ಕೂಡಿಗೆ, ಸೆ. ೨೨: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಚಿಕ್ಕತ್ತೂರು ಹಾಲು ಉತ್ಪಾದಕರ ಸಹಕಾರ ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಡಿ.ಎಸ್. ಗಣೇಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ, ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ಮಾತನಾಡಿ, ಸಂಘವು ಈ ಸಾಲಿನಲ್ಲಿ ರೂ. ೩.೦೨ ಲಕ್ಷ ನಿವ್ವಳ ಲಾಭಾಂಶ ಗಳಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿ ಪೂರಕವಾದ ಯೋಜನೆಗಳಿಗೆ ಒಕ್ಕೂಟದ ವತಿಯಿಂದ ಸಹಕಾರ ವನ್ನು ನೀಡಲಾಗುವುದು ಎಂದು ತಿಳಿಸಿದರು. ಒಕ್ಕೂಟದ ವಿಸ್ತರ ಣಾಧಿಕಾರಿ ವೀಣಾ ಪಶುಪಾಲನೆ ಮತ್ತು ಅದಕ್ಕೆ ಸಂಬAಧಿಸಿದ ವಿಷಯಗಳ ಬಗ್ಗೆ ರೈತರಿಗೆ ತಿಳಿಸಿದರು. ಸಂಘದ ಉಪಾಧ್ಯಕ್ಷ ಆರ್. ಕುಮಾರಸ್ವಾಮಿ, ನಿರ್ದೇಶಕರಾದ ರಾಮಣ್ಣರೈ, ಪುಟ್ಟೆಗೌಡ, ದೇವೆಗೌಡ, ಗುಜೇಂದ್ರ, ಪುಟ್ಟಯ್ಯ, ಅಶ್ವಿನಿ ಕುಮಾರ್, ಗೋವಿಂದ ಶೆಟ್ಟಿ, ಪುರುಷೋತ್ತಮ, ಪುಷ್ಪಲತಾ ಹಾಜರಿದ್ದರು.
ಸಂಘಕ್ಕೆ ಹೆಚ್ಚು ಹಾಲನ್ನು ಹಾಕಿದ ರೈತರಿಗೆ ಬಹುಮಾನವನ್ನು ನೀಡಲಾಯಿತು. ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಮಂಡಿಸಿದರು. ರಾಮೇಗೌಡ ಸ್ವಾಗತಿಸಿ, ವಂದಿಸಿದರು.