ್ ಭಟ್, ಮಣಿ ಎನ್. ಬಜೆಗುಂಡಿ, ಉದಯ್‌ಕುಮಾರ್, ಶರಣ್ ಗೌಡ ಹರಗ, ತಾಕೇರಿ ಪೊನ್ನಪ್ಪ, ಉದಯ್, ಮತ್ತಿತರರು ಇದ್ದರು.