ನಾಪೋಕ್ಲು, ಸೆ. ೨೧: ನಾಪೋಕ್ಲು ಪ್ರಾಥಮಿಕ ಕೃಪಿ ಪತ್ತಿನ ಸಹಕಾರ ಸಂಘವು ೨೦೨೩-೨೪ನೇ ಸಾಲಿನಲ್ಲಿ ೪೬.೮೭ ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೇಟೋಳಿರ ಎಸ್. ಹರೀಶ್ ಪೂವಯ್ಯ ತಿಳಿಸಿದರು.
ಸಂಘದ ಸಭಾಂಗಣದಲ್ಲಿ ಗುರುವಾರ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿ, ಸಂಘದಲ್ಲಿ ಒಟ್ಟು ೨೫೩೪ ಸದಸ್ಯರಿದ್ದಾರೆ. ಸಂಘದಲ್ಲಿ ಪಾಲು ಬಂಡವಾಳ ೧.೨೫ ಕೋಟಿ ರೂ. ಒಟ್ಟು ನಿಧಿ ೩.೩೦ ಕೋಟಿ ಇದೆ ಎಂದ ಅವರು, ಸದಸ್ಯರು ೪೩.೨೩ ಕೋಟಿ ರೂ. ಅನ್ನು ಠೇವಣಿ ಇರಿಸಿದ್ದು, ಸದಸ್ಯರಿಗೆ ೪೦.೧೮ ಕೋಟಿ ರೂ.ಗಳನ್ನು ಸಾಲ ರೂಪದಲ್ಲಿ ನೀಡಲಾಗಿದೆ. ದುಡಿಯುವ ಬಂಡವಾಳ ೫೫ ಕೋಟಿ ಇದ್ದು, ಸಂಘವು ಪ್ರಸಕ್ತ ೨೦೨೨-೨೩ ಸಾಲಿನಲ್ಲಿ ಒಟ್ಟು ೧೮೭ ಕೋಟಿ ರೂ.ಗಳ ವಹಿವಾಟು ನಡೆಸುವುದರ ಮೂಲಕ ೪೬.೮೭ ಲಕ್ಷ ನಿವ್ವಳ ಲಾಭ ಗಳಿಸಿ ‘ಎ’ ಶ್ರೇಣಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಸದಸ್ಯರಿಗೆ ಈ ವರ್ಷ ಶೇ. ೧೪ ಡಿವಿಡೆಂಡ್ ನೀಡಲಾಗುವುದು. ಹಿರಿಯ ನಾಗರಿಕರಿಗೆ ಶೇ. ೮ ಹಾಗೂ ಮಾಜಿ ಸೈನಿಕರಿಗೆ ಶೇ. ೮.೧೦ ಬಡ್ಡಿ ನೀಡಲಾಗುವುದು ಎಂದು ತಿಳಿಸಿದರು.
ಸಂಘದ ವಾರ್ಷಿಕ ಮಹಾಸಭೆಯು ತಾ.೨೨ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ನಾಪೋಕ್ಲು ಕೊಡವ ಸಮಾಜದಲ್ಲಿ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಕುಂಡ್ಯೋಳAಡ ಎಂ.ಕವಿತಾ, ಚೀಯಕಪೂವಂಡ ಎನ್. ದೇವಯ್ಯ, ಚೋಕೀರ ಬಿ. ಪೂವಪ್ಪ, ಕೇಲೇಟಿರ ಬಿ. ಮುತ್ತಮ್ಮ, ಶಿವಚಾಳಿಯಂಡ ಎಂ. ಕಾರ್ಯಪ್ಪ, ಅರೆಯಡ ಎಂ. ಪೆಮ್ಮಯ್ಯ, ಹೆಚ್.ಎ. ಬೊಳ್ಳು, ಕುಂಡ್ಯೋಳAಡ ಸಿ. ಪೂವಯ್ಯ, ಚೋಕೀರ ಎಸ್. ಚಿಣ್ಣಪ್ಪ, ಟಿ.ವಿ. ಮಿಟ್ಟು, ಅಪ್ಪಚ್ಚಿರ ರೀನಾ ನಾಣಯ್ಯ, ಯನ್.ಕೆ. ಪುಷ್ಪ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಚಾಳಿಯಂಡ ಎ. ಪೂಣಚ್ಚ ಉಪಸ್ಥಿತರಿದ್ದರು.