ಸುಮಾರು ಐದಾರು ದಶಕಗಳ ಹಿಂದೆ, ಕಾವೇರಿ ನದಿ ನೀರು ಬೇತ್ರಿಯಲ್ಲಿ ಬಹುತೇಕ ಪಾರದರ್ಶಕ ವಾಗಿದ್ದು ಅದನ್ನು ಕುಡಿಯಲು ಬಾಟಲಿಗಳಲ್ಲಿ ತುಂಬಿ ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ನೆನಪು ಈಗಲೂ ಕಾಡುತ್ತಿದೆ. ಆದರೀಗ ಹೊಳೆಯ ನೀರು ತೀರ ಬಗ್ಗಡವಾಗಿದ್ದು ಕುಡಿಯುವುದು ಒತ್ತಟ್ಟಿಗಿರಲಿ, ಕೈಯಿಂದ ಮುಟ್ಟಲು ಸಹ ಅಸಹ್ಯವೆನಿಸುವಂತಾಗಿದೆ. ಇದರ ಪಾತ್ರದ ಇಕ್ಕೆಲಗಳಲ್ಲೂ ಕಲ್ಮಶದ ತುಣುಕುಗಳನ್ನು ಎಗ್ಗಿಲ್ಲದೆ ಹಾಕುವುದು, ಪ್ರಾಣಿಗಳನ್ನು ಆಹಾರಕ್ಕಾಗಿ ಕೊಂದು ಅದರ ಉಳಿದ ತ್ಯಾಜ್ಯವನ್ನು ನದಿಯತ್ತ ತೂರುವುದು, ವಲಸೆಬರುವ ಕೃಷಿ ಕಾರ್ಮಿಕರು ಶೌಚಕಾರ್ಯಗಳಿಗೆ ಹೊಳೆಯ ಬದಿಯನ್ನು ಆಶ್ರಯಿಸುವುದು, ಮೋಜು-ಮಸ್ತಿಗೆಂದು ಬರುವ ಪ್ರವಾಸಿಗರು ಮದ್ಯದ ಬಾಟಲಿಗಳನ್ನು ಹಾಗೂ ಉಳಿಕೆ ಆಹಾರವನ್ನು ಹೊಳೆಗೆ ಎಸೆಯುವುದು ಮೊದಲಾದ ಕಾರ್ಯಗಳಿಂದ ಹೊಳೆಯ ನೀರು ತೀರಾ ಕಲುಷಿತಗೊಂಡಿದ್ದು ಮನೆಯ ಬಳಕೆಗೆ ಅನರ್ಹವೆನ್ನಿಸಿಬಿಟ್ಟಿದೆ.
ಈ ಸಮಸ್ಯೆ ಕೇವಲ ಕಾವೇರಿ ನದಿಯಲ್ಲಿ ಮಾತ್ರವಲ್ಲ, ಭಾರತದ ಬಹುತೇಕ ಎಲ್ಲ ನದಿಗಳಲ್ಲೂ ದಿನದಿಂದ ಹೆಚ್ಚುತ್ತಿದ್ದು ಇದರ ಬಗ್ಗೆ ಕದನೋಪಾದಿಯ ಕ್ರಮ ಕೈಗೊಳ್ಳದಿದ್ದಲ್ಲಿ ಕೆಲವೇ ವರ್ಷಗಳಲ್ಲಿ ಈ ನದಿ ನೀರಿನ ಸಾಮೀಪ್ಯದಿಂದಲೇ ನೂರಾರು ರೋಗಬಾಧೆಗಳು ಉಂಟಾಗುವ ಸಾಧ್ಯತೆ ಬರಬಹುದು. ನದಿಯ ನೀರನ್ನು ಕೆಡಿಸದಿರುವ ಬಗ್ಗೆ ಹಾಗೂ ನದಿಗಳನ್ನು ಶುದ್ಧ ನೀರಿನ ಮೂಲವಾಗಿ ಇರಿಸಿಕೊಳ್ಳುವುದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದಂದು ವಿಶ್ವ ನದಿಗಳ ದಿನವನ್ನಾಗಿ ಆಚರಿಸ ಲಾಗುತ್ತಿದೆ.
ನದಿ ನೀರಿನ ಪಾವಿತ್ರö್ಯ ವನ್ನು ಮನಗಂಡ ಮರ್ಕ್ ಏಂಜೆಲೋ ಎನ್ನುವ ಖ್ಯಾತ ಪರಿಸರ ಹಾಗೂ ನದಿಗಳ ತಜ್ಞ ೨೦೦೫ರಲ್ಲಿ ವಿಶ್ವಸಂಸ್ಥೆ ಯಲ್ಲಿ ಬದುಕಿಗಾಗಿ ನೀರು ಎನ್ನುವ ವಿಷಯದಲ್ಲಿ ಮಾತನಾಡುತ್ತ ಪರಿಶುದ್ಧ ನೀರಿನ ಲಭ್ಯತೆ ಮತ್ತು ಬಳಸುವಿಕೆಯ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸುವ ವಾದ ಮಂಡಿಸಿದನು.
