ಮಡಿಕೇರಿ, ಸೆ. ೨೪: ಮಡಿಕೇರಿ ದಸರಾ ಅಕ್ಟೋಬರ್ ೩ ರಿಂದ ೧೨ ರವರೆಗೆ ನಡೆಯಲಿದ್ದು, ಪ್ರಾಯೋಜಕರನ್ನು ಆಹ್ವಾನಿಸಲಾಗಿದೆ.
ಈ ಮಹೋನ್ನತವಾದ ಆಚರಣೆಯು ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಆಳವಾಗಿ ಬೇರೂರಿದ್ದು, ಪ್ರಾಯೋಜಕರಿಗೆ ಪ್ರಚಾರ ಪಡೆಯಲು ಮತ್ತು ದಸರಾ ಉತ್ಸವದ ಯಶಸ್ಸಿಗೆ ಕೊಡುಗೆ ನೀಡಲು ವಿಶಿಷ್ಟವಾದ ವೇದಿಕೆಯನ್ನು ಒದಗಿಸುತ್ತದೆ ಮತ್ತು ಸಾಮಾಜಿಕ ಜಾಲತಾಣ ಡಿಜಿಟಲ್ ಮೀಡಿಯಾಗಳಲ್ಲೂ ಕೂಡ ವ್ಯಾಪಕ ಪ್ರಚಾರ ನೀಡಲಾಗುತ್ತದೆ.
ಪ್ರಾಯೋಜಕರು ಮಡಿಕೇರಿ ದಸರಾ ಉತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ/ ಪ್ರತ್ಯೇಕ ಕಾರ್ಯಕ್ರಮಗಳಿಗೆ ನೇರವಾಗಿ ಪ್ರಾಯೋಜಕತ್ವ ನೀಡಬಹುದಾಗಿರುತ್ತದೆ. ಪ್ರಾಯೋಜಕತ್ವದ ವರ್ಗಗಳು ಪ್ಲಾಟಿನಂ ಪ್ರಾಯೋಜಕರು: ಕೊಡುಗೆ: ೪ ಲಕ್ಷ ಮತ್ತು ೪ ಲಕ್ಷಕ್ಕಿಂತ ಹೆಚ್ಚು.
ಪ್ರಯೋಜನಗಳು: ದಸರಾ ಉತ್ಸವದಲ್ಲಿ ಪೂರ್ಣ ಒಂದು ದಿನದ ಪ್ರಾಯೋಜಕತ್ವ ಕಾರ್ಯಕ್ರಮದಲ್ಲಿ ಪ್ರಾಯೋಜಕರ ಲೋಗೋ ಪ್ರದರ್ಶನ ಮತ್ತು ಆ ದಿನದ ಕಾರ್ಯಕ್ರಮಗಳಲ್ಲಿ ಪ್ರಾಯೋಜಕರ ಬ್ರಾಂಡ್ ಉತ್ತೇಜನ. ಆ ದಿನದಂದು ಮಾಧ್ಯಮದಲ್ಲಿ ಪ್ರಚಾರ ಮತ್ತು ಗುರುತಿಸುವಿಕೆ.
ಗೋಲ್ಡ್ ಪ್ರಾಯೋಜಕರು- ಕೊಡುಗೆ: ೨ ಲಕ್ಷದಿಂದ ೪ ಲಕ್ಷದವರೆಗೆ ಪ್ರಯೋಜನಗಳು: ದಸರಾ ಉತ್ಸವದಲ್ಲಿ ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಒಂದು ಪ್ರಾಯೋಜಕತ್ವ. ಸಂಜೆಯ ಕಾರ್ಯಕ್ರಮದಲ್ಲಿ ಬ್ರ್ಯಾಂಡಿಗೆ ಸಂಬAಧಿಸಿದ ವಸ್ತುಗಳ ಮತ್ತು ಲೋಗೋ ಪ್ರದರ್ಶನ. ಆ ದಿನದ ಕಾರ್ಯಕ್ರಮಗಳಲ್ಲಿ ಪ್ರಚಾರ ಮತ್ತು ಗುರುತಿಸುವಿಕೆ. ೩. ಬೆಳ್ಳಿ ಪ್ರಾಯೋಜಕರು: ಕೊಡುಗೆ: ೨ ಲಕ್ಷಕ್ಕಿಂತ ಕಡಿಮೆ ಪ್ರಯೋಜನಗಳು: ದಸರಾ ಉತ್ಸವದಲ್ಲಿ ಒಂದು ನಿರ್ದಿಷ್ಟ ಕಾರ್ಯಕ್ರಮದ ಪ್ರಾಯೋಜಕತ್ವ ಗೊತ್ತುಪಡಿಸಿದ ಕಾರ್ಯಕ್ರಮದಲ್ಲಿ ಪ್ರಚಾರ ಸಾಮಾಗ್ರಿಗಳ ಮೇಲೆ ಲೋಗೋ ಪ್ರದರ್ಶನ ಸ್ಟಾರ್ ಪ್ರಾಯೋಜಕರಾಗಲು ಒಂದು ಅನನ್ಯ ಅವಕಾಶ.
