ವೀರಾಜಪೇಟೆ, ಸೆ. ೨೪: ಗ್ರಾಮೀಣ ಪ್ರದೇಶಗಳಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ಸರ್ಕಾರದ ಅನುದಾನ ಬಳಸಿಕೊಂಡು ಹಂತ ಹಂತವಾಗಿ ಸಮಸ್ಯೆಗೆ ಪರಿಹಾರ ದೊರಕಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲ ಗ್ರಾಮದ ಕರಿನೆರವಂಡ ಕುಟುಂಬಸ್ಥರ ಗುರುಮಠಕ್ಕೆ ತೆರಳುವ ಸಂಪರ್ಕ ರಸ್ತೆ ಉದ್ಘಾಟನೆ ಮಾಡಿ ಕರಿನೆರವಂಡ ಕುಟುಂಬಸ್ಥರಿAದ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕರು, ಗ್ರಾಮೀಣ ಭಾಗದಲ್ಲಿ ಹಲವಾರು ಸಮಸ್ಯೆಗಳಿವೆ. ಅಲ್ಲದೆ ಅಧಿಕ ಮಳೆಯಾದ ಕಾರಣ ರಸ್ತೆಗಳು ಹಾನಿಯಾಗಿವೆ. ಕುಡಿಯುವ ನೀರು ಮತ್ತು ಇತರ ಸಮಸ್ಯೆಗಳು ಕಾಡುತ್ತಿವೆ. ಗ್ರಾಮಸ್ಥರು ಸಮಸ್ಯೆಯ ದೂರು ಆರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ವಹಿಸಲಾಗಿದೆ. ಸರ್ಕಾರ ಬಿಡುಗಡೆಗೊಳಿಸುವ ಅನುದಾನದ ಆಧಾರದ ಮೇಲೆ ಹಂತಹAತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕರಿನೆರವಂಡ ಮಿಟ್ಟು ಅಯ್ಯಪ್ಪ ಮಾತನಾಡಿದರು.
ಈ ಸಂದರ್ಭ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಜೆಫ್ರಿ ಉತ್ತಪ್ಪ, ಸದಸ್ಯರಾದ ಪ್ರಶಾಂತ್ ಉತ್ತಪ್ಪ, ಎಂ.ಎA. ಇಸ್ಮಾಯಿಲ್, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಗುತ್ತಿಗೆದಾರಾದ ಬಲ್ಟಿಕಾಳಂಡ ರಂಜಿ, ಕರಿನೆರವಂಡ ಜಾಲು ಚೆಂಗಪ್ಪ, ಜಿತನ್, ಡ್ಯಾನಿ, ಸಂಕೇತ್ ಕಾಳಯ್ಯ, ಸರಿತಾ ಮತ್ತು ರತಿ ಹಾಗೂ ಕುಟುಂಬದ ಹಿರಿಯರು, ಕಿರಿಯರು ಹಾಜರಿದ್ದರು.