ಸೋಮವಾರಪೇಟೆ, ಸೆ. ೨೪: ಮಾದಾಪುರವನ್ನು ಹೋಬಳಿ ಕೇಂದ್ರವನ್ನಾಗಿಸಿ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯಿಂದ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರ್ಗೆ ಮನವಿ ಸಲ್ಲಿಸಲಾಯಿತು.
ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು, ಶಾಸಕರ ಗೃಹ ಕಚೇರಿಗೆ ತೆರಳಿ ಈ ಬಗ್ಗೆ ಮನವಿ ಸಲ್ಲಿಸಿ, ಕ್ರಮಕ್ಕೆ ಗಮನ ಸೆಳೆದರು.
ಪ್ರಸ್ತುತ ಸೋಮವಾರಪೇಟೆ ಕಸಬಾ ಹೋಬಳಿಯು ಮಡಿಕೇರಿ ತಾಲೂಕಿನ ಮಕ್ಕಂದೂರು ಸರಹದ್ದಿನಿಂದ ಶನಿವಾರಸಂತೆ ಹೋಬಳಿಯ ದೊಡ್ಡಮಳ್ತೆ, ಆಲೂರು ಗ್ರಾಮಗಳ ಉತ್ತರದಿಂದ ದಕ್ಷಿಣದವರೆಗೆ ಸರಿಸುಮಾರು ೪೫ ಕಿ.ಮೀ. ವ್ಯಾಪ್ತಿ ಹೊಂದಿದೆ. ಇದರಿಂದಾಗಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಸಕಾಲದಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಲು ಕಷ್ಟವಾಗುತ್ತಿದೆ ಎಂದು ಶಾಸಕರು ಗಮನ ಸೆಳೆದರು.
ಪ್ರಸ್ತುತ ಸರ್ಕಾರಿ ಕೆಲಸ ಕಾರ್ಯಗಳಿಗೆ ಸಾರ್ವಜನಿಕರಿಗೆ ಅನಾನುಕೂಲತೆ ಉಂಟಾಗುತ್ತಿದೆ. ಮಾದಾಪುರ, ಕಾಂಡನಕೊಲ್ಲಿ ಮತ್ತು ಗರ್ವಾಲೆ ವೃತ್ತಗಳಿಗೆ ಸೇರಿದ ಬಹುತೇಕ ಗ್ರಾಮಗಳು ಭೌಗೋಳಿಕವಾಗಿ ಬೆಟ್ಟಗುಡ್ಡಗಳಿಂದ, ನದಿ, ತೊರೆ ಹಳ್ಳಗಳಿಂದ ಕೂಡಿದ್ದು, ಅತ್ಯಧಿಕ ಮಳೆ ಬೀಳುವ ಪ್ರದೇಶಗಳಾಗಿರುತ್ತವೆ.
ಸ್ಥಳೀಯವಾಗಿ ಸಮಸ್ಯೆಗಳು ಎದುರಾದಾಗ ಸೋಮವಾರಪೇಟೆ ಕಸಬಾ ಹೋಬಳಿ, ಕಂದಾಯ ಇಲಾಖೆಯ ಸಿಬ್ಬಂದಿಗಳು ತುರ್ತಾಗಿ ಬಂದು ಪರಿಶೀಲಿಸಿ ವರದಿ ನೀಡಲು ಮತ್ತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಕಷ್ಟ ಸಾಧ್ಯವಾಗಿರುತ್ತದೆ ಎಂದು ವಿವರಿಸಿದರು.
ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಜಂಬೂರಿನಲ್ಲಿ ಪುನರ್ವಸತಿ ಕಲ್ಪಿಸಿದ್ದು, ಈಗಾಗಲೇ ಅನೇಕ ಕುಟುಂಬಗಳು ಇಲ್ಲಿ ನೆಲೆಸಿವೆ. ಈಗಾಗಲೇ ಸಮುದಾಯ ಆರೋಗ್ಯ ಕೇಂದ್ರ, ಪೊಲೀಸ್ ಉಪ ಠಾಣೆ, ವಾರದ ಸಂತೆ, ಪ್ರವಾಸಿ ಮಂದಿರ, ಗ್ರಾಮ ಪಂಚಾಯಿತಿ, ಸಹಕಾರ ಸಂಘ ಮತ್ತು ರಾಷ್ಟಿçÃಕೃತ ಬ್ಯಾಂಕುಗಳು, ಪ್ರೌಢಶಾಲೆ ಮತ್ತು ಕಾಲೇಜು, ತೋಟಗಾರಿಕೆ ಇಲಾಖೆಗೆ ಸಂಬAಧಿಸಿದ ಸವಲತ್ತುಗಳು, ಪೆಟ್ರೋಲ್ ಬಂಕ್ ಒಳಗೊಂಡಿದೆ.
ಇದರೊಂದಿಗೆ ಮಡಿಕೇರಿ-ಸೋಮವಾರಪೇಟೆ-ಸುಂಟಿಕೊಪ್ಪ-ಗರ್ವಾಲೆ-ಕಾAಡನಕೊಲ್ಲಿ ಹರದೂರಿಗೆ ಹೋಗಲು ಮುಖ್ಯರಸ್ತೆ ಮತ್ತು ಸಂಪರ್ಕ ರಸ್ತೆಗಳು ಇದ್ದು, ಹೋಬಳಿ ಕೇಂದ್ರವಾಗಲು ಎಲ್ಲಾ ಅರ್ಹತೆ ಹೊಂದಿದೆ.
ಈ ಹಿನ್ನೆಲೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಾದಾಪುರದನ್ನು ಹೋಬಳಿ ಕೇಂದ್ರವನ್ನಾಗಿಸಬೇಕೆAದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಶಾಸಕ ಮಂತರ್ ಗೌಡ ಮಾತನಾಡಿ, ಈ ಬಗ್ಗೆ ಸಂಬAಧಿಸಿದ ಇಲಾಖೆಯೊಂದಿಗೆ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದೇ ಮನವಿಯನ್ನು ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ತಹಶೀಲ್ದಾರ್ರಿಗೆ ಸಲ್ಲಿಸಲಾಯಿತು.
ಈ ಸಂದರ್ಭ ಸಮಿತಿಯ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಪದಾಧಿಕಾರಿಗಳಾದ ಹೂವಯ್ಯ ಮಾಸ್ಟರ್, ನಾಗಂಡ ಭವಿನ್, ಜಯರಾಂ, ಮಂಜುನಾಥ್, ಕೂಗೂರು ಸಂದೀಪ್, ರಕ್ಷಿತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.