ಶಿವಾಜಿ ಸೇನೆಯಿಂದ ಅ. ೫ - ೬ ರಂದು ಆಯೋಜನೆ
ಗೋಣಿಕೊಪ್ಪಲು, ಸೆ. ೩೦: ೪೬ನೇ ವರ್ಷದ ಶ್ರೀ ಕಾವೇರಿ ದಸರಾ ಸಮಿತಿಯ ಜನೋತ್ಸವ ಕಾರ್ಯಕ್ರಮದ ಅಂಗವಾಗಿ ಅ. ೫ ಹಾಗೂ ೬ ರಂದು ನಗರದ ಕಾವೇರಿ ಕಲಾ ವೇದಿಕೆಯ ಮೈದಾನದಲ್ಲಿ ಪ್ರೀಮಿಯರ್ ಲೀಗ್ ಕಬಡ್ಡಿ ಪಂದ್ಯಾಟವನ್ನು ಶಿವಾಜಿ ಸೇನೆಯಿಂದ ಹಮ್ಮಿಕೊಳ್ಳಲಾಗಿದೆ.
೩ನೇ ವರ್ಷದ ಕಬಡ್ಡಿ ಪಂದ್ಯಾವಳಿಯನ್ನು ನಡೆಸಲು ಸಿದ್ಧತೆಗಳು ಆರಂಭವಾಗಿದ್ದು, ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರನ್ನು ಶಿವಾಜಿ ಸೇನೆಯ ಅಧ್ಯಕ್ಷರಾಗಿರುವ ಎಲ್.ಎನ್. ಅಣ್ಣಪ್ಪ ಮುಂದಾಳತ್ವದಲ್ಲಿ ಸಮಿತಿಯ ಪದಾಧಿಕಾರಿಗಳು ಭೇಟಿ ಮಾಡಿ ಮೂಲಕ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಮನವಿ ಮಾಡಿದರು. ಈಗಾಗಲೇ ಮೈದಾನವನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಯುವಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಕಳೆದ ಬಾರಿ ರಾಜ್ಯದ ವಿವಿಧ ಭಾಗದಿಂದ ೨೦ ತಂಡಗಳು ಭಾಗವಹಿಸಿದ್ದು ೨ ದಿನಗಳ ಕಾಲ ಪಂದ್ಯಾಟ ನಡೆದಿತ್ತು. ಈ ಬಾರಿ ವಿಭಿನ್ನ ರೀತಿಯಲ್ಲಿ ಪ್ರೀಮಿಯರ್ ಲೀಗ್ ಕಬಡ್ಡಿ ನಡೆಯಲಿದೆ ವಿಜೇತರಿಗೆ ನಗದು ಸೇರಿದಂತೆ ಪಾರಿತೋಷಕಗಳನ್ನು ನೀಡಲು ಸಮಿತಿ ತೀರ್ಮಾನಿಸಿದೆ ಎಂದು ಅಧ್ಯಕ್ಷÀ ಎ.ಎನ್.ಅಣ್ಣಪ್ಪ ತಿಳಿಸಿದರು.
ಗ್ರಾಮೀಣ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ದಸರಾ ಜನೋತ್ಸವ ಅಂಗವಾಗಿ ಕಬಡ್ಡಿ ಪಂದ್ಯಾಟ ಹಮ್ಮಿಕೊಳ್ಳಲಾಗಿದೆ. ಮಹಿಳೆಯರಿಗೂ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದೆ ಎಂದರು. ಶಾಸಕರನ್ನು ಆಮಂತ್ರಿಸುವ ಸಂದರ್ಭ ಸಮಿತಿಯ ಗೌರವ ಅಧ್ಯಕ್ಷ ಕೊಲ್ಲೀರ ಗಯಾ, ಪದಾಧಿಕಾರಿಗಳಾದ ಎ.ಜಿ. ಸುರೇಶ್, ಜಿ.ಪಿ. ಸ್ವಾಮಿ, ಡಿ.ಎ. ವಿನೋದ್, ಅಕ್ಷಯ್ ಮತ್ತಿತರರು ಹಾಜರಿದ್ದರು.