ಸೋಮವಾರಪೇಟೆ, ಸೆ. ೨೪: ಇಲ್ಲಿನ ಮಹಿಳಾ ಸಹಕಾರ ಸಂಘವು ಅಮೃತ ಮಹೋತ್ಸವ ಸಂಭ್ರಮ ದಲ್ಲಿದ್ದು, ಮುಂದಿನ ತಿಂಗಳು ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ ಎಂದು ಅಧ್ಯಕ್ಷೆ ಸುಮಾ ಸುದೀಪ್ ಹೇಳಿದರು. ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂಘಕ್ಕೆ ೭೫ ವರ್ಷಗಳು ತುಂಬಿರುವ ಹಿನ್ನೆಲೆ ಅಕ್ಟೋಬರ್ ತಿಂಗಳಿನಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸದಸ್ಯರು ಹೆಚ್ಚಿನ ಸಹಕಾರ ನೀಡುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು. ಇನ್ನೂ ಹೆಚ್ಚಿನ ಸದಸ್ಯರು ಪೂರ್ಣ ಪ್ರಮಾಣದ ಷೇರು ಹಣವನ್ನು ಪಾವತಿ ಮಾಡಲು ಮುಂದಾಗಿಲ್ಲ. ಕೂಡಲೇ ಎಲ್ಲರೂ ಪೂರ್ಣ ಪ್ರಮಾಣದ ಶೇರು ಹಣವನ್ನು ಸಂಘದಲ್ಲಿ ಪಾವತಿಸುವಂತೆ ಅಧ್ಯಕ್ಷೆ ಸುಮಾ ಸುದೀಪ್ ಮನವಿ ಮಾಡಿದರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಜಲಜಾ ಶೇಖರ್, ಕಾರ್ಯದರ್ಶಿ ಲೀಲಾ ನಿರ್ವಾಣಿ, ನಿರ್ದೇಶಕರಾದ ಗಾಯತ್ರಿ ನಾಗರಾಜು, ಗೀತಾ ರಾಜು, ಜ್ಯೋತಿ ಶುಭಾಕರ್, ಶೋಭಾ ಯಶವಂತ್, ಚಂದ್ರಕಲಾ ಗಿರೀಶ್, ವರಲಕ್ಷಿö್ಮÃ, ಸಿದ್ಧೇಶ್ವರ್, ಶೈಲಾ ವಸಂತ್ ಇದ್ದರು.