ಮಡಿಕೇರಿ, ಸೆ. ೩೦: ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ಮಿಸಿ ನಿರ್ದೇಶಿಸಿರುವ ಕೊಡವ ಚಲನಚಿತ್ರ "ಕಾಂಗತ ಮೂಡ್" (ಖಿhe Shಚಿಜoತಿ) ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರದ ಪ್ರೋಮೋ ಮತ್ತು ಪೋಸ್ಟರ್‌ಅನ್ನು ಬಿಡುಗಡೆ ಮಾಡಲಾಯಿತು.

ನಗರದ ಪತ್ರಿಕಾ ಭವನದಲ್ಲಿ ಪ್ರೋಮೋ ಮತ್ತು ಪೋಸ್ಟರ್‌ಅನ್ನು ಬಿಡುಗಡೆ ಮಾಡಿ ಮಾತನಾಡಿದ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಕೊಡವ ಸಿನಿಮಾಗಳಿಗೆ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಕೊಡಗಿನಲ್ಲಿ ಹಿಂದೆ ಕೃಷಿ ಚಟುವಟಿಕೆ ಸುಖೀಮಯವಾಗಿತ್ತು, ತೋಟದ ಮಾಲೀಕ ಬೆಂಗಳೂರು ಅಥವಾ ಬೇರೆಲ್ಲೋ ಇದ್ದುಕೊಂಡು ರೈಟರ್ ಮೂಲಕ ತೋಟವನ್ನು ನಿಭಾಯಿಸುವ ಪ್ರೀತಿ ಮತ್ತು ನಂಬಿಕೆಯ ವ್ಯವಹಾರವಿತ್ತು. ಆದರೆ ಇಂದು ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧವಾಗಿದ್ದು, ಜೀವನ ಸಂಪೂರ್ಣ ಯಾಂತ್ರೀಕೃತವಾಗಿದೆ. ಪ್ರೀತಿ ಮತ್ತು ನಂಬಿಕೆ ಕಳೆದುಹೋಗಿದೆ. ವ್ಯಕ್ತಿ ಹಾಗೂ ಸಮಾಜಕ್ಕೆ ಇರುವ ಮತ್ತೊಂದು ಮುಖವನ್ನು ತೋರಿಸುವ ಪ್ರಯತ್ನವನ್ನು "ಕಾಂಗತ ಮೂಡ್" ಚಿತ್ರತಂಡ ಮಾಡಿದೆ ಎಂದರು.

ಎಲ್ಲರೂ ಕೊಡವ ಸಿನಿಮಾ ನೋಡಿ ಬೆಂಬಲಿಸುವ ಮೂಲಕ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕೆಂದು ಬಿ.ಜಿ. ಅನಂತಶಯನ ಕರೆ ನೀಡಿದರು.

"ಕಾಂಗತ ಮೂಡ್" ಚಿತ್ರದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಮಾತನಾಡಿ, ನಮ್ಮ ಸಂಸ್ಥೆಯ ಮೂಲಕ ಇಲ್ಲಿಯವರೆಗೆ ಆರು ಕೊಡವ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಲಾಗಿದೆ.

ಅಂತರರಾಷ್ಟಿçÃಯ ಚಲನಚಿತ್ರೋತ್ಸವಗಳಲ್ಲಿ ನಮ್ಮ ಚಿತ್ರಗಳು ಪ್ರಶಸ್ತಿಗಳನ್ನು ಗೆದ್ದಿವೆ. ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಸಮುದಾಯದ ಕೊಡವ ಪ್ರತಿಭೆಗಳು ಕೂಡ ಸಿನಿಮಾರಂಗದಲ್ಲಿ ಗುರುತಿಸಿ ಕೊಂಡಿದ್ದಾರೆ ಎನ್ನುವುದನ್ನು ಸಾಕ್ಷೀಕರಿಸಲು ಪ್ರತಿವರ್ಷ ಒಂದು ಕೊಡವ ಚಿತ್ರವನ್ನು ನಿರ್ಮಿಸಲಾಗುತ್ತಿದೆ ಎಂದರು. ಚಿತ್ರದ ಸಹ ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿ, ಕೊಡಗಿನಲ್ಲಿ ಸಿನಿಮಾಸಕ್ತಿ ಕಡಿಮೆ ಇದೆ, ಕೊಡವ ಚಿತ್ರಗಳಿಗೆ ನಿರೀಕ್ಷಿತ ಬೆಂಬಲ ದೊರೆಯುತ್ತಿಲ್ಲ. ಹಾಕಿದ ಹಣ ಮರಳಿ ಬರುವುದೇ ಕಷ್ಟವಾಗಿದೆ. ಆದರೂ ಕೊಡವ ಭಾಷೆಯ ಮೇಲಿನ ಅಭಿಮಾನದಿಂದ ವರ್ಷಕ್ಕೆ ಒಂದು ಸಿನಿಮಾವನ್ನು ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು.

"ಕಾಂಗತ ಮೂಡ್" ಚಿತ್ರ ಉತ್ತಮವಾಗಿ ಮೂಡಿಬಂದಿದ್ದು, ಎಲ್ಲರ ಅಭಿನಯವೂ ಚೆನ್ನಾಗಿದೆ. ಪ್ರತಿಯೊಬ್ಬರು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ಚಿತ್ರದ ಸಹ ನಿರ್ದೇಶಕಿ ಈರಮಂಡ ಹರಿಣಿ ವಿಜಯ್ ಮಾತನಾಡಿ, ಕೊಡಗಿನ ಜನ ಬೇರೆ ಸಿನಿಮಾಗಳನ್ನು ನೋಡುತ್ತಾರೆ, ಆದರೆ ಕೊಡವ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆ ಇದೆ. ಪ್ರೋತ್ಸಾಹದ ಕೊರತೆಯಿಂದ ಚಿತ್ರ ನಿರ್ಮಾಣ ಭಯ ಮತ್ತು ಬೇಸರವನ್ನು ಮೂಡಿಸುತ್ತದೆ ಎಂದು ತಿಳಿಸಿದರು.

