ಕಣಿವೆ, ಸೆ. ೨೯: ಗೊಂದಿ ಬಸವನಹಳ್ಳಿಯ ದಾರುಲ್ ಹಿದಾಯ ಅರಬಿಕ್ ಮದರಸಾ ವತಿಯಿಂದ ಈದ್ ಮಿಲಾದ್ ಕಾರ್ಯಕ್ರಮ ನಡೆಯಿತು.

ಶಾಸಕ ಡಾ. ಮಂತರ್‌ಗೌಡ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಮನುಷ್ಯ ಮನುಷ್ಯರ ನಡುವೆ ಶಾಂತಿ,ಪ್ರೀತಿ ಹಾಗೂ ಸಾಮರಸ್ಯದಿಂದ ಬದುಕಬೇಕೆಂದು ಮುಹಮ್ಮದ್ ಪೈಗಂಬರ್, ಬುದ್ಧ, ಬಸವಣ್ಣ ಅಂಬೇಡ್ಕರ್ ಮೊದಲಾದ ಮಹನೀಯರು ನೀಡಿರುವ ಸಂದೇಶವನ್ನು ಎಲ್ಲರೂ ಪಾಲಿಸುವ ಮೂಲಕ ಭಾವೈಕ್ಯತೆಯ ನಾಡು ಕಟ್ಟಬೇಕಿದೆ. ಚುನಾವಣಾ ಸಂದರ್ಭ ದಲ್ಲಿ ಮಾತ್ರ ರಾಜಕೀಯ ಇರಬೇಕು. ಚುನಾವಣೆ ಬಳಿಕ ಪಕ್ಷಾತೀತವಾದ ಯೋಜನೆಗಳಾಗಬೇಕಿದೆ. ಹಾಗಾಗಿ ಜಾತಿ ಹಾಗೂ ಧರ್ಮ ನೋಡದೇ ಅಭಿವೃದ್ದಿಯ ಕೈಂಕರ್ಯ ಸದಾ ನಡೆಯಲಿದೆ ಎಂದರು.

ಮತ್ತೋರ್ವ ಅತಿಥಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಮೊಹಮದ್ ಪೈಗಂಬರ್ ನೀಡಿರುವ ಶಾಂತಿಯ ಸಂದೇಶ ಜನಮಾನಸದಲ್ಲಿ ಭಾವೈಕ್ಯತೆ ಹಾಗೂ ಸಾಮರಸ್ಯ ಸಹ ಬಾಳ್ವೆಯಾಗಿತ್ತು. ಹಸಿದವನಿಗೆ ಜಾತಿ ಧರ್ಮ ಎಣಿಸದೇ ಆತನ ಹಸಿವು ನೀಗಿಸುವುದೇ ಧರ್ಮವಾಗಬೇಕು ಎಂದರು.

ತಾಲೂಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಕೂಡ ಅಧ್ಯಕ್ಷ ಪ್ರಮೋದ್, ಪುರಸಭೆ ಸದಸ್ಯರಾದ ಜಗದೀಶ್, ಖಲೀಮುಲ್ಲಾ, ಪ್ರಕಾಶ್, ಕುಶಾಲನಗರ ಮದರಸಾದ ಪ್ರಾಂಶುಪಾಲ ತಮ್ಲಿಕ್ ಧಾರಿಮಿ, ಗೊಂದಿಬಸವನಹಳ್ಳಿ ಜಮಾಅತ್ ಅಧ್ಯಕ್ಷ ಹಂಸ, ಪ್ರಧಾನ ಕಾರ್ಯದರ್ಶಿ ಹಮೀದ್, ಮದರಸಾ ಗುರುಗಳಾದ ಮುಸ್ತಾಫ ಉಸ್ತಾದ್, ಸರ್ಫುದ್ದೀನ್, ಶಂಕರಣ್ಣ, ಕಾಳೀರಣ್ಣ, ವೆಂಕಟೇಶ್, ನಿಜಾಂ ಇತರರು ಇದ್ದರು.