ಸುಂಟಿಕೊಪ್ಪ, ಅ. ೨: ರಂಗಸಮುದ್ರ, ವಿವಿಧೋದ್ದೇಶ ಸಹಕಾರ ದವಸ ಭಂಡಾರ ನಿಯಮಿತದ ೮೬ನೇ ವಾರ್ಷಿಕ ಮಹಾಸಭೆಯು ದವಸ ಭಂಡಾರ "ಎ" ಕಟ್ಟಡದಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪಿ.ಎಸ್. ಬಸಪ್ಪ ವಹಿಸಿದ್ದರು.
ಕಳೆದ ಅವಧಿಯ ಮಹಾಸಭೆಯ ವರದಿಯನ್ನು ಹಾಗೂ ಸಭೆಯಲ್ಲಿ ೨೦೨೩-೨೪ ರ ಸಾಲಿನ ಜಮಾ-ಖರ್ಚು ಕರಡು ಪ್ರತಿಯನ್ನು ವಾಚಿಸುವ ಮೂಲಕ ಸಭೆಯ ಅಂಗೀಕಾರ ಪಡೆಯಲಾಯಿತು. ಪ್ರಸಕ್ತ ಸಾಲಿನ ಆಡಳಿತ ಮಂಡಳಿಯ ವರದಿಯನ್ನು ಮಂಡಿಸಲಾಯಿತು.
ಮಹಾಸಭೆಯಲ್ಲಿ ಸದಸ್ಯರುಗಳು ನೀಡಿದ ಅನೇಕ ಅಭಿವೃದ್ಧಿಪರ ಅಂಶಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಶ್ರಮವಹಿಸುವುದಾಗಿ ದವಸ ಭಂಡಾರದ ಅಧ್ಯಕ್ಷ ಪಿ.ಎಸ್. ಬಸಪ್ಪ ಅವರು ಭರವಸೆ ನೀಡಿದರು.
ಸಭೆಯಲ್ಲಿ ಉಪಾಧ್ಯP್ಷÀ ಆರ್.ಕೆ. ಚಂದ್ರ, ನಿರ್ದೇಶಕ ಎಂ.ಸಿ. ದಾಮೋದರ, ಹೆಚ್.ಬಿ. ರುದ್ರಪ್ಪ, ಎ.ಎಂ. ಲೋಕನಾಥ, ಪಿ.ಬಿ. ಅಶೋಕ, ಬಿ.ಎಸ್. ಧನಪಾಲ, ಟಿ.ಸಿ. ಶಿವಕುಮಾರ್, ಜಿ.ಆರ್. ಶಾರದ, ಕೆ.ಕೆ. ಲೀಲಾವತಿ, ಕಾರ್ಯದರ್ಶಿ, ಡಬ್ಲೂö್ಯ.ಪಿ. ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಜಾನಕಿ ಪ್ರಾರ್ಥಿಸಿ, ಎ.ಎಂ. ಲೋಕನಾಥ್ ಸ್ವಾಗತಿಸಿ, ಧನಪಾಲ ವಂದಿಸಿದರು.