ಮಡಿಕೇರಿ, ಸೆ. ೨೨: ಮಡಿಕೇರಿಯಲ್ಲಿರುವ ಕೊಡವ ಎಂಟರ್ ಪ್ರಿನರ್ಸ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆಯ ೬ನೇ ಮಹಾಸಭೆ ತಾ. ೨೧ ರಂದು ಬಾಲಭವನದಲ್ಲಿ ಜರುಗಿತು.

ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ಉಪಾಧ್ಯಕ್ಷ ಮಿನ್ನಂಡ ರಾಮಪ್ಪ, ಸಿ.ಇ.ಓ. ಬಲ್ಯಂಡ ಅರುಣ್ ಪೊನ್ನಪ್ಪ ಹಾಗೂ ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು. vಈ ಸಂದರ್ಭ ಕಳೆದ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ವ್ಯಾಪಾರ ನಡೆಸುತ್ತಿರುವ ಉದ್ಯಮಿಗಳಾದ ಕುಂಚೆಟ್ಟಿರ ಗಣೇಶ್ ಹಾಗೂ ಚೇಂದ್ರಿಮಾಡ ಮೋಹನ್ ಅವರುಗಳನ್ನು ಸನ್ಮಾನಿಸಲಾಯಿತು.

ಕೊಡವರನ್ನು ವ್ಯಾಪಾ ರೋಧ್ಯಮಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ೨೦೧೯ ರಲ್ಲಿ ಈ ಸಂಸ್ಥೆಯನ್ನು ಪ್ರಾರಂಭಿಸಲಾಗಿದೆ. ೩೮೮ ಷೇರುದಾರರಿದ್ದು, ೧.೪೫ ಕೋಟಿಯಷ್ಟು ಷೇರು ಬಂಡವಾಳವಿದ್ದು, ವ್ಯಾಪಾರಕ್ಕೆ ಪೂರಕವಾಗಿ ಸಾಲ ವಿತರಿಸ ಲಾಗುತ್ತಿದೆ. ನಿನ್ನೆಯ ಸಭೆಗೆ ಮುಖ್ಯ ಅತಿಥಿಗಳಾಗಿ ರಿಪಬ್ಲಿಕ್ ಟಿ.ವಿ.ಯ ಮುಖ್ಯಸ್ಥ ಚೇರಂಡ ಕಿಶನ್ ಹಾಗೂ ಗೋಣಿಕೊಪ್ಪದ ಉದ್ಯಮಿ ಕೊಲ್ಲಿರ ಉಮೇಶ್ ಅವರುಗಳು ಪಾಲ್ಗೊಂಡು ಮಾತನಾಡಿದರು.

ಸಂಸ್ಥೆಯ ಕಾರ್ಯಚಟುವಟಿಕೆ, ಮುಂದಿನ ಯೋಜನೆಗಳ ಕುರಿತು ಸದಸ್ಯರಿಗೆ ಮಾಹಿತಿ ನೀಡಲಾಯಿತು.