ಮಡಿಕೇರಿ, ಸೆ. ೨೯: ಗೋಣಿಕೊಪ್ಪಲು ಆರ್‌ಎಂಸಿ ಸಭಾಂಗಣದಲ್ಲಿ ಶನಿವಾರದಂದು ಮಹಿಳೆಯರ ಸಂಭ್ರಮ ಮನೆ ಮಾಡಿತ್ತು. ವೀರಾಜಪೇಟೆ, ಪೊನ್ನಂಪೇಟೆ ತಾಲೂಕಿನ ಕಾರ್ಯವ್ಯಾಪ್ತಿ ಹೊಂದಿರುವ ಗೋಣಿಕೊಪ್ಪದ ಕಾವೇರಿ ಪೊಮ್ಮಕ್ಕಡ ಕೂಟದ ವತಿಯಿಂದ ಕೈಲ್‌ಪೊಳ್ದ್ ಅಂಗವಾಗಿ ಮೋಪ್‌ಕೂಟ (ಸಂತೋಷಕೂಟ) ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಮೀನ್ಯಾರ್ ನಮ್ಮೆಯಂತಹ ವಿಶೇಷ ಕಾರ್ಯಕ್ರಮವನ್ನು ಕಳೆದ ಕೆಲವು ವರ್ಷದಿಂದ ಆಯೋಜಿಸಿಕೊಂಡು ಬರುತ್ತಿರುವ ಕಾವೇರಿ ಪೊಮ್ಮಕ್ಕಡ ಕೂಟದ ಮೂಲಕ ಈ ಬಾರಿ ಕೈಲ್‌ಪೊಳ್ದ್ ಸಂಭ್ರಮವನ್ನು ಆಚರಿಸಲಾಯಿತು. ಕೇವಲ ಮಹಿಳೆಯರೇ ಪಾಲೊಂಡಿದ್ದ ಕಾರ್ಯಕ್ರಮ ಇದಾದರೂ ಕೊಡವರ ಸಂಸ್ಕೃತಿಯ ಪ್ರತೀಕವಾದ ಕೋವಿ ಕತ್ತಿಯಂತಹ ಪರಿಕರಗಳ ಪೂಜೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕೂಟದ ಅಧ್ಯಕ್ಷರಾದ ಕೊಟ್ಟಂಗಡ ವಿಜುದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಜ್ಯೋತಿಷಿಯಾಗಿ ಗುರುತಿಸಿಕೊಂಡಿರುವ ಕರೋಟಿರ ಶಶಿ ಸುಬ್ರಮಣಿ ಅವರು ಪಾಲ್ಗೊಂಡಿದ್ದರು. ಕೋವಿ ಪೂಜೆ ಬಳಿಕ ತೆಂಗಿನ ಕಾಯಿಗೆ ಕಲ್ಲು ಹೊಡೆಯುವುದು, ಲೆಮನ್ ಅಂಡ್ ಸ್ಪೂನ್ ಓಟ, ಬಕೆಟ್‌ಗೆ ಚೆಂಡು ಹಾಕುವುದು, ಕಣ್ಣುಕಟ್ಟಿ ಆಟ, ವಾಲಗತಾಟ್‌ನಂತಹ ಸ್ಪರ್ಧೆಗಳು ಸಂಭ್ರಮದಿAದ ಜರುಗಿತು.

ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಕರೋಟಿರ ಶಶಿ ಸುಬ್ರಮಣಿ ಅವರು ಜ್ಯೋತಿಷ್ಯಶಾಸ್ತçದ ಅನುಭವ ಹಾಗೂ ಪ್ರಕೃತಿಯ ಮಹತ್ವದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಅಧ್ಯಕ್ಷರಾದ ವಿಜು ದೇವಯ್ಯ ಅವರು ಮಾತನಾಡಿ, ಪ್ರಸ್ತುತ ಯುವ ಜನಾಂಗಕ್ಕೆ ಸಂಸ್ಕೃತಿ, ಆಚಾರ, ವಿಚಾರದ ಕುರಿತು ಆಸಕ್ತಿ ಮೂಡಿಸುವ ಪ್ರಯತ್ನಗಳು ಸದಾ ಆಗುತ್ತಿರಬೇಕು, ಗದ್ದೆ ಕೃಷಿಯ ಮಹತ್ವ, ಇತರರೊಂದಿಗೆ ಬೆರೆತು, ತಮ್ಮತನ ಕಾಪಾಡಿಕೊಳ್ಳುವ ವಿಚಾರದ ಬಗ್ಗೆಯೂ ಅವರು ಒತ್ತಿ ಹೇಳಿದರು. ಆಧುನಿಕತೆಯ ಸಮಾಜವಾದರೂ ಪುರಾತನ ವೈಭವವನ್ನು ಅರಿತು ಅದನ್ನು ಪಾಲಿಸುವಂತಾಗಬೇಕೆAದರು.

ಆರAಭದಲ್ಲಿ ಅತಿಥಿಗಳು ಹಾಗೂ ಪದಾಧಿಕಾರಿಗಳು ಕೋವಿ ಪೂಜೆ ನಡೆಸಿದರು. ಚೋವಂಡ ಜಮುನಾ, ಚೆಕ್ಕೇರ ವಾಣಿ, ನೂರೇರ ರತಿ ಪ್ರಾರ್ಥಿಸಿದರು. ಕಾರ್ಯದರ್ಶಿ ಮುಕ್ಕಾಟಿರ ಟೀನಾ ಪ್ರಸನ್ನ, ಆಪಟ್ಟಿರ ಸೌಮ್ಯ ಮೊಣ್ಣಪ್ಪ, ಸಣ್ಣುವಂಡ ಡಯಾನ ವಿನಯ್, ಬಲ್ಯಮೀದೇರಿರ ಆಶಾ ಶಂಕರ್ ಮತ್ತಿತರರು ಕಾರ್ಯಕ್ರಮ ನಡೆಸಿಕೊಟ್ಟರು.

ಕೊಟ್ಟಂಗಡ ಕುಟುಂಬದ ನೀತು ತಂಡದಿAಡ ಉಮ್ಮತ್ತಾಟ್ ಪ್ರದರ್ಶನ ಜರುಗಿತು. ಕಾವೇರಿ ಪೊಮ್ಮಕ್ಕಡ ಕೂಟ ಪ್ರಥಮ ಬಾರಿಗೆ ಕೈಲ್‌ಪೊಳ್ದ್ ಸಂತೋಷ ಕೂಟವನ್ನು ಸಂಭ್ರಮದಿAದ ಆಯೋಜಿಸಿತ್ತು.