ವೀರಾಜಪೇಟೆ, ಸೆ. ೨೨: ಕೊಡಗು ಜಿಲ್ಲಾ ಸಹಕಾರ ಮಹಾಮಂಡಳ ನಿಯಮಿತ (ಫೆಡರೇಶನ್) ೨೦೨೩-೨೪ನೇ ಸಾಲಿನ ೭೨ನೇ ವಾರ್ಷಿಕ ಮಹಾಸಭೆ ಅಧ್ಯಕ್ಷ ವಾಟೇರಿರ ಪಿ. ಬೋಪಣ್ಣ ಅಧ್ಯಕ್ಷತೆಯಲ್ಲಿ ಮಹಿಳಾ ಸಮಾಜ ಸಭಾಂಗಣದಲ್ಲಿ ನಡೆಯಿತು.

ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ವಾಟೇರಿರ ಪಿ. ಬೋಪಣ್ಣ, ಸಂಘವು ೨೦೨೩-೨೪ನೇ ಸಾಲಿನಲ್ಲಿ ರೂ. ೧೨.೭೬ ಕೋಟಿ ವ್ಯಾಪಾರ ವಹಿವಾಟು ಮಾಡಿದೆ. ಅದರಲ್ಲಿ ರೂ. ೮೫.೩೧ ಲಕ್ಷ ಲಾಭ ಗಳಿಸಿದೆ. ಇದರಲ್ಲಿ ಕಾಯ್ದಿರಿಸಿದ ಬಾಬ್ತು ಕಳೆದು ರೂ. ೨೫.೨೭ ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯು ಹೆಚ್ಚಿನ ವಹಿವಾಟುಗಳನ್ನು ಮಾಡಲು ಮುಂದಾಗಿದೆ. ಕಳೆದ ಸಾಲಿನಲ್ಲಿ ನೂತನ ಅಕ್ಕಿ ಗಿರಣಿಯನ್ನು ಅಳವಡಿಸಲಾಗಿದ್ದು, ರೈತಾಪಿ ವರ್ಗ ಮತ್ತು ಸದಸ್ಯರಿಗೆ ಹೆಚ್ಚು ಉಪಯುಕ್ತವಾಗಿದೆ ಎಂದರು.

ಸAಸ್ಥೆಯ ವತಿಯಿಂದ ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಘಟಕವನ್ನು ಆರಂಭಿಸಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಂಸ್ಥೆಯು ಹೊಂದಿರುವ ಮದ್ಯದ ಅಂಗಡಿಯಿAದ ರೂ. ೧೫ ಲಕ್ಷಕ್ಕಿಂತ ಹೆಚ್ಚು ಲಾಭಾಂಶವನ್ನು ಗಳಿಸಿದೆ. ಗೋಣಿಕೊಪ್ಪ, ಸಿದ್ದಾಪುರ, ಶ್ರೀಮಂಗಲ ಮತ್ತು ಆರ್ಜಿಯಲ್ಲಿ ಶಾಖೆಗಳನ್ನು ಹೊಂದಿದ್ದು, ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರು ಹೆಚ್ಚಿನ ಸಹಕಾರವನ್ನು ನೀಡುವಂತಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ತಾತಂಡ ಎಂ. ಬಿಪಿನ್ ಕಾವೇರಪ್ಪ, ಸಹ ಕಾರ್ಯದರ್ಶಿ ಕೆ.ಎಂ. ಚಂದ್ರಕಾAತ್, ನಿರ್ದೇಶಕರಾದ ಕಂಜಿತAಡ ಮಂದಣ್ಣ, ಮುಲ್ಲೇಂಗಡ ಎಂ. ಕುಟ್ಟಪ್ಪ, ಮಾಚಿಮಂಡ ಬಿ. ವಸಂತ್, ಕೊಕ್ಕಂಡ ಎ. ಬಿದ್ದಪ್ಪ, ತಾತಂಡ ಎಂ. ಬಿಪಿನ್ ಕಾವೇರಪ್ಪ, ಸಹ ಕಾರ್ಯದರ್ಶಿ ಕೆ.ಎಂ. ಚಂದ್ರಕಾAತ್, ನಿರ್ದೇಶಕರಾದ ಕಂಜಿತAಡ ಮಂದಣ್ಣ, ಮುಲ್ಲೇಂಗಡ ಎಂ. ಕುಟ್ಟಪ್ಪ, ಮಾಚಿಮಂಡ ಬಿ. ವಸಂತ್, ಕೊಕ್ಕಂಡ ಎ. ಬಿದ್ದಪ್ಪ, vಚೇನಂಡ ಈ. ಗಿರೀಶ್ ಪೂಣಚ್ಚ, ಮೂಕೊಂಡ ಶಶಿ ಸುಬ್ರಮಣಿ, ಕುಂಬೇರ ಮನುಕುಮಾರ್, ಅಂಜಪರವAಡ ಎಂ. ಮಂದಣ್ಣ, ಕೂತಂಡ ಸಚಿನ್ ಕುಟ್ಟಯ್ಯ, ಪುಲಿಯಂಡ ಎ. ಪೊನ್ನಣ್ಣ, ಕೆ.ಆರ್. ವಿನೋದ್, ಕರ್ತಚ್ಚಿರ ಲತಾ, ಪುಟ್ಟಿಚಂಡ ವೀಣಾ ಮಹೇಶ್, ಹೆಚ್.ಎನ್. ಶೇಖರ್, ಹೆಚ್.ಜಿ. ಆನಂದ ಉಪಸ್ಥಿತರಿದ್ದರು.