ಗೋಣಿಕೊಪ್ಪ ವರದಿ, ಸೆ. ೨೪: ಬ್ರಹ್ಮಗಿರಿ ಸಹೋದಯ ಸಂಕೀರ್ಣದ ಅಡಿಯಲ್ಲಿ ಕೊಡಗಿನ ೬ ಸಿಬಿಎಸ್‌ಸಿ ಅಂತರ್ ಶಾಲೆಗಳ ಸಂಸತ್ ಚರ್ಚಾ ಸ್ಪರ್ಧೆ ಅತ್ತೂರು ನ್ಯಾಷನಲ್ ಅಕಾಡೆಮಿ ಶಾಲೆಯ ಆವರಣದಲ್ಲಿ ನಡೆಯಿತು.

ಸೈನಿಕ ಶಾಲೆಯ ಗಿತೇಶ್ ಪ್ರಥಮ ಸ್ಥಾನ ಪಡೆದುಕೊಂಡರು. ಕೊಡಗು ವಿದ್ಯಾಲಯದ ಕೆ. ವಿ. ರಘುವಂಶಿ ದ್ವಿತೀಯ ಪಡೆದುಕೊಂಡರು. ಸೈನಿಕ ಶಾಲೆ ಉತ್ತಮ ತಂಡ ಬಹುಮಾನ ಪಡೆದುಕೊಂಡಿತು.

ಅತ್ತೂರು ನ್ಯಾಷನಲ್ ಅಕಾಡೆಮಿ, ಅರಮೇರಿ ಎಸ್‌ಎಂಎಸ್, ಹಾರಂಗಿ ಜ್ಞಾನಗಂಗಾ ವಸತಿ ಶಾಲೆ, ಭಾರತೀಯ ವಿದ್ಯಾ ಭವನ ಕೊಡಗು ವಿದ್ಯಾಲಯ, ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆ, ಸೈನಿಕ ಶಾಲೆ, ಎಎಲ್‌ಜಿ ಕ್ರೆಸೆಂಟ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ನ್ಯಾಷನಲ್ ಅಕಾಡೆಮಿ ಶಾಲೆಯ ಸಂಸ್ಥಾಪಕಿ ಡಾ. ಶಾಂತಿ ಅಚ್ಚಪ್ಪ, ಟ್ರಸ್ಟಿ ಅಯ್ಯಪ್ಪ ಅಚ್ಚಪ್ಪ ಅಧ್ಯಕ್ಷತೆಯಲ್ಲಿ ಸ್ಪರ್ಧೆ ನಡೆಯಿತು.

ಪ್ರಮುಖರಾದ ಪಿ.ಆರ್. ಶಿವದಾಸ್, ಕುಟ್ಟಂಡ ಸ್ವರೂಪ ಅಯ್ಯಪ್ಪ, ಕುಟ್ಟಂಡ ಕನಿಕಾ ಅಯ್ಯಪ್ಪ, ಮುಖ್ಯ ಶಿಕ್ಷಕಿ ಪುಷ್ಪ ಇದ್ದರು.