ಸುಂಟಿಕೊಪ್ಪ, ಸೆ. ೨೪: ಜಿಲ್ಲಾ ಮಟ್ಟದ ೧೪ ವರ್ಷದೊಳಗಿನ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸಂತ ಮೇರಿ ಆಂಗ್ಲ ವಿದ್ಯಾ ಸಂಸ್ಥೆಯ ಬಾಲಕಿಯರು ಗೆಲುವು ಸಾಧಿಸುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ಅರ್ವತೋಕ್ಲುವಿನ ಸರ್ವದೈವತ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಯಲ್ಲಿ ಸಂತ ಮೇರಿ ಆಂಗ್ಲ ವಿದ್ಯಾಸಂಸ್ಥೆಯ ನಿಬ್ರ ಫಾತೀಮಾ, ಅಹಲ್ಯ, ಸಮೀಕ್ಷ ಅನುಷ್ಕ, ಚೈತನ್ಯ ತಂಡದವರು ಪಂದ್ಯಾವಳಿಯಲ್ಲಿ ಸ್ಪರ್ಧಿಸಿದರು. ಪೈನಲ್ ಪಂದ್ಯಾವಳಿಯು ಅರ್ವತೋಕ್ಲಿನ ಸರ್ವದೈವತ ತಂಡಗಳ ನಡುವೆ ನಡೆದು ಸರ್ವದೈವತ ಶಾಲೆಯ ತಂಡವನ್ನು ಮಣಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.
ತಂಡದ ಸಾಧನೆಗೆ ತರಬೇತುದಾರರಾಗಿ ಕಾರ್ಯನಿರ್ವಹಿಸಿದ್ದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕÀ ಚಂದ್ರಶೇಖರ್ ತರಬೇತಿ ನೀಡುತ್ತಿದ್ದಾರೆ.