ಕೊಡುಗೆ: ೫ ಲಕ್ಷ ಮತ್ತು ೫ ಲಕ್ಷದ ಮೇಲೆ (ಪ್ಲಾಟಿನಂ ಪ್ರಾಯೋಜಕರಲ್ಲಿ ಅಧಿಕ ಕೊಡುಗೆ ನೀಡುವ ೩ ಪ್ರಾಯೋಜಕರಿಗೆ) ಪ್ರಯೋಜನಗಳು: ದಸರಾ ಉತ್ಸವದ ಎಲ್ಲಾ ೯ ದಿನಗಳ ಶೀರ್ಷಿಕೆಯಲ್ಲಿ ಪ್ರಾಯೋಜಕರ ಗುರುತಿಸುವಿಕೆ
ದಸರಾ ಉತ್ಸವದ ಫಲಕಗಳು, ಮಾಧ್ಯಮ ಮತ್ತು ಡಿಜಿಟಲ್ ವೇದಿಕೆಗಳು ಸೇರಿದಂತೆ ಎಲ್ಲಾ ಪ್ರಚಾರ ಸಾಮಾಗ್ರಿಗಳ ಮೇಲೆ ಎಲ್ಲಾ ೯ ದಿನಗಳಲ್ಲಿ ವಿಶೇಷ ಪ್ರಾಯೋಜಕತ್ವದ ಅವಕಾಶ ದಸರಾ ಉತ್ಸವದುದ್ದಕ್ಕೂ ನಡೆಯುವ ಪ್ರಮುಖ ಕಾರ್ಯಕ್ರಮಗಳು, ವೇದಿಕೆಗಳು ಮತ್ತು ಸ್ಥಳಗಳಲ್ಲಿ ಪ್ರಾಯೋಜಕರ ಪ್ರಧಾನ ಲೋಗೋ ಪ್ರದರ್ಶನಕ್ಕೆ ಅವಕಾಶ.
ಮಡಿಕೇರಿ ದಸರಾ ಉತ್ಸವದಲ್ಲೇ ಪ್ರಾಯೋಜಕತ್ವ ಮಹತ್ವ
ಮಡಿಕೇರಿ ದಸರಾವು ಐತಿಹಾಸಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯುಳ್ಳ ಮಹತ್ವದ ಪ್ರಮುಖ ಉತ್ಸವವಾಗಿದ್ದು, ಕರ್ನಾಟಕ ಮತ್ತು ಹೊರ ರಾಜ್ಯಗಳ ಸಾವಿರಾರು ಪ್ರವಾಸಿಗರನ್ನು ಸೆಳೆಯುವ ಉತ್ಸವವಾಗಿದೆ. ಈ ಕಾರ್ಯಕ್ರಮವನ್ನು ಪ್ರಾಯೋಜಿಸುವ ಮೂಲಕ, ವ್ಯಾಪಾರವನ್ನು ಹೊರ ಜಗತ್ತಿಗೆ ಪರಿಚಯಿಸಿ, ಮಾನ್ಯತೆ ಪಡೆದು, ಮೌಲ್ಯಯುತವಾಗಿ ವ್ಯಾಪಾರೋದ್ಯಮವನ್ನು ವಿಸ್ತರಿಸಿ, ಲಾಭಗಳಿಸುವುದರೊಂದಿಗೆ ಪರಂಪರೆ ಮತ್ತು ವೈವಿಧ್ಯತೆಯನ್ನು ಉತ್ತೇಜಿಸುವ ಸಮುದಾಯದ ಭಾಗವಾಗಲು ಇದೊಂದು ಸುವರ್ಣಾವಕಾಶ.
ಪ್ರಾಯೋಜಕತ್ವವನ್ನು ಖಾತ್ರಿಪಡಿಸಿಕೊಳ್ಳಲು ಸೆಪ್ಟೆಂಬರ್ ೩೦ ಕೊನೆಯ ದಿನವಾಗಿದ್ದು, ಈ ಹೆಮ್ಮೆಯ ಕಾರ್ಯಕ್ರಮದ ಭಾಗವಾಗುವ ಅವಕಾಶವನ್ನು ಮತ್ತು ಅಸಂಖ್ಯಾತ ಪ್ರೇಕ್ಷಕರಿಗೆ ತಮ್ಮ ಬ್ರ್ಯಾಂಡ್ ಅನ್ನು ವ್ಯಾಪಕವಾಗಿ ಪ್ರದರ್ಶಿಸುವ ಅವಕಾಶವಿದೆ.
ಪ್ರಾಯೋಜಕತ್ವದ ವಿಚಾರಣೆ ಮತ್ತು ಹೆಚ್ಚಿನ ವಿವರಗಳಿಗೆ, ಸಹಾಯಕ ಆಯುಕ್ತರು, ಮಡಿಕೇರಿ, ಉಪ ವಿಭಾಗ, ಮಡಿಕೇರಿರವರ ಕಚೇರಿಯನ್ನು ಇ-ಮೇಲ್ ಚಿಛಿmಚಿಜiಞeಡಿi೨೨೫೪೬೯@ಟಿiಛಿ.iಟಿ ಅಥವಾ ದೂರವಾಣಿ ಸಂಖ್ಯೆ: ೦೮೨೭೨೨೨೫೪೬೯ / ೮೬೬೦೧೨೮೫೧೬ ನ್ನು ಸಂಪರ್ಕಿಸಿರಿ. ಮಡಿಕೇರಿ ದಸರಾ ಉತ್ಸವ-೨೦೨೪ ನ್ನು ಯಶಸ್ವಿಗೊಳಿಸುವಂತೆ ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ವೆಂಕಟ್ ರಾಜಾ ಕೋರಿದ್ದಾರೆ.