ತಾ. ೨೪ ರಂದು ವಾರ್ಷಿಕ ಮಹಾಸಭೆ
ಪೊನ್ನಂಪೇಟೆ, ಸೆ. ೨೨: ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನ ಸಹಕಾರ ಸಂಘವು ೨೦೨೩-೨೪ನೇ ಸಾಲಿನಲ್ಲಿ ರೂ. ೯೩.೩೮ ಕೋಟಿಗಳ ವಾರ್ಷಿಕ ವಹಿವಾಟು ನಡೆಸಿದ್ದು, ರೂ. ೯೪.೨೮ ಲಕ್ಷ ಕ್ರೋಢೀಕೃತ ವ್ಯಾಪಾರ ಲಾಭ ಹಾಗೂ ರೂ ೩೪.೪೯ ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಮುದ್ದಿಯಡ ಡಿ. ಮಂಜು ಗಣಪತಿ ಮಾಹಿತಿ ನೀಡಿದ್ದಾರೆ.
ಸಂಘದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಸಂಘದ ವಾರ್ಷಿಕ ವರದಿ ನೀಡಿದರು. ಸಂಘದ ೩೨೬೮ ಸದಸ್ಯರುಗಳ ವಾರ್ಷಿಕ ವಹಿವಾಟಿನಿಂದ ಸಂಘವು ಲಾಭದ ಹಾದಿಯಲ್ಲಿ ಮುನ್ನಡೆಯುತ್ತಿ ರುವುದರಿಂದ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ. ಸಂಘದ ಸದಸ್ಯರಿಗೆ ಈ ಬಾರಿ ಶೇ. ೨೦ ರಷ್ಟು ಡಿವಿಡೆಂಡ್ ನೀಡಲಾಗುವುದು ಎಂದರು.
ಸದಸ್ಯರ ಪಾಲು ಹಣ ರೂ. ೧೨೯.೭೧ ಲಕ್ಷ, ಸಂಘದ ಕ್ಷೇಮನಿಧಿ ರೂ. ೧೪೦.೪೭ ಲಕ್ಷ, ಇತರ ಠೇವಣಾತಿ ಮತ್ತು ನಿಧಿಗಳು ಸೇರಿ ರೂ. ೬೪೮.೭೧ ಲಕ್ಷ, ದುಡಿಯುವ ಬಂಡವಾಳ ೧೨೫೮.೮೩ ಲಕ್ಷ, ಇತರ ಸಂಸ್ಥೆಗಳಲ್ಲಿ ಪಾಲು ಹಾಗೂ ಠೇವಣಿ ರೂಪದಲ್ಲಿ ಧನ ವಿನಿಯೋಗಗಳು ಸೇರಿ ರೂ. ೨೨೦.೫೫ ಲಕ್ಷ, ಸಂಘದ ಚರ ಸ್ಥಿರಾಸ್ತಿ ಮೌಲ್ಯ ರೂ. ೩೯೮.೦೯ ಲಕ್ಷಗಳಾಗಿರುತ್ತದೆ ಎಂದು ತಿಳಿಸಿದರು.