"ಕಾಂಗತ ಮೂಡ್" ಚಿತ್ರ ನೈಜತೆ ಯೊಂದಿಗೆ ವಿಭಿನ್ನವಾಗಿ ಮೂಡಿ ಬಂದಿದೆ ಎಂದರು. ಚಿತ್ರದ ನಾಯಕ ನಟ ಚಡಿಯಂಡ ಸಂತೋಷ್ ಮೇದಪ್ಪ ಮಾತನಾಡಿ, ಇದು ನಾನು ನಟಿಸಿದ ನಾಲ್ಕನೇ ಚಿತ್ರವಾಗಿದ್ದು, ಉತ್ತಮ ರೀತಿಯಲ್ಲಿ ಮೂಡಿ ಬಂದಿದೆ. ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರೊಂದಿಗೆ ಕೆಲಸ ಮಾಡಲು ಖುಷಿಯಾಗಿದೆ ಎಂದು ಹೇಳಿದರು. ಚಿತ್ರದ ನಿರ್ಮಾಣ ನಿರ್ವಹಣೆ ಮಾಡಿರುವ ನಟ ಬೊಳ್ಳಜಿರ ಬಿ. ಅಯ್ಯಪ್ಪ ಅವರು "ಕಾಂಗತ ಮೂಡ್" ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಚಿತ್ರತಂಡ

"ಕಾAಗತ ಮೂಡ್" ಚಿತ್ರದ ನಿರ್ದೇಶನದೊಂದಿಗೆ ಪ್ರಮುಖ ಪಾತ್ರದಲ್ಲಿಯೂ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಕಾಣಿಸಿ ಕೊಂಡಿದ್ದಾರೆ. ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು ಗೌರವ ಅತಿಥಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಡಿಯಂಡ ಸಂತೋಷ್ ಮೇದಪ್ಪ, ಅಪ್ಪಂಡೇರAಡ ತೇಜು ಪೊನ್ನಪ್ಪ, ಗುಮ್ಮಟ್ಟಿರ ಕಿಶು ಉತ್ತಪ್ಪ, ಬೊಳ್ಳಜಿರ ಬಿ. ಅಯ್ಯಪ್ಪ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಅಮ್ಮಾಟಂಡ ದೇವಯ್ಯ, ವಿಂದ್ಯಾ ದೇವಯ್ಯ, ಅಜ್ಜಮಕ್ಕಡ ವಿನು ಕುಶಾಲಪ್ಪ, ತಂಬುಕುತ್ತೀರ ಚರಣ್, ಸಿದ್ದಂಡ ಶಂಭು, ದೇವಂಡಿರ ಲೋಕೇಶ್, ಮಂಡೆಯAಡ ಸೂರಜ್, ಮಂಡೆಯAಡ ಪ್ರೀನಾ, ಮೂರ್ನಾಡುವಿನ ಸ್ಟೆಪ್ ಅಪ್ ಡ್ಯಾನ್ಸ್ ಅಕಾಡೆಮಿಯ ಬಾಲ ಕಲಾವಿದರು ಗಳು, ಕಂಡAಗಾಲ ಮೂವತ್ತುಮನಿ ಸುಬ್ರಮಣಿ ತಂಡದವರು ನಟಿಸಿದ್ದಾರೆ. ಸಹ-ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿರುವ ಈರಮಂಡ ಹರಿಣಿ ವಿಜಯ್ ಅವರು ಚಿತ್ರಕ್ಕೆ ಸಂಭಾಷಣೆ ನೀಡಿದ್ದಾರೆ.

ಚಿತ್ರಕಥೆಗಾಗಿ ಕಾರೆಹಕ್ಲು, ಛಾಯಾಗ್ರಹಣ ಪ್ರದೀಪ್ ಆರ್ಯನ್ ಹಾಗೂ ರಿಕ್ತಿ ನಿರಂಜನ್, ಸೌಂಡ್ ಇಂಜಿನಿಯರ್ ಮೇಘರಾಜ್, ಸಂಕಲನ ಮುತ್ತುರಾಜ್, ಡಿ.ಐ. ನಿಖಿಲ್ ಕಾರ್ಯಪ್ಪ, ಸಬ್ ಟೈಟಲ್ ಚೋಕಂಡ ದಿನು ನಂಜಪ್ಪ ಹಾಗೂ ಯದುನಂದನ್ ಅವರು ಸಂಗೀತ ನೀಡಿದ್ದಾರೆ.

ಕಾರ್ಯಕಾರಿ ನಿರ್ಮಾಪಕ ರಾಗಿ ಈರಮಂಡ ವಿಜಯ್ ಉತ್ತಯ್ಯ, ನಿರ್ಮಾಣ ನಿರ್ವಹಣೆ ಬೊಳ್ಳಜಿರ ಬಿ.ಅಯ್ಯಪ್ಪ, ನಿರ್ಮಾಣ ನಿಯಂತ್ರಕ ನೀಲ್ ನಾಗರಾಜ್, ಸಹಾಯಕ ನಿರ್ದೇಶಕರಾಗಿ ಕೊಚ್ಚೆರ ನರೇನ್ ಬಿದ್ದಪ್ಪ ಕಾರ್ಯನಿರ್ವಹಿಸಿದ್ದಾರೆ.