*ಗೋಣಿಕೊಪ್ಪ, ಸೆ. ೨೪: ಪಟ್ಟಣದ ಶ್ರೀ ದಸರಾ ನಾಡ ಹಬ್ಬ ಸಮಿ ತಿಯ ೩೬ನೇ ವರ್ಷದ ಜಿಲ್ಲಾ ಮಟ್ಟದ ಸ್ತಬ್ಧಚಿತ್ರ ಮೆರವಣಿಗೆಯನ್ನು ಈ ಬಾರಿ ವಿಶೇಷವಾಗಿ ನಡೆಸಲು ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಸಮಿತಿ ಗೌರವಾಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ಮಾಹಿತಿ ನೀಡಿದರು.
ಶ್ರೀ ದಸರಾ ನಾಡ ಹಬ್ಬ ಸಮಿತಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ದಸರಾ ಆಚರಣೆಯ ಆಕರ್ಷಣೆ ಸ್ತಬ್ಧಚಿತ್ರ ಮೆರವಣಿಗೆಯಾಗಿದೆ. ಕಳೆದ ೩೬ ವರ್ಷಗಳಿಂದ ನಡೆಯುತ್ತಿರುವ ಸ್ತಬ್ಧಚಿತ್ರ ಪ್ರದ ರ್ಶನ ಮೆರವಣಿಗೆ ಜನಾ ಕರ್ಷಣೆಯಾಗಿದೆ.
ಈ ಬಾರಿಯು ವಿಭಿನ್ನ ರೀತಿ ಯಲ್ಲಿ ನಡೆಸಲು ನಿರ್ಧರಿಸಿದ್ದು, ಪೌರಾಣಿಕ, ಸಾಮಾಜಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಸಲು ನಿರ್ಧರಿಸಲಾಗಿದೆ. ಧಾರ್ಮಿಕ ಸಂಘಟನೆಗಳು, ಮಹಿಳಾ ಮತ್ತು ಪುರುಷರ ಸಂಘಟನೆಗಳು, ಸ್ತಬ್ಧ ಚಿತ್ರದ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಕೋರಿದರು.
ತಾಲೂಕಿನ ವಿವಿಧ ಸರ್ಕಾರಿ ಇಲಾ ಖೆಗಳು, ಸಂಘ ಸಂಸ್ಥೆಗಳು ಸೇರಿದಂತೆ ೩೫ಕ್ಕೂ ಹೆಚ್ಚು ಸ್ತಬ್ಧಚಿತ್ರಗಳು ಪ್ರದ ರ್ಶನಗೊಳ್ಳುವ ವಿಶ್ವಾಸ ಇದೆ. ಅತ್ಯುತ್ತಮ ಸ್ತಬ್ಧ ಚಿತ್ರಕ್ಕೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಗಳಂತೆ ನಗದು, ಪಾರಿತೋಷಕ ನೀಡಲಾಗುವುದು ಎಂದು ವಿವರಿಸಿ ದರು. ವಿಜಯದಶಮಿಯಂದು ನಡೆಯುವ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕೀಲುಕುದುರೆ, ಚಿಲಿಪಿಲಿ ಗೊಂಬೆ, ಕಾಂತಾರದ ದೈವ ನೃತ್ಯ ಪ್ರದರ್ಶನ, ಕೇರಳದ ಗೊಂಬೆಗಳು, ವಾಲಗ ಇರಲಿವೆ ಎಂದು ತಿಳಿಸಿದರು.
ಅಂದು ಮಧ್ಯಾಹ್ನ ಎರಡು ಗಂಟೆಗೆ ಆರ್.ಎಂ.ಸಿ. ಆವರಣದಿಂದ ಮೆರವಣಿಗೆ ಹೊರಡಲಿದೆ. ನಂತರ ರಾತ್ರಿ ದಶಮಂಟಪಗಳ ಶೋಭಾ ಯಾತ್ರೆಯಲ್ಲಿಯೂ ನಾಡಹಬ್ಬ ಸಮಿತಿ ಭಾರತಾಂಬೆಯ ಭಾವಚಿತ್ರ ಹೊತ್ತ ಮಂಟಪದ ಮೆರವಣಿಗೆಯೂ ನಡೆಯಲಿದೆ ಎಂದು ಮಾಹಿತಿ ನೀಡಿದರು. ಮೆರವಣಿಗೆಗೆ ಸಾಕಷ್ಟು ಪ್ರಮಾಣದ ಹಣದ ಅವಶ್ಯಕತೆ ಇದೆ. ಈ ಹಿನ್ನೆಲೆ ಶ್ರೀ ಕಾವೇರಿ ದಸರಾ ಸಮಿತಿ ನಾಡಹಬ್ಬ ದಸರಾ ಸಮಿತಿಗೆ ಆರ್ಥಿಕ ನೆರವು ನೀಡಿ ಸಹಕರಿಸಬೇಕು ಎಂದು ಕೋರಿದರು.
ಗೋಷ್ಠಿಯಲ್ಲಿ ನಾಡಹಬ್ಬ ಸಮಿತಿ ಅಧ್ಯಕ್ಷ ಅಜ್ಜಿಕುಟ್ಟಿರ ರಿಷಿ, ಪ್ರಧಾನ ಕಾರ್ಯದರ್ಶಿ ಬಿ.ಎನ್ ಸುದರ್ಶನ್, ಉಪಾಧ್ಯಕ್ಷ ಸುನಿಲ್ ಪ್ರಭಾಕರ್, ಕೋಶಾ ಧಿಕಾರಿ ರಜಿತ್, ಸಹ ಕಾರ್ಯದರ್ಶಿ ದಿಲೀಪ್ ಮತ್ತು ಕೃಷಿ ಇದ್ದರು.