ಇದನ್ನು ಮನಗಂಡ ವಿಶ್ವ ರಾಷ್ಟçಗಳ ಒಕ್ಕೂಟವು ಎಲ್ಲ ವರ್ಷವೂ ಸೆಪ್ಟೆಂಬರ್ ತಿಂಗಳ ಕೊನೆಯ ಭಾನುವಾರದಂದು ಜಗತ್ತಿನ ಎಲ್ಲ ರಾಷ್ಟçಗಳಲ್ಲೂ ವಿಶ್ವದ ನದಿಗಳ ದಿನವನ್ನಾಗಿ ಆಚರಿಸಲು ನಿರ್ಣಯ ಕೈಗೊಂಡಿತು.
ಅಂದಿನಿAದ ಪ್ರತಿವರ್ಷವೂ ಹೊಸತೊಂದು ಉದ್ಘೋಷಗಳನ್ನು ಹೊರಡಿಸಿ ಜನರಲ್ಲಿ ನದಿಗಳ ಬಗ್ಗೆ ಹೆಚ್ಚಿನ ಕಾಳಜಿ ತರಲು ಯತ್ನಿಸುತ್ತಿದೆ. ಈ ವರ್ಷ “ನದಿಯ ನೀರಿನ ಪಥವನ್ನು ಶುದ್ಧವಾಗಿರಿಸಿ ಕೊಳ್ಳುವುದು” ಎನ್ನುವ ಉದ್ಘೋಷ ಹೊರಡಿಸಿ ಎಲ್ಲ ನದಿಗಳೂ ರಾಷ್ಟçದ ಸ್ವತ್ತು, ಇಂತಹ ಸ್ವತ್ತನ್ನು ಕೊಳಚೆ ನೀರನ್ನು ಹರಿಸುವ ಗಠಾರವನ್ನಾಗಿ ಮಾಡುವುದು ಅಥವಾ ನಿರುಪಯುಕ್ತ ವಸ್ತುಗಳನ್ನು ತುಂಬಿಸುವ ತಾಣವಾಗಿಸುವುದು ಅಪರಾಧ ವನ್ನಾಗಿ ಘೋಷಿಸಲು ಕಾನೂನು ತಜ್ಞರಲ್ಲಿ ಒತ್ತಡ ಹೇರುತ್ತಿದೆ.
ಭಾರತದಲ್ಲಿ ಗಂಗಾ ನದಿಯು ಅತಿ ಉದ್ದದ ನದಿಯಾಗಿದ್ದು, ಇದರ ಉದ್ದವು ೨೫೨೫ ಕಿಲೋಮೀಟರ್ ಆಗಿದೆ.
ಅನಂತರ ಗೋದಾವರಿ ನದಿಯು ೧೪೬೪ ಕಿಲೋಮೀಟರ್ ಉದ್ದವಿದ್ದು, ಕೃಷ್ಣಾ ಹಾಗೂ ಯಮುನಾ ನದಿಗಳು ಉದ್ದದಲ್ಲಿ ಅನಂತರದ ಸ್ಥಾನಗಳನ್ನು ಪಡೆಯುತ್ತವೆ. ಭಾರತದಲ್ಲಿ ಒಟ್ಟು ೪೦೦ ನದಿಗಳಿದ್ದು ಆಂಧ್ರಪ್ರದೇಶದ ಕುರ್ನೂಲು ಎನ್ನುವಲ್ಲಿ ಸಂಗಮೇಶ್ವರ ಎನ್ನುವ ಸ್ಥಳದಲ್ಲಿ ತುಂಗ, ಭದ್ರ, ಕೃಷ್ಣ, ವೇಣಿ, ಭೀಮ, ಮಾಲಾಪಹಾರಿಣಿ ಹಾಗೂ ಭಾವನಾಶಿ ಎಂಬ ಹೆಸರಿನ ಏಳು ನದಿಗಳ ಸಂಗಮವಾಗುತ್ತದೆ. ವಿಶ್ವದಲ್ಲಿ ಅತಿ ಉದ್ದವಾದ ನದಿಯು ಆಫ್ರಿಕಾದ ನೈಲ್ ನದಿಯಾಗಿದ್ದು ಇದರ ನೀರನ್ನು ಏಳು ರಾಷ್ಟçಗಳು ಬಳಸುತ್ತವೆ. ಭಾರತೀಯರಿಗೆ ನದಿಯು ಕೇವಲ ನೀರನ್ನು ನೀಡುವ ಒಂದು ಸಾಮಾನ್ಯ ಜಲಮೂಲವಲ್ಲ, ಅದೊಂದು ಪುಣ್ಯದ ಸ್ಥಳವೂ ಆಗಿರುತ್ತದೆ. ಗಂಗಾ, ನದಿಯು ೧೪೬೪ ಕಿಲೋಮೀಟರ್ ಉದ್ದವಿದ್ದು, ಕೃಷ್ಣಾ ಹಾಗೂ ಯಮುನಾ ನದಿಗಳು ಉದ್ದದಲ್ಲಿ ಅನಂತರದ ಸ್ಥಾನಗಳನ್ನು ಪಡೆಯುತ್ತವೆ. ಭಾರತದಲ್ಲಿ ಒಟ್ಟು ೪೦೦ ನದಿಗಳಿದ್ದು ಆಂಧ್ರಪ್ರದೇಶದ ಕುರ್ನೂಲು ಎನ್ನುವಲ್ಲಿ ಸಂಗಮೇಶ್ವರ ಎನ್ನುವ ಸ್ಥಳದಲ್ಲಿ ತುಂಗ, ಭದ್ರ, ಕೃಷ್ಣ, ವೇಣಿ, ಭೀಮ, ಮಾಲಾಪಹಾರಿಣಿ ಹಾಗೂ ಭಾವನಾಶಿ ಎಂಬ ಹೆಸರಿನ ಏಳು ನದಿಗಳ ಸಂಗಮವಾಗುತ್ತದೆ. ವಿಶ್ವದಲ್ಲಿ ಅತಿ ಉದ್ದವಾದ ನದಿಯು ಆಫ್ರಿಕಾದ ನೈಲ್ ನದಿಯಾಗಿದ್ದು ಇದರ ನೀರನ್ನು ಏಳು ರಾಷ್ಟçಗಳು ಬಳಸುತ್ತವೆ. ಭಾರತೀಯರಿಗೆ ನದಿಯು ಕೇವಲ ನೀರನ್ನು ನೀಡುವ ಒಂದು ಸಾಮಾನ್ಯ ಜಲಮೂಲವಲ್ಲ, ಅದೊಂದು ಪುಣ್ಯದ ಸ್ಥಳವೂ ಆಗಿರುತ್ತದೆ. ಗಂಗಾ, ಯಮುನಾ, ಸಿಂಧು, ರ್ಮದಾ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ ನದಿಗಳು ಭಾರತೀಯರಿಗೆ ಪುಣ್ಯದ ನದಿಗಳೂ ಆಗಿದ್ದು ಅವುಗಳಲ್ಲಿ ಮಿಂದರೆ ಪಾಪ ನಾಶವಾಗುತ್ತದೆ ಎನ್ನುವ ನಂಬಿಕೆಯೂ ಇದೆ.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನದಿಗಳ ಮಹತ್ವವನ್ನು ತಿಳಿಸುವುದು, ನದಿಗಳ ನೀರನ್ನು ಮಾಲಿನ್ಯದಿಂದ ಮುಕ್ತಗೊಳಿಸುವ ವಿಷಯದ ಬಗ್ಗೆ ಚರ್ಚೆ ನಡೆಸುವುದು, ಯಾವುದೇ ಕಾರ್ಖಾನೆಗಳು ಬಳಸಿ, ಕೆಡಿಸಿರುವ ನೀರನ್ನು ಪರಿಷ್ಕರಿಸಿ ಮರುಬಳಕೆ ಮಾಡುವ ಬಗ್ಗೆ ಕಾರ್ಯಾಗಾರ ನಡೆಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಬಹಿರಂಗ ಸಭೆಗಳನ್ನು ನಡೆಸಿ ನದಿಗಳ ಶುಚಿತ್ವದ ಬಗ್ಗೆ ಕೈಗೊಳ್ಳಬೇಕಾಗ ಕ್ರಮಗಳ ಬಗ್ಗೆ ಪೌರರಿಗೆ ಮನನ ಮಾಡುವುದು ಮುಂತಾದ ಚಟುವಟಿಕೆಗಳನ್ನು ನಡೆಸುವುದರ ಮೂಲಕ ಸಾರ್ವಜನಿಕರಲ್ಲಿ ನದಿಗಳ ಪ್ರಾಮುಖ್ಯತೆ, ಅವುಗಳ ರಕ್ಷಣೆಯ ಬಗ್ಗೆ ಅರಿವು ಮೂಡಿಸಬಹುದು. ಕೇವಲ ತಾತ್ಕಾಲಿಕ ಲಾಭಕ್ಕಾಗಿ ನದಿಗಳನ್ನು ಶೋಷಿಸಿ,ಅವುಗಳ ದುರ್ಬಳಕೆ ಮಾಡಿ ಅನಂತರ ಶಾಶ್ವತವಾಗಿ ಇಲ್ಲಸಲ್ಲದ ತೊಂದರೆ ಅನುಭವಿಸುವುದು ಎಂದಿಗೂ ಸಲ್ಲದು.
ಇನ್ನಾದರೂ ಈ ಬಗ್ಗೆ ನಮ್ಮ ಜನಪ್ರತಿನಿಧಿಗಳು ಕಾನೂನಿನ ಮೂಲಕ ನದಿಗಳ ಸಂರಕ್ಷಣೆ ಮಾಡಿದಾಗ ಮಾತ್ರ ಮುಂಬ ರುವ ಪೀಳಿಗೆಗೆ ನಿಷ್ಕಲ್ಮಶ ನದಿ ಗಳನ್ನು ನಾವು ನೀಡಬಹುದು.
- ಕಿಗ್ಗಾಲು ಎಸ್. ಗಿರೀಶ್,
ಮೂರ್ನಾಡು. ಮೊ. ೯೧೪೧೩೯೫೪೨೬