೧೯೩೦ ರಲ್ಲಿ ಪೊನ್ನಂಪೇಟೆ ನಾಡು ಕ್ರಾಪ್ ಲೋನ್ ಸೇಲ್ ಮತ್ತು ಸಪ್ಲೆöÊ ಲಿ. ಎಂಬ ನಾಮಕರಣದಿಂದ ಪ್ರಾರಂಭವಾದ ಸಂಘವು, ೧೯೫೮ ರಲ್ಲಿ ಪೊನ್ನಂಪೇಟೆ ನಾಡು ವ್ಯವಸಾಯೋತ್ಪನ್ನ ಮಾರಾಟ ಮತ್ತು ಪರಿವರ್ತನಾ ಸಹಕಾರ ಸಂಘ ನಿಯಮಿತ ಎಂದು ಹೆಸರು ನೋಂದಾಯಿಸಿಕೊAಡು, ತನ್ನ ಕಾರ್ಯಕ್ಷೇತ್ರವನ್ನು ಪೊನ್ನಂಪೇಟೆ ನಾಡಿನ ೧೫ ಗ್ರಾಮಗಳು ಮತ್ತು ಶ್ರೀಮಂಗಲ ನಾಡಿನ ೬ ಗ್ರಾಮಗಳು ಒಳಗೊಂಡAತೆ ಒಟ್ಟು ೨೧ ಗ್ರಾಮಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಸಂಘವು ರೈತ ಸದಸ್ಯರ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ವ್ಯವಸಾಯೋಪಕರಣ, ಗೊಬ್ಬರ, ಕ್ರಿಮಿನಾಶಕ, ಗ್ರಾಹಕರ ಅವಶ್ಯಕ ವಸ್ತುಗಳಾದ ಸಿಮೆಂಟ್, ಹತ್ಯಾರು,ಬಟ್ಟೆ, ಮುಳ್ಳು ತಂತಿ, ಆರ್.ಸಿ.ಸಿ. ಮೋರಿ ಪೈಪ್, ಗೃಹ ಬಳಕೆ ವಸ್ತುಗಳು, ಕೋವಿ ತೋಟ, ಅಲ್ಲದೆ ಸರ್ಕಾರದ ನಿಯಂತ್ರಿತ ಆಹಾರ ಸಾಮಗ್ರಿಗಳ ವಿತರಕರಾಗಿ ಹಾಗೂ ಆರ್.ಟಿ.ಸಿ. ವಿತರಿಸುವ ಕಾರ್ಯನಿರ್ವಹಿಸುತ್ತಿದ್ದು, ರೈತರ ಅನುಕೂಲಕ್ಕಾಗಿ ಪ್ರತಿ ಗಂಟೆಗೆ ೧.೫ ಟನ್ ಸಾಮರ್ಥ್ಯದ ಬಿನ್ನಿ ಅಕ್ಕಿಗಿರಣಿ ಹೊಂದಿರುತ್ತದೆ. ಸಂಘವು ಇಂಡಿ ಯನ್ ಆಯಿಲ್ ಕಾರ್ಪೊರೇಷನ್ನ ಚಿಲ್ಲರೆ ಮಾರಾಟದ ಪೆಟ್ರೋಲ್ ಬಂಕ್ ಹೊಂದಿದ್ದು, ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆ ಸಲ್ಲಿಸುತ್ತಿದೆ.
ರೈತರ ಹುಟ್ಟುವಳಿಗಳಾದ ಭತ್ತ, ಕಾಫಿ ಮತ್ತು ಕಾಳು ಮೆಣಸು ದಾಸ್ತಾನು ಇಡಲು ಸುಸಜ್ಜಿತವಾದ ಗೋದಾಮು ಸೌಲಭ್ಯ ಹೊಂದಿದ್ದು, ರೈತ ಸದಸ್ಯರ ಹುಟ್ಟುವಳಿಯ ಆಧಾರದ ಮೇಲೆ ಈಡಿನ ಸಾಲ ಕೊಡುವ ವ್ಯವಸ್ಥೆ ಇದ್ದು, ರೈತ ಸದಸ್ಯರ ಅನುಕೂಲಕ್ಕಾಗಿ ಕಾಫಿಗೆ ಉತ್ತಮ ಮಾರುಕಟ್ಟೆ ದೊರಕಿಸುವ ಉದ್ದೇಶದಿಂದ ಕಾಫಿ ಗಿರಣಿ (ಹಲ್ಲಿಂಗ್) ಘಟಕವನ್ನು ಪ್ರಾರಂಭಿಸಲಾಗಿದೆ. ಸಂಘವು ಉತ್ತಮ ನಿರ್ವಹಣೆಯ ೧.೮೦ ಎಕ್ರೆ ಕಾಫಿ ತೋಟವನ್ನು ಹೊಂದಿರುತ್ತದೆ. ರೈತ ಸದಸ್ಯರ ಅನುಕೂಲಕ್ಕಾಗಿ ೧೦೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಗೊಬ್ಬರ ಗೋದಾಮು ನಿರ್ಮಾಣ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಸದಸ್ಯರ ಅನುಕೂಲಕ್ಕಾಗಿ ಸಿಲ್ಕ್ ಅಕ್ಕಿ ಗಿರಣಿ ಹಾಗೂ, ಪಟ್ಟಣ ಸಹಕಾರ ಬ್ಯಾಂಕಿನ ಸಮೀಪ ಇರುವ ಸಂಘದ ನಿವೇಶನದಲ್ಲಿ ವಾಣಿಜ್ಯ ಸಂಕಿರ್ಣ ನಿರ್ಮಾಣ, ಹಾಗೂ ೧೦೦೦ ಮೆಟ್ರಿಕ್ ಟನ್ ಗೋದಾಮು ಕಟ್ಟಡದ ಮೇಲೆ ಸಭಾ ಭವನ ನಿರ್ಮಿಸುವ ಉದ್ದೇಶ ಹೊಂದ ಲಾಗಿದೆ ಎಂದು ಮಾಹಿತಿ ನೀಡಿದರು. ಸಂಘವು ಸತತವಾಗಿ `ಎ' ತರಗತಿ ಆಡಿಟ್ ವರ್ಗೀಕರಣದಲ್ಲಿ ಮುಂದು ವರೆಯುತ್ತಿದ್ದು, ಸಂಘವು ಅಭಿವೃದ್ಧಿ ಯನ್ನು ಹೊಂದಲು ಸದಸ್ಯರೊಂದಿಗೆ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ನೌಕರರ ಗಣನೀಯ ಸೇವೆಯೇ ಬಹುಮುಖ್ಯ ಎಂದು ಶ್ಲಾಘನೆ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಲು ಮತ್ತು ಸಂಘದ ಸದಸ್ಯರುಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ವಿವಿಧ ಯೋಜನೆಗಳನ್ನು ರೂಪಿಸುವ ಚಿಂತನೆ ಆಡಳಿತ ಮಂಡಳಿ ನಡೆಸಿದೆ ಎಂದು ಹೇಳಿದರು.
ಮಹಾಸಭೆ : ಸಂಘದ ೨೦೨೩-೨೪ ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ. ೨೪ ರಂದು ಪೊನ್ನಂಪೇಟೆ ಕೊಡವ ಸಮಾಜದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಈ ಸಂದÀರ್ಭ ಉಪಾಧ್ಯಕ್ಷೆ ಬೊಟ್ಟಂಗಡ ಎಸ್. ದಶಮಿ ದೇಚಮ್ಮ, ನಿರ್ದೇಶಕರುಗಳಾದ ಮುದ್ದಿಯಡ ಎ. ಸೋಮಯ್ಯ, ಚೋಡುಮಾಡ ಪಿ. ಶ್ಯಾಮ್, ಐನಂಡ ಕೆ. ಬೋಪಣ್ಣ, ಪದಾರ್ಥಿ ಎಸ್. ಮಂಜುನಾಥ್, ಮಾಚಂಗಡ ಬಿ. ಮೊಣ್ಣಪ್ಪ, ಮೂಕಳೇರ ಬಿ. ರಮೇಶ್, ಬೋಡಂಗಡ ಟಿ. ಜಗದೀಶ್, ಮೂಕಳೇರ ಪಿ. ಶಾರದ, ಬಿ.ಎಸ್. ಚಂದ್ರಶೇಖರ್, ಹೆಚ್.ಹೆಚ್. ತಮ್ಮಯ್ಯ, ಹಾಲುಮತದ ಎಂ.ಡಿಕ್ಕಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಟಿ. ಪೂನಂ, ಆಂತರಿಕ ಲೆಕ್ಕಪರಿಶೋಧಕ ಎ.ಬಿ. ಸತ್ಯನಾರಾಯಣ ಹಾಜರಿದ್ದರು.